ಉಕ್ರೇನ್ ಮೇಲಿನ ದಾಳಿಗೆ ಅಸಲಿ ಕಾರಣವೇನು? ಪುಟಿನ್ ನಡೆ ಸಮರ್ಥಿಸಿದ ರಷ್ಯಾದ ಶಾಸಕ, ಬಿಹಾರದ ಅಭಯ್ ಸಿಂಗ್!
First Published | Mar 2, 2022, 3:47 PM ISTಉಕ್ರೇನ್ ಮತ್ತು ರಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಭಾರತೀಯ ಮೂಲದ ರಷ್ಯಾ ಶಾಸಕ ಡಾ. ಅಭಯ್ ಕುಮಾರ್ ಸಿಂಗ್ ಅವರ ಹೇಳಿಕೆಯು ಹೆಚ್ಚು ಚರ್ಚೆಗೆ ಕಾರಣವಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪಕ್ಷದ ನಾಯಕ ಅಭಯ್ ಸಿಂಗ್ ಇದನ್ನು ಮಿಲಿಟರಿ ಕಾರ್ಯಾಚರಣೆ ಎಂದು ಕರೆದಿದ್ದಾರೆ. ಉಕ್ರೇನ್ ಮೇಲೆ ನಡೆಯುತ್ತಿರುವ ದಮನವನ್ನು ಅವರು 'ಸರ್ಜಿಕಲ್ ಸ್ಟ್ರೈಕ್'ಗೆ ಹೋಲಿಸಿದ್ದಾರೆ. ರಷ್ಯಾದಂತಹ ದೇಶಕ್ಕೆ ಉಕ್ರೇನ್ ವಶಪಡಿಸಿಕೊಳ್ಳುವುದು ಕೇವಲ ಒಂದು ದಿನದ ಕೆಲಸ ಎಂದು ಅಭಯ್ ಸಿಂಗ್ ಹೇಳಿದರು. ಇಡೀ ಜಗತ್ತು ಇದನ್ನು ಯುದ್ಧ ಎಂದು ಕರೆಯುತ್ತಿದೆ, ಆದರೆ ರಷ್ಯಾ ಮಾತ್ರ ಇದನ್ನು ತನ್ನ ಸೇನೆಯ ಕಾರ್ಯಾಚರಣೆ ಎಂದು ಕರೆಯುತ್ತಿದೆ. ಭಾರತ ಬಾಲಾಕೋಟ್‌ನಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದಂತೆ ಎಂದಿದ್ದಾರೆ. ಉಕ್ರೇನ್‌ನಲ್ಲಿ ಹತ್ಯೆಗೀಡಾದ ಭಾರತೀಯ ವಿದ್ಯಾರ್ಥಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇದು ಭಾರತದ ವಿರುದ್ಧ ಉಕ್ರೇನ್ ಪ್ರತೀಕಾರವಾಗಿದೆ ಎಂದಿದ್ದಾರೆ. ಡಾ.ಅಭಯ್ ಸಿಂಗ್ ಅವರ ಈ ಹೇಳಿಕೆಯ ನಂತರ, ಅವರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ಡಾ.ಅಭಯ್ ಸಿಂಗ್ ಮೂಲತಃ ಬಿಹಾರದವರು, ಆದರೀಗ ಅವರು ಪುಟಿನ್ ಸರ್ಕಾರದಲ್ಲಿ ಶಾಸಕರಾಗಿದ್ದಾರೆ.