ಕಾನೂನಿನಲ್ಲಿ ಮಹತ್ವದ 7 ಬದಲಾವಣೆ ಮಾಡಿದ UAE!

First Published Nov 7, 2020, 8:23 PM IST

ಯುನೈಟೆಡ್ ಅರಬ್ ಎಮಿರೇಟ್ಸ್(  UAE) ದೇಶದ ಕಾನೂನಿನಲ್ಲಿ ಸುಧಾರಣೆ ಮಾಡಿದೆ. ಪ್ರಮುಖವಾಗಿ ಕಾನೂನು ವ್ಯವಸ್ಥೆಯಲ್ಲಿ 7 ಬದಲಾವಣೆ ಮಾಡಲಾಗಿದೆ.   UAE ಜನರ ಜೀವನ ಮಟ್ಟ ಸುಧಾರಣೆ, ಶಾಂತಿ ಹಾಗೂ ಸುಭದ್ರತೆ ಜೀವನಕ್ಕೆ ಮಹತ್ವದ ನಿರ್ಧಾರವನ್ನು UAE ತೆಗೆದುಕೊಂಡಿದೆ. ವಿಶೇಷ ಅಂದರೆ ಬದಲಾದ ನೀತಿ ನಿಯಮಗಳು ತಕ್ಷಣದಿಂದಲೇ ಜಾರಿಯಾಗಲಿದೆ. ಹಾಗಾದರೆ UAE ತೆಗೆದುಕೊಂಡ ಕಾನೂನು ಸ್ಯವಸ್ಥೆ ಸುಧಾರಣಗಳೇನು? ಇಲ್ಲಿದೆ ವಿವರ.

ನೂತನ ನಿಯಮದ ಪ್ರಕಾರ UAEನಲ್ಲಿ ಪರವಾನಗಿ ಇಲ್ಲದೆ ಮದ್ಯಪಾನ ಮಾಡುವುದು ಹಾಗೂ ನಿರ್ದೇಶಿತ ಸ್ಥಳದಲ್ಲಿ ಮದ್ಯ ಮಾರಾಟ ಮಾಡುವುದು ನಿಯಮ ಬಾಹಿರವಲ್ಲ. ಆಲ್ಕೋಹಾವ್ ಸೇವನೆಗೆ ಕನಿಷ್ಠ 21 ವರ್ಷ ನಿಗದಿ ಮಾಡಲಾಗಿದೆ. ಇನ್ನು ಅಪ್ರಾಪ್ತರು ಮದ್ಯ ಮಾರಾಟ ಮಾಡುವನ್ನು ನಿಷೇಧಿಸಿದೆ.
undefined
ಮದುವೆಯಾಗ ಜೋಡಿಗಳು ಒಟ್ಟಿಗೆ ವಾಸಿಸುವುದು ನೂತನ ನಿಯಮದಲ್ಲಿ ಅನುವು ಮಾಡಿಕೊಡಲಾಗಿದೆ. ಇದುವರೆಗೆ ಮದುವೆಗೊ ಮೊದಲು ಅಥವಾ ಮದುವೆಯಾಗದ ಜೋಡಿ ಒಟ್ಟಿಗೆ ವಾಸಿಸುವುದು ನಿಯಮ ಉಲ್ಲಂಘನೆಯಾಗಿತ್ತು.
undefined
ಸ್ವದೇಶದಲ್ಲಿ ಮದುವೆಯಾಗಿ ಯುಎಇನಲ್ಲಿ ವಿಚ್ಚೇದನಕ್ಕೊಳಗಾಗುವದಾದರೆ ಯುಎಐ ನ್ಯಾಯಾಲಯದ ಪ್ರತಿವಿಧಿಗಳನ್ನು ಅನುಸರಿಸಬೇಕು. ಮದುವೆ ನಡೆದ ದೇಶದ ಕಾನೂನುಗಳನ್ನು ಅನ್ವಯಿಸುತ್ತದೆ.
undefined
ಮಹಿಳೆಯರಿಗೆ ಕಿರುಕುಳ, ಹಲ್ಲೆಗೆ ಕಠಿಣ ಶಿಕ್ಷೆ ಅನ್ವಯವಾಗಲಿದೆ. ಇದರಲ್ಲಿ ಮಹಿಳೆಯರ ಮೇಲೆ ರಸ್ತೆಗಳಲ್ಲಿನ ಕಿರುಕುಳವೂ ಸೇರಿದೆ.
undefined
ರೇಪ್ ಆರೋಪಿ ಅಪ್ರಾಪ್ತ ಹಾಗೂ ಮಾನಸಿಕ ಅಸ್ವಸ್ಥನಾಗಿದ್ದರೆ ಶಿಕ್ಷೆಯಿಂದ ಕೆಲ ವಿನಾಯಿತಿ ಸಿಗಲಿದೆ
undefined
ಅಪರಾಧದಲ್ಲಿ ಇನ್ನು ಮುಂದೆ ಗೌರವ ಅಪರಾಧಗಳೆಂಬ ತಾರತಮ್ಯವಿರುವುದಿಲ್ಲ. ಮಹಿಳೆ ಸಂಬಂಧಿ ಮೇಲಿನ ಪ್ರಕರಣದಲ್ಲಿ ಪುರುಷ ಸಂಬಂಧಿಗೆ ಸಿಗುವ ಕಡಿಮೆ ಶಿಕ್ಷೆಗಳು ಇನ್ನು ಮುಂದೆ ಕಠಿಣ ಶಿಕ್ಷೆಯಾಗಿ ಮಾರ್ಪಡಲಿದೆ
undefined
ಆತ್ಮಹತ್ಯೆ ಹಾಗೂ ಆತ್ಮಹತ್ಯೆ ಯತ್ನ ಪ್ರಕರಣಗಳನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಈ ಹಿಂದೆ ಆತ್ಮಹತ್ಯೆಯಿಂದ ಪಾರಾದವರು ಮುಂದಿನ ವಿಚಾರಣೆ ಹಾಗೂ ಪ್ರಕರಣದ ತನಿಖೆ ಎದುರಿಸಬೇಕಿತ್ತು.
undefined
click me!