ಇರಾನ್‌ಗೆ ಇಂದು ಕರಾಳ ರಾತ್ರಿ: ಡೊನಾಲ್ಡ್ ಟ್ರಂಪ್‌ರಿಂದ ಭೀಕರ ಯುದ್ಧದ ಮುನ್ಸೂಚನೆ, ಜಾಗತಿಕವಾಗಿ ತಲ್ಲಣ ಸೃಷ್ಟಿಸಿದ ಪೋಸ್ಟ್

Published : Jun 11, 2026, 09:38 PM IST

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ನ ದಾಳಿಗೆ ಪ್ರತಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೃಹತ್ ದಾಳಿಯ ಎಚ್ಚರಿಕೆ ನೀಡಿದ್ದಾರೆ. ಇರಾನ್‌ನ ತೈಲ ರಫ್ತು ಕೇಂದ್ರವಾದ 'ಖರ್ಗ್ ಐಲ್ಯಾಂಡ್' ಅನ್ನು ವಶಪಡಿಸಿಕೊಳ್ಳುವ ಯೋಜನೆಯನ್ನು ಟ್ರಂಪ್ ಬಹಿರಂಗಪಡಿಸಿದ್ದಾರೆ.

PREV
15
ಅಮೆರಿಕ-ಇರಾನ್ ನಡುವೆ ಚಕಮಕಿ ತೀವ್ರ

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಭೀಕರ ರೂಪ ಪಡೆದುಕೊಂಡಿದೆ. ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ ಸಹ, ಉಭಯ ದೇಶಗಳು ಮತ್ತೆ ಪರಸ್ಪರರ ಮೇಲೆ ಮಾತಿನ ದಾಳಿಗಳನ್ನು ಆರಂಭಿಸಿವೆ. ಇರಾನ್ ಬುಧವಾರದಂದು ಅಮೆರಿಕದ ಜೋರ್ಡಾನ್ ಸೇರಿದಂತೆ ಪ್ರಾದೇಶಿಕ ವ್ಯಾಪ್ತಿಯಲ್ಲಿರುವ ಸುಮಾರು 22 ಸೈನಿಕ ನೆಲೆಗಳ ಮೇಲೆ ಭೀಕರ ಡ್ರೋನ್ ಮತ್ತು ಮಿಸೈಲ್ ದಾಳಿಗಳನ್ನು ನಡೆಸಿದೆ.

25
ಡೊನಾಲ್ಡ್ ಟ್ರಂಪ್ ಭಾರೀ ಎಚ್ಚರಿಕೆ

ಇರಾನ್ ನಡೆಸಿದ ಭೀಕರ ದಾಳಿಗೆ ಪ್ರತಿಯಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವದಲ್ಲೇ ತಲ್ಲಣ ಸೃಷ್ಟಿಸುವ ದೊಡ್ಡ ಘೋಷಣೆ ಮಾಡಿದ್ದಾರೆ. ಜೂನ್ 11ರ ರಾತ್ರಿ ಅಮೆರಿಕವು ಇರಾನ್ ಮೇಲೆ ಇದುವರೆಗಿನ ಅತ್ಯಂತ ಭೀಕರ ಮತ್ತು ಬೃಹತ್ ಪ್ರಮಾಣದ ದಾಳಿಯನ್ನು ನಡೆಸಲಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ದಾಳಿಗೆ ಕೆಲವೇ ಗಂಟೆಗಳ ಮುಂಚಿತವಾಗಿ ಟ್ರಂಪ್ ಈ ಪೋಸ್ಟ್ ಹಂಚಿಕೊಂಡಿರುವುದು ಜಾಗತಿಕವಾಗಿ ಭೀತಿ ಹುಟ್ಟಿಸಿದೆ.

35
ಇರಾನ್ ಸೇನಾ ಸಾಮರ್ಥ್ಯ ನಾಶದ ಕುರಿತು ಟ್ರಂಪ್ ಹೇಳಿಕೆ

ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಮಾಹಿತಿ ನೀಡಿರುವ ಡೊನಾಲ್ಡ್ ಟ್ರಂಪ್, ಇರಾನ್ ಹೊಂದಿದ್ದ ಏರ್‌ಕ್ರಾಫ್ಟ್, ಮಿಸೈಲ್ ವ್ಯವಸ್ಥೆ, ಭೂಸೇನೆ, ನೌಕಾಸೇನೆ, ವಾಯುಪಡೆ ಮತ್ತು ರಾಡಾರ್‌ಗಳೂ ಸೇರಿದಂತೆ ಎಲ್ಲಾ ರೀತಿಯ ರಕ್ಷಣಾ ಮತ್ತು ಆಕ್ರಮಣಕಾರಿ ಸೌಲಭ್ಯಗಳು ಈಗಾಗಲೇ ಸಂಪೂರ್ಣವಾಗಿ ನಾಶವಾಗಿವೆ ಎಂದು ಪ್ರತಿಪಾದಿಸಿದ್ದಾರೆ.

45
ಇರಾನ್‌ನ 'ಖರ್ಗ್ ಐಲ್ಯಾಂಡ್' ವಶಪಡಿಸಿಕೊಳ್ಳುವ ಯೋಜನೆ

ಇರಾನ್ ರಕ್ಷಣಾ ವ್ಯವಸ್ಥೆ ದುರ್ಬಲಗೊಂಡಿರುವುದರಿಂದ ಸದ್ಯದಲ್ಲೇ ಅಮೆರಿಕವು ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ 'ಖರ್ಗ್ ಐಲ್ಯಾಂಡ್' (Kharg Island) ಅನ್ನು ತನ್ನ ವಶಕ್ಕೆ ಪಡೆಯಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ದ್ವೀಪವನ್ನು ವಶಪಡಿಸಿಕೊಂಡ ನಂತರ ಅಲ್ಲಿನ ಇಂಧನ ಉತ್ಪಾದನೆಯನ್ನು ಅಮೆರಿಕ ನಿಯಂತ್ರಿಸಲಿದ್ದು, ಕಚ್ಚಾ ತೈಲ ಮತ್ತು ಎಲ್‌ಪಿಜಿ ಗ್ಯಾಸ್‌ನ ಮಾರುಕಟ್ಟೆ ದರಗಳನ್ನು ತಾನೇ ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಅಮೆರಿಕ 'ವೆನೆಜುವೆಲಾ' ದೇಶವನ್ನು ತನ್ನ ನಿಯಂತ್ರಣಕ್ಕೆ ಪಡೆದ ಮಾದರಿಯಲ್ಲೇ ಈ ಕಾರ್ಯಾಚರಣೆ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

55
ಜಾಗತಿಕ ಆತಂಕ ಮತ್ತು ಯುದ್ಧ ಭೀತಿ

ಮತ್ತೊಂದೆಡೆ ಇರಾನ್ ಸಹ ಅಮೆರಿಕದ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಜ್ಜಾಗಿದೆ. ಈಗಾಗಲೇ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಿರುವ ಇರಾನ್, ಅಮೆರಿಕ ತನ್ನ ಆಕ್ರಮಣಕಾರಿ ನಿಲುವನ್ನು ಮುಂದುವರಿಸಿದರೆ ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಲಿದೆ ಎಂದು ಎಚ್ಚರಿಸಿದೆ. ಅಮೆರಿಕ ನಿಜವಾಗಿಯೂ ಇಂದು ಇರಾನ್ ಮೇಲೆ ಇಷ್ಟೊಂದು ದೊಡ್ಡ ದಾಳಿ ನಡೆಸಲಿದೆಯೇ ಮತ್ತು ಇದರ ಪರಿಣಾಮಗಳು ಎಷ್ಟು ಗಂಭೀರವಾಗಿರಲಿವೆ ಎಂಬ ಆತಂಕದಲ್ಲಿ ಇಡೀ ಜಗತ್ತು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories