3- ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನವನ:
ಆಗಸ್ಟ್ 6, 1945 ರಂದು, ಹಿರೋಷಿಮಾದ ಮೇಲೆ ಯುನೈಟೆಡ್ ಸ್ಟೇಟ್ಸ್ ಎಸೆದ ಪರಮಾಣು ಬಾಂಬ್ 80,000 ಕ್ಕೂ ಹೆಚ್ಚು ಜನರನ್ನು ಕೊಂದಿತು. ಈ ಬಾಂಬ್ ಸ್ಫೋಟದಲ್ಲಿ ಎಷ್ಟು ಬಿಸಿ ಇತ್ತು ಎಂದರೆ ಕ್ಷಣಾರ್ಧದಲ್ಲಿ ಜನರು ಸುಟ್ಟು ಕರಕಲಾದರು. ದಾಳಿಯಲ್ಲಿ ಸತ್ತವರ ನೆನಪಿಗಾಗಿ ಜಪಾನಿನ ಹಿರೋಷಿಮಾ ನಗರದಲ್ಲಿ ಶಾಂತಿ ಸ್ಮಾರಕ ಉದ್ಯಾನವನವನ್ನು ನಿರ್ಮಿಸಲಾಗಿದೆ. ಇದನ್ನು ನೋಡಲು ಪ್ರತಿ ವರ್ಷ ಲಕ್ಷಾಂತರ ಜನರು ಬರುತ್ತಾರೆ.