ಮೊದಲ ಮಗು ಸ್ವಾಗತಿಸಿದ ಗಾಯಕಿ Rihanna ಮತ್ತು ASAP Rocky!

Published : May 20, 2022, 04:59 PM IST

ಅಂತರಾಷ್ಟ್ರೀಯ ಗಾಯಕಿ ರಿಹಾನ್ನಾ  (Rihanna) ಮತ್ತು ಅವರ ರಾಪರ್ ಗೆಳೆಯ A$AP Rocky ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಇವರಿಬ್ಬರೂ ಈಗ ಒಂದು ಮಗುವಿಗೆ ತಂದೆ ತಾಯಿಯಾಗಿದ್ದಾರೆ. ಸೂಪರ್‌ಸ್ಟಾರ್ ಗಾಯಕಿ ಮತ್ತು ಬಿಲಿಯನೇರ್ ರಿಹಾನ್ನಾ ಲಾಸ್ ಏಂಜಲೀಸ್‌ನಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದರು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಪೇಜ್ ಸಿಕ್ಸ್ ಮಗುವಿನ ಜನನದ ಸುದ್ದಿಯನ್ನು ದೃಢಪಡಿಸಿದೆ.

PREV
15
ಮೊದಲ ಮಗು ಸ್ವಾಗತಿಸಿದ ಗಾಯಕಿ Rihanna ಮತ್ತು ASAP Rocky!

ಲಾಸ್ ಏಂಜಲೀಸ್‌ನಲ್ಲಿ ಮೇ 13 ರಂದು ಮಗು ಜನಿಸಿತು ಎಂದು TMZ ವರದಿ ಮಾಡಿದೆ. ದಂಪತಿಗಳು ತಮ್ಮ ಮಗುವಿನೊಂದಿಗೆ ಲಾಸ್ ಏಂಜಲೀಸ್‌ನಲ್ಲಿರುವ ಮನೆಯಲ್ಲಿದ್ದಾರೆ ಎಂದು ರಿಹಾನ್ನಾ ಮತ್ತು ರಾಕಿಯ ಹತ್ತಿರದ ಮೂಲವು ಮ್ಯಾಗಜೀನ್‌ಗೆ ತಿಳಿಸಿದೆ.

25
rihanna baby bump

ಗ್ರ್ಯಾಮಿ ಪ್ರಶಸ್ತಿ ವಿಜೇತೆಯ ಪ್ರೆಗ್ನೆಂಸಿ ವಿಷಯ  ಜನವರಿ ಅಂತ್ಯದಲ್ಲಿ ಬೆಳಕಿಗೆ ಬಂದಿತು. ರಿಹಾನ್ನಾ ಅವರ  ಪ್ರೆಗ್ನೆಂಸಿ ಸಮಯದ   ಫ್ಯಾಶನ್ ಸೆನ್ಸ್‌ ಸಖತ್‌ ಸುದ್ದಿ ಮಾಡಿತ್ತು  ಮೇ ತಿಂಗಳಲ್ಲಿ, ವೋಗ್  ಕವರ್ ಪೇಜ್‌ ಬೇಬಿ ಬಂಪ್ ಅನ್ನು ತೋರಿಸುತ್ತಿರುವ ಗಾಯಕಿಯ ಫೋಟೋ  ಒಳಗೊಂಡಿತ್ತು. 
 

35

ನಿಯತಕಾಲಿಕದಲ್ಲಿ ಆಕೆಯ ಗರ್ಭಧಾರಣೆ ಮತ್ತು ಫ್ಯಾಷನ್ ಬಗ್ಗೆ ಸಾಕಷ್ಟು ಚರ್ಚೆಗಳನ್ನು ಬರೆಯಲಾಗಿದೆ. ರಿಹಾನ್ನಾ ಫ್ಯಾಷನ್‌ನಲ್ಲಿ ಕೆಲವು ಆಳವಾದ ಬದಲಾವಣೆಗಳನ್ನು ಮಾಡಿದ್ದಾರೆ ಎಂದು ಅದರಲ್ಲಿ ಬರೆಯಲಾಗಿದೆ. ನನ್ನ ದೇಹವು ಇದೀಗ ನಂಬಲಾಗದ ಕೆಲಸಗಳನ್ನು ಮಾಡುತ್ತಿದೆ ಮತ್ತು ನಾನು ಅದರ ಬಗ್ಗೆ ನಾಚಿಕೆಪಡುವುದಿಲ್ಲ ಎಂದು ಅವರು ಹೇಳಿದರು. 

45
Image Credit: Rihanna Instagram

ರಿಹಾನ್ನಾ ತನ್ನ ಪ್ರೆಗ್ನೆಂಸಿ ಹಂತದಲ್ಲಿಯೂ ಫ್ಯಾಷನ್ ಬಗ್ಗೆ ಸಂಪೂರ್ಣ ಗಮನ ಹರಿಸಿದರು ಮತ್ತು ಒಂದಕ್ಕಿಂತ ಹೆಚ್ಚು ಲುಕ್‌ನಲ್ಲಿ ಕಾಣಿಸಿಕೊಂಡರು.ಅವರ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದವು.

55
Image Credit: Getty Images

ರಿಹಾನ್ನಾ ಮತ್ತು ರಾಕಿ 2020 ರ ಆರಂಭದಿಂದಲೂ ಡೇಟಿಂಗ್ ಮಾಡುತ್ತಿದ್ದಾರೆ. ಪೇಜ್ ಸಿಕ್ಸ್ ಪ್ರಕಾರ, ಏಪ್ರಿಲ್ 2022 ರಲ್ಲಿ, ರಾಪರ್ ಅವರಿಗೆ ಮೋಸ ಮಾಡಿದ ವದಂತಿಗಳು ಇದ್ದವು, ಆದರೆ ನಂತರ ಅದು ಸುಳ್ಳು ಎಂದು ಕಂಡುಬಂದಿದೆ.  

click me!

Recommended Stories