ಕೊರೋನಾತಂಕ: ಶವ ವಿಲೇವಾರಿಗಿಲ್ಲ ವ್ಯವಸ್ಥೆ, ಕಸದ ಬ್ಯಾಗ್‌ನಲ್ಲೇ ಹೆಣ ಮುಚ್ಚಿಡುತ್ತಿದ್ದಾರೆ!

Published : Jun 28, 2020, 04:01 PM ISTUpdated : Jun 28, 2020, 05:37 PM IST

ವಿಶ್ವಾದ್ಯಂತ ಕೊರೋನಾ ರುದ್ರನರ್ತನ ಆರಂಭಿಸಿದೆ. ಚೀನಾದ ವುಹಾನ್‌ನಿಂದ ಹಬ್ಬಿದ ಈ ಕಣ್ಣಿಗೆ ಕಾಣದ ವೈರಸ್ ಬಹುತೇಕ ಎಲ್ಲಾ ರಾಷ್ಟ್ರಗಳಿಗೂ ವ್ಯಾಪಿಸಿದೆ. ಜಗತ್ತಿನಾದ್ಯಂತ ಈ ವೈರಸ್‌ ತಗುಲಿದವರ ಸಂಖ್ಯೆ ಒಂದು ಕೋಟಿ ದಾಟಿದೆ. ಈ ವೈರಸ್ ಅನೆಕ ರಾಷ್ಟ್ರಗಳಲ್ಲಿ ಅಪಾರ ಸಾವು ನೋವು ಉಂಟು ಮಾಡಿದೆ. ಇದರಲ್ಲಿ ಬ್ರೆಜಿಲ್ ಕೂಡಾ ಒಂದು. ಇಲ್ಲಿ ಸಾವಿನ ಸಂಖ್ಯೆ ಅದೆಷ್ಟು ಹೆಚ್ಚಿದೆ ಎಂದರೆ ಶವಗಳನ್ನು ಕಸದ ಬ್ಯಾಗ್‌ನಲ್ಲಿ ತುಂಬಿಸಿಡುತ್ತಿದ್ದಾರೆ. ಇತ್ತೀಚೆಗಷ್ಟೇ ರಿಯೋ ನರ್ಸ್‌ಸ್ ಯೂನಿಯನ್ ಕರೆಲ ಫೋಟೋಗಳನ್ನು ಸೇರ್ ಮಾಡಿಕೊಂಡಿದ್ದರು. ಇದರಲ್ಲಿ ಆಸ್ಪತ್ರೆ ಒಳ ಹಾಗೂ ಹೊರ ಭಾಗದಲ್ಲಿ ಶವಗಳನ್ನು ಗಾರ್ಬೆಜ್‌ ಬ್ಯಾಗ್‌ನಲ್ಲಿ ತುಂಬಿಸಿಟಟ್ಟಿರುವ ದೃಶ್ಯಗಳಿದ್ದವು. 

PREV
19
ಕೊರೋನಾತಂಕ: ಶವ ವಿಲೇವಾರಿಗಿಲ್ಲ ವ್ಯವಸ್ಥೆ, ಕಸದ ಬ್ಯಾಗ್‌ನಲ್ಲೇ ಹೆಣ ಮುಚ್ಚಿಡುತ್ತಿದ್ದಾರೆ!

ಬ್ರೆಜಿಲ್‌ನಲ್ಲಿ  ಕೊರೋನಾ ಸೃಷ್ಟಿಸಿರುವ ಅನಾಹುತವನ್ನು ಕೆಲ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಬಹಿರಂಗಪಡಿಸಿವೆ. ಇಲ್ಲಿ ಸೋಂಕಿತರ ಶವವನ್ನು ಕಸ ತುಂಬಿಸಿಡುವ ಬ್ಯಾಗ್‌ನಲ್ಲಿ ಹಾಕಲಾಗುತ್ತಿದೆ. ಅಲ್ಲದೇ ಇದನ್ನು ರೋಗಿಗಳ ಬಳಿಯೇ ಇರಿಸಲಾಗುತ್ತಿದೆ. ಈ ಫೋಟೋ ರಿಯೋ ದಿ ಜೆನಿರಿಯೋದ್ದಾಗಿದೆ. 

29

ರಿಯೋ ಯೂನಿಯನ್ ನರ್ಸಸ್‌ ಈ ಫೋಟೋವನ್ನು ಕ್ಲಿಕ್ ಮಾಡಿದ್ದರು. ಇಲ್ಲಿ ಕಸದಂತೆ ಶವಗಳನ್ನು ಎಸೆಯುತ್ತಿರುವುದು ಸ್ಪಷ್ಟವಾಗಿದೆ.

39

ಈ ದೇಶದಲ್ಲಿ ಸ್ಮಶಾನಗಳೂ ತುಂಬಿವೆ. ಹೀಗಾಗಿ ಆಸ್ಪತ್ರೆ ಹೊರಗೆ ಶವಗಳನ್ನು ತುಂಬಿಡಲಾಗುತ್ತಿದೆ. ಒಂದೊಂದು ಕಂಟೈನರ್‌ನಲ್ಲಿ 75 ಶವಗಳನ್ನು ಸಂರಕ್ಷಿಸಿಡಲಾಗುತ್ತಿದೆ.

49

ಬ್ರೆಜಿಲ್‌ನಲ್ಲಿ ಈವರೆಗೆ 52 ಸಾವಿರ ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಜೊತೆಗೆ ಇಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷದ 10 ಸಾವಿರ ದಾಟಿದೆ. ಅಮೆರಿಕಾ ಬಳಿಕ ಅತ್ಯಧಿಕ ಕೊರೋನಾ ಸೋಂಕಿತರಿರುವ ರಾಷ್ಟ್ರ ಇದಾಗಿದೆ.

59

ಇಲ್ಲಿ ಕೊರೋನಾ ತಾಂಡವ ಅದೆಷ್ಟು ಕೆಟ್ಟ ಪರಿಸ್ಥಿತಿ ನಿರ್ಮಿಸಿದೆ ಎಂದರೆ ಶವಗಳನ್ನು ಅಲ್ಲಲ್ಲಿ ಎಸೆಯಲಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಜನರು ತಮ್ಮ ಕುಟುಂಬದವರ ಶವವನ್ನು ರಸ್ತೆ ಬದಿಯಲ್ಲಿ ಎಸೆಯುತ್ತಿರುವ ಫೊಟೋಗಳೂ ವೈರಲ್ ಆಗಿದ್ದವು.

69

ಇಷ್ಟೇ ಅಲ್ಲದೇ ಇಲ್ಲಿನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ನರ್ಸ್‌ಗಳು ಆಸ್ಪತ್ರೆ ಕಾರಿಡಾರ್‌ನಲ್ಲೇ ಮಲಗಿ ವಿಶ್ರಾಂತಿ ಪಡೆಯುತ್ತಿರುವ ವಿಡಿಯೋ ಕೂಡಾ ವೈರಲ್ ಆಗಿತ್ತು.

79

ಬ್ರೆಜಿಲ್‌ನಲ್ಲಿ ಅತ್ಯಂತ ಕಡಿಮೆ ಟೆಸ್ಟ್ ಮಾಡಲಾಗಿದೆ ಎಂಬುವುದು ತಜ್ಞರ ಅಭಿಪ್ರಾಯ. ಹೀಗಾಗಿ ಈವರೆಗೆ ಎಷ್ಟು ಅಂಕಿ ಅಂಶಗಳು ಬಂದಿವೆಯೋ ಅದು ಅತ್ಯಂತ ಕಡಿಮೆ. ವಾಸ್ತವವಾಗಿ ಇಲ್ಲಿ ಇನ್ನೂ ಅಧಿಕ ಸೋಂಕಿತರಿರಬಹುದು ಎಂದು ಅಂದಾಜಿಸಿದ್ದಾರೆ. 

89

ಅತ್ತ ಬ್ರೆಜಿಲ್ ಅಧ್ಯಕ್ಷ ಕೂಡಾ ಕೈಚೆಲ್ಲಿದ್ದಾರೆ. ದೇಶದ ಜನರು ಕೊರೋನಾವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುವುದು ಅವರ ವಾದವಾಗಿದೆ.

99

ಲಾಕ್‌ಡೌನ್ ಹೇರಿದ್ದರೂ ಜನ ಗಂಭೀರವಾಗಿಲ್ಲ. ಜನರು ಯಾವಾಗದವರೆಗೆ ಈ ಬಗ್ಗೆ ಜಾಗೃತರಾಗುವುದಿಲ್ಲವೋ ಅಲ್ಲಿಯವರೆಗೆ ಮೃತರ ಸಂಖ್ಯೆ ಹೆಚ್ಚಲಿದೆ ಎಂದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories