ಎನರ್ಜಿ ಡ್ರಿಂಕ್ಸ್‌ಗೆ ಅಡಿಕ್ಟ್ ಆಗಿದ್ದ ಮಾಷಾ
ಸ್ವಿಟ್ಜರ್‌ಲ್ಯಾಂಡ್‌ನ ಜ್ಯೂರಿಚ್‌ನ ಮಾಷಾ(Mascha from Zurich) ಕೆಫಿನ್‌ಯುಕ್ತ ಪಾನೀಯದೊಂದಿಗೆ ತನ್ನ ದಿನವನ್ನು ಆರಂಭಿಸುತ್ತಿದ್ದಳು. ಅಲ್ಲದೇ ಆಕೆ ಈ ಎನರ್ಜಿ ಡ್ರಿಂಕ್ಸ್(Energy Drinks) ಗೆ ಒಂದು ರೀತಿ ಅಡಿಕ್ಟ್ ಆಗಿದ್ದಳು.
ಮಾಷಾಳನ್ನು ಆಸ್ಪತ್ರೆಗೆ ದಾಖಲಿಸಬೇಕಾಯ್ತು
ಮಾಷಾ ಈ ಬಗ್ಗೆ ಮಾಹಿತಿ ನೀಡಿದ್ದು, ಒಂದು ಎನರ್ಜಿ ಡ್ರಿಂಕ್(Energy Drinks) ಮತ್ತು ಸಿಗರೇಟ್ ಜೊತೆಗೆ ನನ್ನ ದಿನ ಆರಂಭವಾಗುತ್ತಿತ್ತು. ನಂತರ ಪ್ರತಿ ವಿರಾಮದ ಸಮಯದಲ್ಲಿ, ಕೆಲಸದ ನಂತರ ಮತ್ತು ಸಂಜೆ, ತನ್ನ ಸ್ನೇಹಿತರೊಂದಿಗೆ ಎನರ್ಜಿ ಡ್ರಿಂಕ್(Energy Drinks) ಸೇವಿಸುತ್ತಿದ್ದೆ ಎಂದಿದ್ದಾರೆ. ಮಾಷಾ ಪ್ರತಿದಿನ ಎರಡು ಡಜನ್ ಗಿಂತ ಹೆಚ್ಚು ಕಬ್ಬಿನ ರನರ್ಜಿ ಡ್ರಿಂಕ್ ಸೇವಿಸುತ್ತಿದ್ದೆ ಎಂದು ವೈದ್ಯರಿಗೆ ತಿಳಿಸಿದ್ದಾರೆ. ಇದನ್ನು ಕೇಳಿದ ವೈದ್ಯರೇ ಆಶ್ಚರ್ಯಚಕಿತರಾಗಿದ್ದಾರೆ.
17 ವರ್ಷದ ಮಾಷಾಗೆ ತರಬೇತಿ ಶಾಲೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಾಗ ಈ ಪಾನೀಯದಿಂದಾಗುವ ಅಪಾಯದ ಬಗ್ಗೆ ಅರಿವಾಗಿದೆ. ಬೀಳುವ ಮುನ್ನ ಆಕೆಗೆ ಎದೆಯಲ್ಲಿ ಭಾರೀ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಯ ಹಾಸಿಗೆಯಲ್ಲಿ ಮೇಲೆ ಮಲಗಿರುವ ತನ್ನ ಚಿತ್ರವನ್ನು ಪೋಸ್ಟ್ ಮಾಡಿರುವ ಮಾಷಾ, ಎನರ್ಜಿ ಡ್ರಿಂಕ್ಸ್ ಚಟ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಮಾಷಾ ಸ್ವತಃ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾಳೆ, ಹೀಗಿರುವಾಗ ಒಂದು ದಿನ ಆಕೆ ಇದ್ದಕ್ಕಿದ್ದಂತೆ ಪ್ರಜ್ಞಾಹೀನಳಾಗಿದ್ದಾಳೆ. ಆಕೆಯ ಸ್ನೇಹಿತ ಟ್ಯಾಕ್ಸ್ಇ ಕರೆಸಿ, ಆಕೆಯನ್ನು ವಿಂಟರ್ತೂರ್ ಕ್ಯಾಂಟೋನಲ್ ಆಸ್ಪತ್ರೆಗೆ(Winterthur Cantonal Hospital) ದಾಖಲಿಸಿದ್ದಾನೆ.
ಮಾಧ್ಯಮ ವರದಿಗಳ ಪ್ರಕಾರ, ಆಕೆಗೆ ಎನರ್ಜಿ ಡ್ರಿಂಕ್ಸ್ ಚಟವಿತ್ತು ಎನ್ನಲಾಗಿದೆ. ಇನ್ನು ಆಕೆಯನ್ನು ಪರಿಶೀಲಿಸಿ ಚಿಕಿತ್ಸೆ ನಿಡಿರುವ ವೈದ್ಯರು ಎನರ್ಜಿ ಡ್ರಿಂಕ್ಸ್ ಸೇವಿಸುವುದನ್ನು ನಿಲ್ಲಿಸದಿದ್ದರೆ ಕೆಲ ದಿನಗಳ ಬಳಿಕ ಮತ್ತೆ ಆಸ್ಪತ್ರೆಗೆ ಬರಬೇಕಾಗಬಹುದು ವೈದ್ಯರು ಎಚ್ಚರಿಸಿದ್ದಾರೆ.
ಇನ್ನು ಮಾಷಾ ತನ್ನ ಆರೋಗ್ಯ ಹದಗೆಟ್ಟಿದ್ದರಿಂದ ಎನರ್ಜಿ ಡ್ರಿಂಕ್ಸ್ ಕುಡಿಯುವುದನ್ನು ನಿಲ್ಲಿಸಿದ್ದೇನೆ, ಇದರಿಂದ ಆರೋಗ್ಯವೂ ಸುಧಾರಿಸಿದೆ ಎಂದಿದ್ದಾರೆ. ಎನರ್ಜಿ ಡ್ರಿಂಕ್ಸ್‌ಗಳಲ್ಲಿ ಕೆಫೀನ್ ಅಧಿಕವಾಗಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಹೆಚ್ಚಿನ ಪ್ರಮಾಣದ ಕೆಫೀನ್ ಅನಾರೋಗ್ಯ ಸೃಷ್ಟಿಸುತ್ತದೆ, ನಿದ್ದೆಗೆ ಸಂಬಮಧಿಸಿದ ಸಮಸ್ಯೆಗಳಿಗೆ ಹಾದಿ ಮಾಡಿಕೊಡುತ್ತದೆ ಎಂದಿದ್ದಾರೆ.