ಕಂದನ ಮೆದುಳು ತಿಂದಾಕಿದ ಹುಳಗಳು, ಸಾವಿನ ಬಳಿಕ ಪತ್ತೆಯಾಯ್ತು 'ಪಾರ್ಕ್' ರಹಸ್ಯ!

First Published Sep 29, 2021, 1:41 PM IST

ಅಮೆರಿಕದ ಟೆಕ್ಸಾಸ್ ನಲ್ಲಿ ಆಘಾತಕಾರಿ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ಪ್ರತಿಯೊಬ್ಬ ಮಗುವಿಗೂ ಸಂಬಂಧಪಟ್ಟಿದ್ದು, ಸಾವು ಬದುಕಿನ ವಿಚಾರವಾಗಿದೆ. ಹೌದು ಒಂದು ಅಸಡ್ಡೆಭರಿತ ಹೆಜ್ಜೆ ನಿಮ್ಮ ಮಗುವಿನ ಜೀವಕ್ಕೆ ಸಂಚಾಕಾರವಾಗಬಹುದು. ಹೌದು ಪಾರ್ಕ್‌ಗೆ ಆಟವಾಡಲು ತೆರಳುತ್ತಿದ್ದ ಮಗುವಿಗೆ ಕೀಟಗಳೇ ಮಾರಕವಾಗಿದೆ. ನೋಡ ನೋಡುತ್ತಿದ್ದಂತೆಯೇ ಅವುಗಳು ಕಂದನ ಮೆದುಳಿಗೆ ಹೊಕ್ಕಿ ಅದರ ಜೀವವನ್ನೇ ತೆಗೆದುಹಾಕಿವೆ.
 

ಈ ಘಟನೆ ನಡೆದಿದ್ದು, ಟೆಕ್ಸಾಸ್‌ನಲ್ಲಿ. ಇಲ್ಲಿ ಸ್ಪ್ಲಾಶ್ ಪ್ಯಾಡ್ ನಿಂದಾಗಿ, ಮಗು ಅಮೀಬಾ(Amoeba) ತಿನ್ನುವ ಮೆದುಳಿನ ಸಂಪರ್ಕಕ್ಕೆ ಬಂದಿದೆ. ಇದಾದ ಕೇವಲ 6 ದಿನಗಳಲ್ಲಿ ಮಗು ಸಾವನ್ನಪ್ಪಿದೆ. ಅಮೀಬಾ ಮೂಗು ಅಥವಾ ಬಾಯಿಯ ಮೂಲಕ ದೇಹವನ್ನು ಪ್ರವೇಶಿಸಿದರೆ ಮಾರಕವಾಗಬಹುದು. ಶೇ. 95ರಷ್ಟು ಅಮೀಬಾ ಸೋಂಕಿತ ಜನರು ಸಾಯುತ್ತಾರೆ.


ಅಮೀಬಾ (naegleria fowleri ameba) ಅನ್ನು ಮಣ್ಣು, ಬಿಸಿ ಕೆರೆ, ಜಲಪಾತ ಅಥವಾ ನದಿಯಲ್ಲಿ ಕಾಣಬಹುದು. ಅಲ್ಲದೇ ಈ ಮೆದುಳು ತಿನ್ನುವ ಅಮೀಬಾ ಈಜುಕೊಳಗಳಲ್ಲಿಯೂ ಕಾಣುತ್ತವೆ. 2009 ರಿಂದ 2018 ರವರೆಗೆ, ಅಮೆರಿಕದಲ್ಲಿ 34 ಅಮೀಬಾ (ನ್ಯೆಗ್ಲೇರಿಯಾ ಫೌಲೇರಿ ಸೋಂಕು) ಪ್ರಕರಣಗಳು ಕಂಡುಬಂದಿವೆ.
 


ಆರ್ಮಿಂಗ್ಟನ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನಿಡಿದ್ದು ಸೆಪ್ಟೆಂಬರ್ 5 ರಂದು ನಗರ ಮತ್ತು ಟ್ಯಾರಂಟ್ ಕೌಂಟಿ ಸಾರ್ವಜನಿಕ ಆರೋಗ್ಯಕ್ಕೆ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಿದ್ದಾರೆ

ಆರ್ಮಿಂಗ್ಟನ್ ಅಧಿಕಾರಿಗಳು ಸೆಪ್ಟೆಂಬರ್ 5 ರಂದು ನಗರ ಮತ್ತು ಟ್ಯಾರಂಟ್ ಕೌಂಟಿ ಸಾರ್ವಜನಿಕ ಆರೋಗ್ಯಕ್ಕೆ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
 

ಡೆಪ್ಯೂಟಿ ಸಿಟಿ ಮ್ಯಾನೇಜರ್ ಲೆಮುಯೆಲ್ ರಾಂಡೋಲ್ಫ್, "ನೀರಿಗೆ ಸಂಬಂಧಿಸಿದ ದೈನಂದಿನ ನೈರ್ಮಲ್ಯದ ಕೊರತೆಯಿದೆ. ನಾವು ನಿರ್ವಹಣಾ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಸನ್ ವರದಿಯ ಪ್ರಕಾರ, ಕಲುಷಿತ ನೀರು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಜನರು ಸಾಮಾನ್ಯವಾಗಿ ಸೋಂಕಿಗೆ ಒಳಗಾಗುತ್ತಾರೆ ಎನ್ನಲಾಗಿದೆ.
 

ನೀವು ಕೊಳಕು ನೀರಿನ ಸಂಪರ್ಕಕ್ಕೆ ಬಂದಾಗ ಮಾತ್ರ ಅಮೀಬಾ ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಕೊಳಕು ನೀರು ನಿಮ್ಮ ದೇಹದೊಳಗೆ ಹೋದರೆ ಅದು ಸೋಂಕಿಗೆ ಕಾರಣವಾಗಬಹುದು. ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಅದಕ್ಕಾಗಿಯೇ ನಿಮ್ಮ ಮಗು ಹೋಗುವ ಉದ್ಯಾನದಲ್ಲಿ ನೀರು ಇದ್ದರೆ, ಅದು ಸ್ವಚ್ಛವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸುವುದು ಮುಖ್ಯವಾಗಿದೆ.

click me!