ಅಮೆರಿಕದಲ್ಲಿ ಉಳಿದುಕೊಳ್ಳಲು 204 ವರ್ಷ ಹಳೇ ಹೋಟೆಲ್‌ ಆಯ್ಕೆ ಮಾಡಿದ್ದೇಕೆ ಪಿಎಂ?

First Published Sep 24, 2021, 12:48 PM IST

ಪ್ರಧಾನಿ ನರೇಂದ್ರ ಮೋದಿ(Narendra Modi) ಅಮೆರಿಕ ಪ್ರವಾಸದಲ್ಲಿದ್ದು, ಇಲ್ಲಿ ನಡೆಯಲಿರುವ ಕ್ವಾಡ್ ಮತ್ತು ಯುಎನ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೋ ಬೈಡೆನ್(Joe Biden) ಅಮೆರಿಕ ಅಧ್ಯಕ್ಷರಾದ ನಂತರ ಪ್ರಧಾನಿ ಮೋದಿ ಮೊದಲ ಬಾರಿ ಅಮೆರಿಕಕ್ಕೆ ಬಂದಿದ್ದಾರೆ. ಪಿಎಂ ಮೋದಿಯವರ ಈ ಭೇಟಿ ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿವೆ. ಹೀಗಿರುವಾಗ ಪಿಎಂ ಮೋದಿಯ ಕೆಲ ಚಟುವಟಿಕೆಗಳ ಬಗ್ಗೆ ಕೆಲ ಮಾಹಿತಿ.

ಪಿಎಂ ಮೋದಿ ಅಮೆರಿಕದ ವಾಷಿಂಗ್ಟನ್‌ನ  ಅತ್ಯಂತ ಪ್ರಸಿದ್ಧ ಹಾಗೂ 204 ವರ್ಷಗಳ ಹಳೆಯ ಬಿಲ್ಲಾರ್ಡ್ ಹೋಟೆಲ್‌ನಲ್ಲಿ(Billard Hotel) ತಂಗಿದ್ದಾರೆ. ಈ ಹೋಟೆಲ್ ಅನ್ನು 1816rಲ್ಲಿ ನಿರ್ಮಿಸಲಾಯಿತು. ತದನಂತರ ಅದರಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇಂದು ಈ ಹೋಟೆಲ್ ವಿಶ್ವದ ಆಯ್ದ ಹೋಟೆಲ್‌ಗಳಲ್ಲಿ ಒಂದಾಗಿದೆ.

ಬಿಲ್ಲಾರ್ಡ್ ಹೋಟೆಲ್ ಒಳಭಾಗವು ಅಮೆರಿಕನ್ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಈ ಹೋಟೆಲ್ ನಲ್ಲಿ ಎಲ್ಲೆಡೆ ಕಲೆ ಮತ್ತು ಕಲಾತ್ಮಕ ದೃಶ್ಯಾವಳಿಗಳು ಕಾಣಸಿಗುತ್ತವೆ. ಈ ಹೋಟೆಲ್‌ನ ಯಾವ ಕೊಠಡಿಯೂ ಖಾಲಿಯಾಗಿಲ್ಲ. ಅದರಲ್ಲಿ ಉಳಿಯಲು ನೀವು ತಿಂಗಳ ಮುಂಚಿತವಾಗಿ ಬುಕ್ ಮಾಡಬೇಕು. ಬಿಲ್ಲಾರ್ಡ್ ಹೋಟೆಲ್‌ನಲ್ಲಿ 9 ಸೂಟ್‌ಗಳಿವೆ. ಇವುಗಳಲ್ಲಿ, 5 ಯಾವಾಗಲೂ ಕೆಲ ದೇಶದ ಮುಖ್ಯಸ್ಥರಿಗಾಗಿ ಬುಕ್ ಮಾಡಲಾಗುತ್ತದೆ. ಅಬ್ರಹಾಂ ಲಿಂಕನ್ ಮತ್ತು ಜಾರ್ಜ್ ವಾಷಿಂಗ್ಟನ್‌ನ ಸೂಟ್‌ಗಳು ಕೂಡ ಈ ಹೋಟೆಲ್‌ನಲ್ಲಿವೆ.

ಬಿಲ್ಲಾರ್ಡ್ ಹೋಟೆಲ್‌ನ ಭದ್ರತೆಯು ಹಕ್ಕಿಯನ್ನು ಕೂಡ ಇಲ್ಲಿ ಕೊಲ್ಲಲು ಸಾಧ್ಯವಿಲ್ಲ. ಹೋಟೆಲ್‌ನ ಭದ್ರತೆಗಾಗಿ ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ. ಅಂತಹ ಭದ್ರತೆಯ ಹೊರತಾಗಿ, ಯಾವುದೇ ಸಭೆ ನಡೆಯುವುದಿದ್ದರೂ, ಅದು ಆರಂಭವಾಗುವ ಗಂಟೆಗಳ ಮೊದಲು ಆ ಪ್ರದೇಶವನ್ನು ಸೀಲ್ ಮಾಡಲಾಗುತ್ತದೆ. ಸಭೆಯ ಮೊದಲು, ಸಂಪೂರ್ಣ ಆವರಣ ಶ್ವಾನದಳ ಪರಿಶೀಲಿಸುತ್ತದೆ. 

ಪಿಎಂ ನರೇಂದ್ರ ಮೋದಿ ಮತ್ತು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಐಸೆನ್ಹೋವರ್ ಕಾರ್ಯನಿರ್ವಾಹಕ ಕಚೇರಿ ಕಟ್ಟಡದಲ್ಲಿ ಭೇಟಿಯಾದ ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಪಿಎಂ ನರೇಂದ್ರ ಮೋದಿ ಮತ್ತು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ಸಭೆಯಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಪಿಎಂ ಮೋದಿಯವರೊಂದಿಗೆ ಭಾರತೀಯ ನಿಯೋಗವು ಭಾಗವಹಿಸಿತ್ತು.
 

ಪಿಎಂ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್

ಇದಕ್ಕೂ ಮುನ್ನ, ಪ್ರಧಾನಿ ಮೋದಿ ಗುರುವಾರ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರನ್ನು ಭೇಟಿ ಮಾಡಿದರು. ಈ ಸಭೆ ಈ ಬಿಲ್ಲಾರ್ಡ್ ಹೋಟೆಲ್ ನಲ್ಲಿ ನಡೆಯಿತು. ಇಬ್ಬರೂ ಪ್ರಧಾನ ಮಂತ್ರಿಗಳು ಆರ್ಥಿಕ ಸಂಬಂಧಗಳ ಹೊರತಾಗಿ ಪರಸ್ಪರ ಸಂಬಂಧಗಳನ್ನು ಸುಧಾರಿಸುವ ಬಗ್ಗೆ ಒತ್ತು ನೀಡಿದ್ದಾರೆ.

ಪಿಎಂ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಯೋಶಿಹಿದೇ ಸುಗಾ

ಪ್ರಧಾನಿ ಮೋದಿ ಜಪಾನ್ ಪ್ರಧಾನಿಯನ್ನೂ ಭೇಟಿ ಮಾಡಿದ್ದಾರೆ. ಪಿಎಂ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಇಂದು ಭೇಟಿಯಾದರು. ಈ ವೇಳೆ ಇಂಡೋ-ಪೆಸಿಫಿಕ್, ಪ್ರಾದೇಶಿಕ ಅಭಿವೃದ್ಧಿ, ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ, ವ್ಯಾಪಾರ, ಡಿಜಿಟಲ್ ಆರ್ಥಿಕತೆ ಮತ್ತು P2P ಸಂಬಂಧಗಳಂತಹ ಪ್ರಮುಖ ವಿಷಯಗಳ ಕುರಿತು ಭಾರತವು ಜಪಾನ್‌ನೊಂದಿಗೆ ಚರ್ಚೆಗಳನ್ನು ನಡೆಸಿದೆ.

click me!