ಫೈಜರ್ ಲಸಿಕೆ ತೆಗೆದುಕೊಂಡ ಒಂದೇ ವಾರಕ್ಕೆ ನರ್ಸ್‌ಗೆ ಕೊರೋನಾ ಪಾಸಿಟೀವ್!

First Published | Dec 30, 2020, 5:25 PM IST

ಕೊರೋನಾ ವೈರಸ್ ವಿರುದ್ಧ ಹೋರಾಡಬಲ್ಲ, ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಲ್ಲ ಲಸಿಕೆಗೆ ಭಾರತ ಸೇರಿದಂತೆ ಹಲವು ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಇದೀಗ ಕೊರೋನಾ ಲಸಿಕೆ ಪಡೆದ ಒಂದೇ ವಾರಕ್ಕೆ ನರ್ಸ್ ಒಬ್ಬರಿಗೆ ಕೊರೋನಾ ವಕ್ಕರಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಕೊರೋನಾ ವೈರಸ್ ನಿಯಂತ್ರಿಸಲು ಲಸಿಕೆಯೊಂದೇ ಮಾರ್ಗ ಎಂದು ಎಲ್ಲಾ ದೇಶಗಳು ವ್ಯಾಕ್ಸಿನ್‌ಗಾಗಿ ಕಾಯುತ್ತಿದೆ. ಹಲವು ದೇಶಗಳು ಲಸಿಕೆ ತುರ್ತು ಬಳಕಗೆ ಅನುಮತಿ ನೀಡಿದೆ.
ಆದರೆ ಇದೇ ಕೊರೋನಾ ಲಸಿಕೆ ಹಾಕಿಸಿಕೊಂಡ ಒಂದೇ ವಾರಕ್ಕೆ ಕೊರೋನಾ ವಕ್ಕರಿಸಿದ ಘಟನೆ ನಡೆದಿದ. ಅದೂ ಕೂಡ ನರ್ಸ್ ಒಬ್ಬರಿಗೆ ಲಸಿಕೆ ತೆಗೆದುಕೊಂಡ ಬಳಿಕ ಕೊರೋನಾ ಖಚಿಗೊಂಡಿದೆ
Tap to resize

ಈ ಘಟನೆ ನಡೆದಿರುವುದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ. ಸ್ಥಳೀಯ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ 45 ವರ್ಷದ ಮ್ಯಾಥ್ಯೂ ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಫೈಜರ್ ಕೊರೋನಾ ಲಸಿಕೆ ಪಡೆದ 6 ದಿನಗಳ ಬಳಿಕ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು. ಹೀಗಾಗಿ ಪರೀಕ್ಷೆ ಮಾಡಿಸಿದಾಗ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ರೀತಿ ಘಟನೆಯಲ್ಲಿ ಅಚ್ಚರಿಯಿಲ್ಲ. ಲಸಿಕೆ ದೇಹದಲ್ಲಿ ಕೊರೋನಾ ವಿರುದ್ಧ ಹೋರಾಡಪಲ್ಲ ರೋಗನಿರೋಧ ಶಕ್ತಿ ಬೆಳೆಸಲು ಕನಿಷ್ಠ 10 ರಿಂದ 14 ದಿನಗಳ ಅವಶ್ಯಕತೆ ಇದೆ ಎಂದು ಹೆಲ್ತ್ ಸೆಂಟರ್ ವೈದ್ಯ ಕ್ರಿಶ್ಚಿಯನ್ ರ್ಯಾಮರ್ಸ್ ಹೇಳಿದ್ದಾರೆ.
ಮೊದಲ ಡೋಸ್‌ನಲ್ಲೇ ಶೇಕಡಾ 50 ರಷ್ಟು ರೋಗ ನಿರೋಧಶಕ ಶಕ್ತಿ ವೃದ್ಧಿಸಲಿದೆ. ಇನ್ನು ಎರಡನೇ ಡೋಸ್‌ನಲ್ಲಿ ಶೇಕಡಾ 95 ರಷ್ಟು ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ ಎಂದು ಕ್ರಿಶ್ಚಿಯನ್ ಹೇಳಿದ್ದಾರೆ.
ಲಸಿಕೆ ಬಳಿಕ ಕೊರೋನಾ ವಕ್ಕರಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೊರೋನಾಗೆ ಲಸಿಕೆಯೊಂದೇ ಪರಿಹಾರವಲ್ಲ ಎಂದಿತ್ತು.
ಲಸಿಕೆ ಜೊತಗೆ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಸೇರಿದಂತೆ ಕೊರೋನಾಗೆ ತಡೆಯಲು ನೀಡಿರುವ ಮಾರ್ಗಸೂಚಿ ಪಾಲಿಸಲೇಬೇಕು ಎಂದಿತ್ತು. ಇದೀಗ ಈ ಪ್ರಕರಣ ಮತ್ತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಯನ್ನು ನೆನಪಿಸಿದೆ.

Latest Videos

click me!