ನೈಜೀರಿಯಾ ಭೀಕರ ಪ್ರವಾಹ: ಸಾವಿನ ಸಂಖ್ಯೆ 151ಕ್ಕೆ ಏರಿಕೆ!

Published : Jun 01, 2025, 03:33 PM ISTUpdated : Jun 01, 2025, 03:34 PM IST

ನೈಜೀರಿಯಾದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ 151 ಜನರು ಸಾವನ್ನಪ್ಪಿದ್ದಾರೆ ಮತ್ತು 3000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಮುಕ್ವಾದಲ್ಲಿ ಉಂಟಾದ ಪ್ರವಾಹವು ವ್ಯಾಪಾರ ಮತ್ತು ಸಾರಿಗೆಗೆ ಅಡ್ಡಿಯುಂಟುಮಾಡಿದೆ. ಅಧ್ಯಕ್ಷರು ಪರಿಹಾರ ಕಾರ್ಯಗಳನ್ನು ಘೋಷಿಸಿದ್ದಾರೆ.

PREV
16

ಅಬುಜಾ: ಆಫ್ರಿಕಾ ಖಂಡದ ನೈಜಿರಿಯಾದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ, ಪ್ರವಾಹದಿಂದಾಗಿ ಉತ್ತರದ ಭಾಗದ ಗ್ರಾಮವೇ ಮುಳುಗಿಹೋಗಿದ್ದು, ಸಾವಿನ ಸಂಖ್ಯೆ 151ಕ್ಕೆ ಏರಿಕೆಯಾಗಿದೆ. 3000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಮುಂಜಾನೆ ಸುರಿದ ಮಳೆಯು ಉತ್ತರ ನೈಜಿರಿಯಾದ ನೈಗರ್‌ ರಾಜ್ಯದ ಮೊಕ್ವಾದಲ್ಲಿ ಭೀಕರ ಪ್ರವಾಹವನ್ನು ಸೃಷ್ಟಿಸಿದೆ. ಮುಕ್ವಾ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ತರಕಾರಿ, ಈರುಳ್ಳಿ ಸೇರಿ ಕೃಷಿ ಪದಾರ್ಥಗಳ ಮಾರಾಟದ ಪ್ರಮುಖ ಕೇಂದ್ರವಾಗಿದೆ. ಜೊತೆಗೆ ಈ ಪ್ರದೇಶವು ಪ್ರಮುಖ ಸಾರಿಗೆ ಕೇಂದ್ರವಾಗಿದೆ. ವಾರದ ಆರಂಭದಲ್ಲಿ ಸುರಿದ ಧಾರಾಕಾರ ಮಳೆಗೆ ಮಧ್ಯ ನೈಜರ್ ರಾಜ್ಯದ ಮೊಕ್ವಾ ಮಾರುಕಟ್ಟೆ ಪಟ್ಟಣದಲ್ಲಿ ಉಂಟಾದ ಪ್ರವಾಹಕ್ಕೆ 50 ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.

26

ನೈಜೀರಿಯಾದ ಅಧ್ಯಕ್ಷ ಬೋಲಾ ಟಿನುಬು ಅವರು ಈ ದುರ್ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ತುರ್ತು ಸಹಾಯ ಕಾರ್ಯಾಚರಣೆಗಾಗಿ ಕೇಂದ್ರ ಸಂಸ್ಥೆಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ. ಈ ಕಠಿಣ ಸಮಯದಲ್ಲಿ ಪೀಡಿತ ಕುಟುಂಬಗಳು ಮತ್ತು ನೈಜರ್ ರಾಜ್ಯದ ಸಮುದಾಯದ ಎಲ್ಲ ಜನರಿಗೆ ನನ್ನ ಸಂತಾಪವನ್ನು ಸಲ್ಲಿಸುತ್ತೇನೆ ಎಂದು ಅವರು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಸಕ್ರಿಯವಾಗಿ ನಡೆಯುತ್ತಿವೆ. ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ಬೆಂಬಲವಾಗಿ ಎಲ್ಲ ಸಂಬಂಧಿತ ಫೆಡರಲ್ ಸಂಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ. ಪರಿಹಾರದ ಸಾಮಗ್ರಿಗಳು ಹಾಗೂ ತಾತ್ಕಾಲಿಕ ಆಶ್ರಯದ ವ್ಯವಸ್ಥೆಗಳನ್ನು ಯಾವುದೇ ವಿಳಂಬವಿಲ್ಲದೆ ಕೈಗೊಳ್ಳಲಾಗುತ್ತಿದೆ ಎಂದು ಟಿನುಬು ಅವರು ತಿಳಿಸಿದ್ದಾರೆ.

36

ನೈಜೀರಿಯಾದ ನೈಜರ್ ರಾಜ್ಯದಲ್ಲಿನ ಮೋಕ್ವಾ ಎಂಬುದು ದೇಶದ ದಕ್ಷಿಣ ಭಾಗದ ವ್ಯಾಪಾರಿಗಳು ಮತ್ತು ಉತ್ತರ ಭಾಗದ ರೈತರಿಗೆ ಪ್ರಮುಖ ಸ್ಥಳೀಯ ವ್ಯಾಪಾರದ ಕೇಂದ್ರವಾಗಿದೆ. ರಾಜಧಾನಿ ಅಬುಜಾದಿಂದ ಪಶ್ಚಿಮಕ್ಕೆ ಸುಮಾರು 220 ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳದಲ್ಲಿ ಇತ್ತೀಚೆಗೆ ಸಂಭವಿಸಿದ ಭಾರೀ ಮಳೆಯಿಂದಾಗಿ ಪರಿಸ್ಥಿತಿ ತೀವ್ರ ಗಂಭೀರವಾಗಿದೆ. ಹಲವಾರು ಗಂಟೆಗಳ ಕಾಲ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಈಗಾಗಲೇ ಪ್ರವಾಹ ಉಂಟಾಗಿದೆ. ಇದಕ್ಕೆ ಇನ್ನೊಂದು ಆಘಾತವಾಗಿ ಹತ್ತಿರದ ಅಣೆಕಟ್ಟು ಕೂಡ ಕುಸಿದ ಪರಿಣಾಮ ಪರಿಸ್ಥಿತಿ ಇನ್ನಷ್ಟು ಭಯಾನಕವಾಗಿದೆ. ನದಿ ಹತ್ತಿರದ ಪ್ರದೇಶಗಳು ಪ್ರದೇಶಗಳು ಸಂಪೂರ್ಣ ನೀರಿನಲ್ಲಿ ಮುಳುಗಿವೆ.

46

ಹವಾಮಾನ ಇಲಾಖೆ ಎಚ್ಚರಿಕೆ

ನೈಜೀರಿಯಾ ಹವಾಮಾನ ಇಲಾಖೆ 36 ರಾಜ್ಯಗಳ ಪೈಕಿ 15 ರಾಜ್ಯಗಳಲ್ಲಿ ತೀವ್ರ ಪ್ರವಾಹದ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಿದೆ. ಇದರಲ್ಲಿ ನೈಜರ್ ರಾಜ್ಯವೂ ಸೇರಿದೆ. ಮಳೆಗಾಲ ಈಗಷ್ಟೇ ಪ್ರಾರಂಭವಾಗಿದ್ದು, ಸಾಮಾನ್ಯವಾಗಿ ಇದು ಆರು ತಿಂಗಳವರೆಗೆ ಮುಂದುವರಿಯುತ್ತದೆ. ನೈಜೀರಿಯಾದಲ್ಲಿ ಮಳೆಗಾಲವು ಕೇವಲ ಪ್ರಕೃತಿ ಅನುದಾನವಲ್ಲ, ಅದು ಸಾವಿರಾರು ಜನರ ಬದುಕುಗಳಿಗೆ ಪ್ರಭಾವ ಬೀರುವ ಸಾವು ಬದುಕಿನ ಪ್ರಶ್ನೆಯೂ ಆಗಿದೆ. ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ನೂರಾರು ಜನರು ಮರಣ ಹೊಂದುತ್ತಾರೆ. ಲಕ್ಷಾಂತರ ಜನರು ವಾಸಸ್ಥಾನ ಕಳೆದುಕೊಳ್ಳುತ್ತಾರೆ. ಕೃಷಿಭೂಮಿ ಹಾನಿಗೊಳಗಾಗುತ್ತದೆ.

56

ಮಳೆ ಅವಾಂತರಕ್ಕೆ ಕಾರಣಗಳೇನು?

ಕಡಿಮೆಯಿರುವ ಒಳಚರಂಡಿ ವ್ಯವಸ್ಥೆ, ನದಿಗಳ ಪಕ್ಕದಲ್ಲಿ ಮನೆಗಳ ನಿರ್ಮಾಣ, ಚರಂಡಿಗಳು ಮತ್ತು ಕಾಲುವೆಗಳಲ್ಲಿ ತ್ಯಾಜ್ಯವನ್ನು ಸುರಿಯುವಯುವುದು ಕೂಡ ಒಂದು ಮಹತ್ವದ ಕಾರಣವಾಗಿದೆ.

2024ರ ಭೀಕರ ಪ್ರವಾಹ

2024 ರಲ್ಲಿ ನೈಜೀರಿಯಾ ತನ್ನ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಪ್ರವಾಹವನ್ನು ಸಂಭವಿಸಿತು. ಈ ಸಂದರ್ಭದಲ್ಲಿ 1,200 ಕ್ಕೂ ಹೆಚ್ಚು ಜನರು ಸಾವಿಗೀಡಾದರು. 1.2 ಮಿಲಿಯನ್ ಜನರು ತಮ್ಮ ಮನೆಗಳಿಂದ ಸ್ಥಳಾಂತರಿಸಲಾಯ್ತು. 1.4 ಮಿಲಿಯನ್ ಹೆಕ್ಟೇರ್ (3.5 ಮಿಲಿಯನ್ ಎಕರೆ) ಕೃಷಿಭೂಮಿ ನಾಶವಾಯಿತು. 36 ರಾಜ್ಯಗಳಲ್ಲಿ 31 ರಾಜ್ಯಗಳು ತೀವ್ರವಾಗಿ ಹಾನಿಗೊಳಗಾದವು. ಇಂತಹ ಪ್ರವಾಹಗಳು ರಾಜ್ಯದ ಅರ್ಥಿಕತೆ, ಆಹಾರ ಸುರಕ್ಷತೆ, ಮತ್ತು ಆರೋಗ್ಯ ವ್ಯವಸ್ಥೆಗೆ ದೊಡ್ಡ ಹೊಡೆತ ನೀಡುತ್ತವೆ.

66

ಮುನ್ನೆಚ್ಚರಿಕೆ ಮತ್ತು ನಿರ್ವಹಣೆಯ ಅವಶ್ಯಕತೆ

ಪ್ರತಿ ವರ್ಷ ಪ್ರವಾಹಗಳು ಒದೊಂದು ಪಾಠ ಕಲಿಸಿದರೂ ಈ ಪ್ರವಾಹಗಳು ಪುನರಾವೃತ್ತವಾಗುತ್ತಿವೆ. ಇದನ್ನು ತಡೆಯಲು ಉತ್ತಮ ಚರಂಡಿ ವ್ಯವಸ್ಥೆ ನಿರ್ಮಾಣ, ನದಿ-ಕಾಲುವೆಗಳ ಮರುಸ್ವಚ್ಛತೆ, ವಾಸದ ನಿರ್ವಹಿತ ನಿಯಮಗಳು, ತುರ್ತು ನಿರ್ವಹಣಾ ತಂಡಗಳ ಸಜ್ಜತೆ, ಇವೆಲ್ಲಾ ಆವಶ್ಯಕವಾಗಿವೆ. ಸರ್ಕಾರಗಳು ಮತ್ತು ನಾಗರಿಕರು ಸಹಭಾಗಿತ್ವದಲ್ಲಿ ಈ ಸಮಸ್ಯೆಯ ವಿರುದ್ಧ ಕೆಲಸ ಮಾಡಬೇಕು.

Read more Photos on
click me!

Recommended Stories