ಸೌದಿ ಅರೇಬಿಯಾದಲ್ಲಿ 73 ವರ್ಷಗಳ ಬಳಿಕ ಮದ್ಯ ಮಾರಾಟಕ್ಕೆ ಅವಕಾಶ: ಷರತ್ತುಗಳು ಅನ್ವಯ

Published : May 26, 2025, 08:37 PM IST

73 ವರ್ಷಗಳ ನಿಷೇಧದ ನಂತರ, ಸೌದಿ ಅರೇಬಿಯಾ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಎಲ್ಲೆಲ್ಲಿ ಮದ್ಯ ಮಾರಾಟ ಆಗಲಿದೆ?

PREV
16

ಬರೋಬ್ಬರಿ 73 ವರ್ಷಗಳ ಸೌದಿ ಅರೇಬಿಯಾದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದ್ರೆ ಮದ್ಯ ಮಾರಾಟಗಾರರು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. 2026ರಿಂದ ಸೌದಿ ಅರೇಬಿಯಾದಲ್ಲಿ ಮದ್ಯ ಮಾರಾಟ ಆರಂಭವಾಗಲಿದೆ.

26

73 ವರ್ಷಗಳ ಹಿಂದೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ಆ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಸೌದಿ ಅರೇಬಿಯಾದ ಕೆಲವು ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಇದಕ್ಕಾಗಿ ಇಲ್ಲಿಯ ಸರ್ಕಾರ 600 ಸ್ಥಳಗಳನ್ನು ಗುರುತಿಸಲಾಗಿದೆ.

36

ಎಲ್ಲೆಲ್ಲಿ ಮದ್ಯ ಮಾರಾಟ?

ಹೋಟೆಲ್, ರೆಸ್ಟೋರೆಂಟ್‌, ರೆಸಾರ್ಟ್ ಸೇರಿದಂತೆ ಪ್ರವಾಸಿಗರು ಸೇರುವ ಸೀಮಿತ ಪ್ರದೇಶಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇಲ್ಲಿಯ ಆದೇಶದ ಪ್ರಕಾರ, ರೆಡ್ ಸೀ, ನಿಯೋಮ್ ಮತ್ತು ಸಿಂಡಲಾ ದ್ವೀಪ ಸೇರಿದಂತೆ ಒಟ್ಟು 600 ಸ್ಥಳಗಳಲ್ಲಿ ಮದ್ಯ ಮಾರಾಟಕ್ಕೆ ಸೌದಿ ಅರೇಬಿಯಾ ಸರ್ಕಾರ ಆದೇಶ ಹೊರಡಿಸಿದೆ.

46

ಈ ಆದೇಶದ ಪ್ರಕಾರ, ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ತಯಾರಿಕೆಗೆ ಅವಕಾಶ ನೀಡುತ್ತಿಲ್ಲ. ಸೂಚಿಸಿರುವ ಮತ್ತು ಅನುಮತಿ ಪಡೆದುಕೊಂಡಿರುವ 600 ಸ್ಥಳಗಳಲ್ಲಿ ಬಿಯರ್, ವೈನ್ ಮತ್ತು ಸೈಡರ್ ಮಾತ್ರ ಲಭ್ಯವಿರುತ್ತದೆ. ಸ್ಪಿರಿಟ್‌ನಂತಹ ಮದ್ಯ ಮಾರಾಟಕ್ಕೆ ಅನುಮತಿಯನ್ನು ನೀಡಿಲ್ಲ. ಮನೆ, ಅಂಗಡಿ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಖಡಕ್ ಆದೇಶ ನೀಡಲಾಗಿದೆ.

56

ಮದ್ಯ ಮಾರಾಟಕ್ಕೆ ಅವಕಾಶ ನೀಡಿರೋದ್ಯಾಕೆ?

ಪ್ರವಾಸೋದ್ಯಮ ಉತ್ತೇಜನ ಮತ್ತು ಜಾಗತೀಕ ಕಾರ್ಯಕ್ರಮ ಆಯೋಜನೆ ಹಿನ್ನೆಲೆ ಯುಎಇಯಂತೆ ಸೌದಿ ಅರೇಬಿಯಾ ತನ್ನ ಕೆಲವು ನಿಯಮಗಳನ್ನು ಸಡಿಲಗೊಳಿಸುತ್ತಿದೆ.

66

2034ರಲ್ಲಿ ಫಿಪಾ ವಿಶ್ವಕಪ್‌ ಸೌದಿ ಅರೇಬಿಯಾದಲ್ಲಿ ನಡೆಯಲಿದೆ. ಈ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ನಿಯಮಗಳಲ್ಲಿ ಸಡಿಲಿಕೆ ತರಲಾಗುತ್ತಿದೆ. ಸೌದಿ ಅರೇಬಿಯಾವನ್ನು ಜಾಗತೀಕ ನಗರವನ್ನಾಗಿ ಮಾಡುವ ದೃಷ್ಟಿಕೋನವನ್ನು ಇಲ್ಲಿಯ ಪ್ರಿನ್ಸ್ Mohammed bin Salman ಮಾಡುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories