ಅಮೆರಿಕಾ ಸೆನೆಟ್‌ನಲ್ಲಿ ನಮೋ ಜಪ: 79 ಬಾರಿ ಚಪ್ಪಾಳೆ, 15 ಬಾರಿ ಎದ್ದು ನಿಂತು ಗೌರವ
First Published | Jun 23, 2023, 3:14 PM ISTಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾದ ಸೆನೆಟ್‌ನಲ್ಲಿ ಮಾಡಿದ ಭಾಷಣ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯ್ತು ಭಾಷಣದ ಮಧ್ಯೆ ಮಧ್ಯೆ 79ಕ್ಕೂ ಹೆಚ್ಚು ಬಾರಿ ಸಂಸತ್ ಸದಸ್ಯರು ಚಪ್ಪಾಳೆ ತಟ್ಟಿದರು, 15ಕ್ಕೂ ಹೆಚ್ಚು ಬಾರಿ ಎದ್ದು ನಿಂತು ಗೌರವ ಸೂಚಿಸಿದರು ಜೊತೆಗೆ ಮೋದಿ ಮೋದಿ ಎಂಬ ಘೋಷಣೆ ಸದನದಲ್ಲಿ ಅನುರಣಿಸಿತು. ಇದಾದ ನಂತರ ಮೋದಿಯವರ ಆಟೋಗ್ರಾಫ್ ಪಡೆಯಲು ಉಭಯ ಪಕ್ಷಗಳ ಸಂಸತ್ ಸದದ್ಯರು ಮುಗಿಬಿದ್ದರು, ಜೊತೆಗೆ ಮೋದಿ ಜೊತೆ ಸೆಲ್ಫಿಗಾಗಿ ಸಂಸದರು, ಸಭಾಧ್ಯಕ್ಷರು ಯತ್ನಿಸಿದ್ದು ವಿಶೇಷವಾಗಿತ್ತು...