ಶ್ವಾನದೊಂದಿಗೆ 10 ಡೌನಿಂಗ್ ಸ್ಟ್ರೀಟ್‌ಗೆ ಕಾಲಿಟ್ಟ Rishi Sunak: ಟ್ವಿಟ್ಟರ್‌ನಲ್ಲಿ ವೈರಲ್
First Published | Nov 3, 2022, 2:44 PM ISTಭಾರತೀಯ ಮೂಲದ, ಕರ್ನಾಟಕದ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಸೆಟಲ್ ಆಗಿದ್ದಾರೆ. ಬ್ರಿಟನ್ ಪ್ರಧಾನಿಗಳ ಅಧಿಕೃತ ನಿವಾಸ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಕುಟುಂಬ ಸಮೇತ ಕಾಲಿಟ್ಟಿದ್ದೂ ಆಗಿದ್ದು, ಲಗೇಜ್ ಸಮೇತ ಶಿಫ್ಟ್ ಆಗಿರುತ್ತಾರೆ. ರಿಷಿ ಸುನಕ್, ಪತ್ನಿ ಅಕ್ಷತಾ ಮೂರ್ತಿ ಹಾಗೂ ಪುತ್ರಿಯರಾಧ ಅನೌಷ್ಕಾ ಹಾಗೂ ಕೃಷ್ಣಾ ಸಹ ಇಂಗ್ಲೆಂಡ್‌ನ ಲಂಡನ್‌ನಲ್ಲಿರುವ ಹಲವರ ನೆಚ್ಚಿನ 10 ಡೌನಿಂಗ್ ಸ್ಟ್ರೀಟ್‌ಗೆ ಹೋಗಿದ್ದಾಗಿದೆ. ಈ ಕುಟುಂಬದ ಸದಸ್ಯರ ಜತೆಗೆ ಮತ್ತೊಬ್ಬರು ಸಹ ಆ ನಿವಾಸದಲ್ಲಿದ್ದಾರೆ. ಅದು ಬೇರೆ ಯಾರೂ ಅಲ್ಲ, ರಿಷಿ ಸುನಕ್ ಕುಟುಂಬದ ಮುದ್ದಿನ ಶ್ವಾನ ನೋವಾ.