Queen Elizabeth II Funeral: ಬ್ರಿಟನ್‌ ರಾಣಿಗೆ ಕಣ್ಣೀರ ವಿದಾಯ; ದ್ರೌಪದಿ ಮುರ್ಮು ಸೇರಿ 2000 ಗಣ್ಯರು ಭಾಗಿ

First Published Sep 20, 2022, 8:02 AM IST

ದಿವಂಗತ ರಾಣಿಯ ಪುತ್ರ ಹಾಗೂ ಬ್ರಿಟನ್‌ ರಾಜ 3ನೇ ಚಾರ್ಲ್ಸ್ ಅಂತಿಮ ಸಂಸ್ಕಾರ ನೆರವೇರಿಸಿದರು. ರಾಣಿಯ ಹೆಸರಿನಲ್ಲೇ ನಿರ್ಮಾಣವಾಗಿರುವ ಎಲಿಜಬೆತ್‌ ಟವರ್‌ನಲ್ಲಿರುವ ಐತಿಹಾಸಿಕ ‘ದಿ ಬಿಗ್‌ ಬೆನ್‌’ ಗಂಟೆಯನ್ನು 96 ಬಾರಿ ಬಾರಿಸಿ ರಾಣಿಯ ಜೀವನದ 96 ವರ್ಷಗಳನ್ನು ಸ್ಮರಿಸಲಾಯಿತು.

70 ವರ್ಷಗಳ ಸುದೀರ್ಘಾವಧಿ ಬ್ರಿಟನ್‌ ರಾಣಿಯಾಗಿ ಆಳ್ವಿಕೆ ನಡೆಸಿದ 2ನೇ ಎಲಿಜಬೆತ್‌ ಅವರಿಗೆ ಇಡೀ ವಿಶ್ವ ಸೋಮವಾರ ಭಾವಪೂರ್ಣ ವಿದಾಯ ಹೇಳಿದೆ. ಇತ್ತೀಚೆಗೆ ನಿಧನರಾದ ಎಲಿಜಬೆತ್‌ ಅವರ ಅಂತ್ಯಕ್ರಿಯೆ ಸೋಮವಾರ ರಾಜಗೌರವಗಳೊಂದಿಗೆ ಇಂಗ್ಲೆಂಡಿನ ವೆಸ್ಟ್‌ಮಿನಿಸ್ಟರ್‌ ಅಬೆಯಲ್ಲಿ ನಡೆಸಲಾಯಿತು.

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ 500ಕ್ಕೂ ಹೆಚ್ಚು ಜಾಗತಿಕ ನಾಯಕರು ಮತ್ತು ಸುಮಾರು 2000 ಜನರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. 

ದಿವಂಗತ ರಾಣಿಯ ಪುತ್ರ ಹಾಗೂ ಬ್ರಿಟನ್‌ ರಾಜ 3ನೇ ಚಾರ್ಲ್ಸ್ ಅಂತಿಮ ಸಂಸ್ಕಾರ ನೆರವೇರಿಸಿದರು.ರಾಣಿ ಅಂತ್ಯ ಸಂಸ್ಕಾರದ ವೇಳೆ ಬ್ರಿಟನ್‌ ರಾಷ್ಟ್ರಗೀತೆ ‘ಗಾಡ್‌ ಸೇವ್‌ ದಿ ಕಿಂಗ್‌’ ನುಡಿಸಲಾಯ್ತು.

ರಾಣಿಯ ಹೆಸರಿನಲ್ಲೇ ನಿರ್ಮಾಣವಾಗಿರುವ ಎಲಿಜಬೆತ್‌ ಟವರ್‌ನಲ್ಲಿರುವ ಐತಿಹಾಸಿಕ ‘ದಿ ಬಿಗ್‌ ಬೆನ್‌’ ಗಂಟೆಯನ್ನು 96 ಬಾರಿ ಬಾರಿಸಿ ರಾಣಿಯ ಜೀವನದ 96 ವರ್ಷಗಳನ್ನು ಸ್ಮರಿಸಲಾಯಿತು. ರಾಣಿಯ ಅಂತಿಮ ಮೆರವಣಿಗೆಯ ನೇತೃತ್ವವನ್ನು ಅವರ ಹಿರಿಯ ಪುತ್ರ ಚಾರ್ಲ್ಸ್ ವಹಿಸಿಕೊಂಡಿದ್ದರು. 

ರಾಣಿಯ ಮೊಮ್ಮಕ್ಕಳಾದ ವಿಲಿಯಂ, ಹ್ಯಾರಿ, ಆ್ಯಂಡ್ರೀವ್‌, ಎಡ್ವರ್ಡ್‌ ಹಾಗೂ ರಾಜಕುಮಾರಿ ಆ್ಯನಾ ಅಲ್ಲದೇ ಮರಿಮಕ್ಕಳಾದ ಜಾರ್ಜ್‌, ಚಾರ್ಲೊಟ್ಟೆ ಕೂಡ ಅಂತಿಮ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವೆಲ್ಲಿಂಗ್‌ಟನ್‌ ಆರ್ಚ್‌ನಲ್ಲಿ 6,000 ಸಿಬ್ಬಂದಿ ಸೇನಾ ಮೆರವಣಿಗೆ ನಡೆಸಿ ರಾಣಿಗೆ ಗೌರವ ಸಲ್ಲಿಸಿದರು. ವಿಂಡ್ಸರ್‌ನ ಸೇಂಟ್‌ ಜಾರ್ಜ್‌ ಚಾಪೆಲ್‌ನಲ್ಲಿ ಪತಿ ಫಿಲಿಪ್‌ ಅವರ ಸಮಾಧಿಯ ಪಕ್ಕದಲ್ಲೇ ರಾಣಿಯನ್ನು ಸಮಾಧಿ ಮಾಡಲಾಯಿತು. 

ರಾಣಿ ಎಲಿಜಬೆತ್‌ ಅವರನ್ನಿರಿಸಿದ ಶವಪೆಟ್ಟಿಗೆಯನ್ನು ದಶಕಗಳ ಹಿಂದೆಯೇ ತಯಾರಿಸಲಾಗಿದ್ದು, ಇದರ ನಿರ್ಮಾಣಕ್ಕೆ ಇಂಗ್ಲೀಷ್‌ ಓಕ್‌ ಮರ ಹಾಗೂ ಸೀಸವನ್ನು ಬಳಸಲಾಗಿದೆ. ಈ ವಿಶೇಷ ಶವಪೆಟ್ಟಿಗೆಯು ದೇಹ ಕೊಳೆಯುವ ಪ್ರಕ್ರಿಯೆಯನ್ನು ನಿಧಾನಗೊಳಿಸುವುದರಿಂದ ದೇಹವನ್ನು ಸಾಕಷ್ಟು ಕಾಲ ಕೆಡದಂತೆ ಸಂರಕ್ಷಿಸಬಹುದಾಗಿದೆ.

ರಾಣಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಜಗತ್ತಿನ ಎಲ್ಲೆಡೆಯಿಂದ 10 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದು, ಜನರ ಅನುಕೂಲಕ್ಕೆ 250 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು.

ವೆಸ್ಟ್‌ಮಿನಿಸ್ಟರ್‌ ಅಬೆಯಲ್ಲಿ ನಡೆದ ರಾಣಿ ಅಂತ್ಯಕ್ರಿಯೆಯನ್ನು ಪ್ರಮುಖ ನಗರಗಳ ಆಯಕಟ್ಟಿನ ಸ್ಥಳಗಳಲ್ಲಿ ಬೃಹತ್‌ ಪರದೆಯಲ್ಲಿ ನೇರ ಪ್ರಸಾರ ಮಾಡಲಾಗಿತ್ತು.

ರಾಣಿಯ ಅಂತ್ಯಸಂಸ್ಕಾರದಲ್ಲಿ ವಿವಿಧ ದೇಶಗಳ ನಾಯಕರು, ಸಚಿವರು ಸೇರಿದಂತೆ 500ಕ್ಕೂ ಹೆಚ್ಚು ವಿಐಪಿಗಳು ಪಾಲ್ಗೊಂಡ ಹಿನ್ನೆಲೆಯಲ್ಲಿ ಲಂಡನ್‌ನಲ್ಲಿ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿತ್ತು. 10,000 ಪೊಲೀಸರನ್ನು ನೇಮಿಸಲಾಗಿತ್ತು. ಡ್ರೋನ್‌ ಹಾರಾಟಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು.
 

click me!