G 20ಯಲ್ಲಿ ನರೇಂದ್ರ ಮೋದಿ.. ಅಗ್ರ ನಾಯಕರ ಆಲಿಂಗನ

First Published | Oct 30, 2021, 8:27 PM IST

ರೋಮ್‌ (ಅ.30): ಇಟಲಿ (Italy) ರಾಜಧಾನಿ ರೋಮ್‌ನಲ್ಲಿ (Rome) ಅ.30 ಹಾಗೂ 31ರಂದು ನಿಗದಿಯಾಗಿರುವ 16ನೇ ಜಿ-20 ಶೃಂಗದಲ್ಲಿ ಭಾಗವಹಿಸಲು ಬಂದಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ.

ರೋಮ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಯೂರೋಪ್‌ (UROP) ಒಕ್ಕೂಟದ ರಾಷ್ಟ್ರಗಳ ನಾಯಕರ ಜತೆ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ ವಾಣಿಜ್ಯ ವ್ಯವಹಾರ, ಸಂಸ್ಕೃತಿ ಮತ್ತು ಪರಿಸರ ವಲಯಗಳಿಗೆ ಸಂಬಂಧಿಸಿ ಭಾರತ - ಯೂರೋಪ್‌ ರಾಷ್ಟ್ರಗಳ ಸ್ನೇಹಪರತೆ ಕುರಿತಾಗಿ ಚರ್ಚಿಸಲಾಗಿದೆ.

ಪ್ರಪಂಚದ ಅಗ್ರ ನಾಯಕರ ಜತೆ ಮೋದಿ ಮಾತುಕತೆ ನಡೆಸಲಿದ್ದಾರೆ.  16ನೇ ಜಿ-20 ಶೃಂಗಸಭೆಯಲ್ಲಿ (G 20) ಪ್ರಧಾನಿ ಮೋದಿ ಅವರು, ಇತರ ರಾಷ್ಟ್ರಗಳ ನಾಯಕರ ಜತೆ ಜಾಗತಿಕ ಆರ್ಥಿಕತೆ, ಕೋವಿಡ್‌ನಿಂದ ಆರೋಗ್ಯ ಸುಧಾರಣೆ, ಸುಸ್ತಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಕುರಿತಾಗಿ ಚರ್ಚೆ ನಡೆಸಲಿದ್ದಾರೆ.

Tap to resize

ಗುರುವಾರ ಭಾರತದಿಂದ ರೋಮ್‌ ಪ್ರವಾಸ ಕೈಗೊಂಡಿದ್ದ ಮೋದಿ, ಅ.29ರಿಂದ 31ರವರೆಗಿನ ತಮ್ಮ ಈ ಪ್ರವಾಸದ ವೇಳೆ ಇಟಲಿ ಪ್ರಧಾನಿ ಮಾರಿಯೋ ದ್ರಾಘಿ ಅವರ ಕೋರಿಕೆ ಮೇರೆಗೆ ರೋಮ್‌ ಮತ್ತು ವ್ಯಾಟಿಕನ್‌ ಸಿಟಿಗೆ (Vatican City) ಭೇಟಿ ನೀಡಿದರು. 

ಜಾಗತಿಕ ನಾಯಕರ ಜತೆ ಪ್ರಧಾನಿ ಮಾತನಾಡಲಿದ್ದಾರೆ. ಈ ನಡುವೆ    ವ್ಯಾಟಿಕನ್ ಸಿಟಿಯಲ್ಲಿ(Vatican City) ಪೋಪ್ ಫ್ರಾನ್ಸಿಸ್ ರನ್ನು(Pope Francis) ಭೇಟಿ ಮಾಡಿದ್ದಾರೆ.  ಪ್ರಧಾನಿ ಮೋದಿ ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ (Ajit Doval)ಮತ್ತು ವಿದೇಶಾಂಗ ವ್ಯವಹಾರ ಸಚಿವ ಡಾ. ಎಸ್. ಜೈಶಂಕರ್(S. Jaishankar) ಇದ್ದಾರೆ.

ಇಟಲಿ (Italy) ರಾಜಧಾನಿ ರೋಮ್‌ನಲ್ಲಿ (Rome) ಅ.30 ಹಾಗೂ 31ರಂದು ನಿಗದಿಯಾಗಿರುವ 16ನೇ ಜಿ-20 ಶೃಂಗದಲ್ಲಿ ಭಾಗವಹಿಸಲು ಬಂದಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ.

Latest Videos

click me!