ನಾಪತ್ತೆಯಾಗಿದ್ದ ಎಂಟು ವರ್ಷದ ಬಾಲಕಿ ಎಟಿಎಂ ಸಹಾಯದಿಂದ ಮನೆ ತಲುಪಿದ್ದು ಹೇಗೆ ನೋಡಿ

Published : Aug 22, 2024, 02:53 PM IST

ಎಂಟು ವರ್ಷದ ಮಗುವಿನ ಬುದ್ಧಿವಂತಿಕೆ ಮತ್ತು ಸಮಯಪ್ರಜ್ಞೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಜ್ಜನ ಜೊತೆ ಮನೆಗೆ ಹೋಗುವಾಗ ನಾಪತ್ತೆಯಾಗಿದ್ದ ಬಾಲಕಿ ಎಟಿಎಂ ಕೇಂದ್ರದ ನೆರವಿನಿಂದ ತನ್ನ ಕುಟುಂಬವನ್ನು ಸೇರಿದ್ದಾಳೆ.

PREV
17
ನಾಪತ್ತೆಯಾಗಿದ್ದ ಎಂಟು ವರ್ಷದ ಬಾಲಕಿ ಎಟಿಎಂ ಸಹಾಯದಿಂದ ಮನೆ ತಲುಪಿದ್ದು ಹೇಗೆ ನೋಡಿ

ಈ ತಲೆಮಾರಿನ ಮಕ್ಕಳು ತುಂಬಾ ಕ್ರಿಯಾಶೀಲರು ಎಂಬುವುದು ಸಾಬೀತು ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ಅವರ ಬುದ್ದಿವಂತಿಕೆ ಅಚ್ಚರಿ ಮೂಡಿಸುತ್ತದೆ. ದೊಡ್ಡವರಿಗೆ ಸಿಗದ ಐಡಿಯಾಗಳು ಚಿಕ್ಕ ಹುಡುಗಿಯರಿಗೂ ಸಿಗುತ್ತವೆ. ಚೀನಾದ ಮಗುವೊಂದು ತನ್ನ ಸಮಯಪ್ರಜ್ಞೆಯಿಂದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಎಂಟು ವರ್ಷದ ಚೀನಾದ ಮಗುವಿನ ಬುದ್ದಿವಂತಿಕೆಗೆ ಎಲ್ಲರೂ ಬೆರಗಾಗಿದ್ದಾರೆ. (ಸಾಂದರ್ಭಿಕ ಚಿತ್ರ)

27
atm

ಅಜ್ಜನ ಜೊತೆ ಮನೆಗೆ ಹೋಗುತ್ತಿದ್ದ ಮಗು ರಸ್ತೆಯಲ್ಲೇ ದಾರಿ ತಪ್ಪಿದೆ. ಅಜ್ಜ ಎಷ್ಟು ಹುಡುಕಿದರೂ ಸಿಕ್ಕಿಲ್ಲ. ಅಪರಿಚಿತ ಸ್ಥಳದಲ್ಲಿ ಮಗು ಒಂಟಿಯಾದ್ರೆ ಅಳುತ್ತವೆ. ಆದರೆ ಈ ಮಗು ಹಾಗೇ ಮಾಡದೇ ಉಪಾಯವಾಗಿ ಮನೆ ಸೇರುವಲ್ಲಿ ಯಶಸ್ವಿಯಾಗಿದೆ. (ಸಾಂದರ್ಭಿಕ ಚಿತ್ರ)

37

ಚೀನಾದ ಝೆಜಿಯಾಂಗ್ ಪ್ರಾಂತ್ಯದ ಕಿಝೌ ಪ್ರದೇಶದಲ್ಲಿ ಜುಲೈ 30ರಂದು ಈ ಘಟನೆ ನಡೆದಿದೆ. ಡ್ಯಾನ್ಸ್ ಸ್ಕೂಲ್‌ಗೆ ಬಂದಿದ್ದ ಮೊಮ್ಮಗಳನ್ನು ಕರೆದುಕೊಂಡು ಹೋಗಲು ಅಜ್ಜಿ ಬಂದಿದ್ದರು. ಆದ್ರೆ ಮಾರ್ಗ ಮಧ್ಯೆಯೇ ಅಜ್ಜಿ ಮತ್ತು ಮೊಮ್ಮಗಳು ಬೇರೆಯಾಗಿದ್ದರು. ಹೀಗಾಗಿ ಮಗು  ರಸ್ತೆಯಲ್ಲೇ ಒಂಟಿಯಾಗಿ ದಿಕ್ಕು ತೋಚದ ಸ್ಥಿತಿಯಲ್ಲಿ ನಿಂತಿದ್ದಳು. (ಸಾಂದರ್ಭಿಕ ಚಿತ್ರ)

47

ಅಜ್ಜಿಯಿಂದ ಬೇರ್ಪಟ್ಟ ಬಾಲಕಿಗೆ ಕೊಂಚವೂ ಹೆದರಿಕೊಂಡಿಲ್ಲ. ಈ ವೇಳೆ ಹೇಗೆ ಮನೆ ತಲುಪಬೇಕು ಎಂದು ಬಾಲಕಿ ಯೋಚಿಸಿದ್ದಾಳೆ. ತನ್ನ ಸುತ್ತಲಿನ ಪ್ರದೇಶವನ್ನು ಗಮನಿಸಿ ನೋಡಿದಾಗ ಬಾಲಕಿಗೆ ಮನೆ ಸೇರುವ ಐಡಿಯಾ ಬಂದಿದೆ. (ಸಾಂದರ್ಭಿಕ ಚಿತ್ರ)

57

ತಾನಿದ್ದ ಸ್ಥಳದಲ್ಲಿದ್ದ ಬ್ಯಾಂಕ್‌ವೊಂದರ ಎಟಿಎಂ ನೋಡಿದ್ದಾಳೆ. ಅಲ್ಲಿಗೆ ಬಂದ ಬಾಲಕಿ ಇದರ ಮೂಲಕವೇ ನಾನು ಮನೆ ಸೇರಬಹುದು ಎಂದು ಪ್ಲಾನ್ ಮಾಡಿದ್ದಾಳೆ. ಮಗು ಎಟಿಎಂನಲ್ಲಿರುವ ಸೌಲಭ್ಯಗಳ ಬಗ್ಗೆ ತಿಳಿದುಕೊಂಡಿತ್ತು. ಶಾಲೆ ಅಥವಾ ಪೋಷಕರಿಂದ ಮಗು ಎಟಿಎಂ ಸೇವೆಗಳ ಬಗ್ಗೆ ತಿಳಿದುಕೊಂಡಿರಬಹುದು. (ಸಾಂದರ್ಭಿಕ ಚಿತ್ರ)

67

ಚೀನಾದ ಬಹುತೇಕ ಎಟಿಎಂ ಯಂತ್ರಗಳಲ್ಲಿ ಅಗತ್ಯವಿದ್ದರೆ  ಬ್ಯಾಂಕ್ ಸಿಬ್ಬಂದಿಯನ್ನು ಕರೆಯುವ ಆಯ್ಕೆಯನ್ನು ನೀಡಲಾಗಿದೆ. ಅಜ್ಜಿಯಿಂದ ಬೇರ್ಪಟ್ಟ ಮಗು ತನ್ನವರನ್ನು ಸೇರಲು ಇದೇ ಆಯ್ಕೆಯನ್ನು ಬಳಸಿದ್ದಾಳೆ. ಎಟಿಎಂ ಮಷಿನ್ ನಲ್ಲಿ ತುರ್ತು ಕರೆ ಮಾಡುವ ಬಟನ್ ಒತ್ತಿದ್ದಾಳೆ. ಕೆಲ ಸಮಯದ ಬಳಿಕ ಬಂದ ಬ್ಯಾಂಕ್ ಸಿಬ್ಬಂದಿಗೆ ಬಾಲಕಿ ತಾನು ಅಜ್ಜಿಯಿಂದ ಬೇರ್ಪಟ್ಟ ವಿಷಯವನ್ನು ಹೇಳಿದ್ದಾಳೆ. (ಸಾಂದರ್ಭಿಕ ಚಿತ್ರ)

77

ಆನಂತರ ಬ್ಯಾಂಕ್ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಟಿಎಂ ಬಳಿ ಬಂದ ಪೊಲೀಸರು ಎಲ್ಲಾ ಮಾಹಿತಿ ಪಡೆದುಕೊಂಡು ಬಾಲಕಿಯನ್ನು ಆಕೆಯ ಮನೆಗೆ ತಲುಪಿಸಿದ್ದಾರೆ. ಎಂಟು ವರ್ಷದ ಮಗುವಿನ ಸಮಯಪಾಲನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಮಸ್ಯೆಗಳು ಎದುರಾದಾಗ ಬುದ್ದಿವಂತಿಕೆಯಿಂದ ಸಮಸ್ಯೆ ಬಗೆಹರಿಸುವುದು ಹೇಗೆ ಎಂಬುದನ್ನು ಈ ಮಗುವಿನಿಂದಲೇ ಕಲಿಯಬೇಕು ಎಂದು ನೆಟಿಜನ್ ಗಳು ಕಮೆಂಟ್ ಮಾಡುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories