ಬರೋಬ್ಬರಿ 100 ಕೋಟಿ ಮೌಲ್ಯದ ಆಸ್ತಿ ಬಿಟ್ಟು ನಿತ್ಯಾನಂದನ ಕೈಲಾಸ ಸೇರಿದ ಸುಂದರಿ ಯಾರೀಕೆ?

First Published | Aug 20, 2024, 7:52 PM IST

ಭಾರತದ ಸುಶಿಕ್ಷಿತೆಯೊಬ್ಬಳು 100 ಕೋಟಿಗೂ ಹೆಚ್ಚು ಆಸ್ತಿಯನ್ನು ತ್ಯಜಿಸಿ ನಿತ್ಯಾನಂದ ಸ್ವಾಮಿಯ 'ಕೈಲಾಸ'ದಲ್ಲಿ ಸೇವೆಗೆ ನಿಂತಿದ್ದಾರೆ. ವಿಶ್ವಸಂಸ್ಥೆಯ ಸಭೆಯಲ್ಲಿ ಕೈಲಾಸದ ಪ್ರತಿನಿಧಿಯಾಗಿ ಭಾಗವಹಿಸಿ ಗಮನ ಸೆಳೆದಿದ್ದಳು.

ಭಾರತದಿಂದ 2019ರಲ್ಲಿ ಪಲಾಯನ ಮಾಡಿ ದ್ವೀಪವೊಂದನ್ನು ಖರೀದಿ ಮಾಡಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂಬ ತನ್ನದೇ ದೇಶವನ್ನು ಕಟ್ಟಿರುವ ನಿತ್ಯಾನಂದ ಸ್ವಾಮಿಗೆ ಭಾರತ ಮಾತ್ರವಲ್ಲದೆ ವಿದೇಶದ ಅನೇಕ ಮಂದಿ ಅನುಯಾಯಿಗಳಿದ್ದಾರೆ.

ಭಾರತದ ಸುಶಿಕ್ಷಿತ ಹೆಣ್ಣು ಮಗಳೊಬ್ಬಳು ನಿತ್ಯಾನಂತ ಆಶ್ರಮದಲ್ಲಿದ್ದು, ಆಕೆ ಬರೋಬ್ಬರಿ 100 ಕೋಟಿ ಗೂ ಹೆಚ್ಚು ಆಸ್ತಿಯನ್ನು ಬಿಟ್ಟು ನಿತ್ಯಾನಂದ ಸ್ವಾಮಿಯ ಕೈಲಾಸದಲ್ಲಿ ಸೇವೆಗಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟಿದ್ದಾಳೆ.

Tap to resize

ಆಕೆಯೇ ವಿಜಯಪ್ರಿಯ, ಭೋಜ್‌ಪುರಿ ಬ್ರಾಹ್ಮಣ ಕುಟುಂಬದಲ್ಲಿ ಕಾಶಿಯಲ್ಲಿ ಜನಿಸಿದ ಈಕೆ ಶೈಕ್ಷಣಿಕವಾಗಿ ಅನೇಕ ಸಾಧನೆ ಮಾಡಿದ್ದಾಳೆ.  ಇಂಗ್ಲಿಷ್, ಫ್ರೆಂಚ್, ಹಿಂದಿ ,ಕ್ರಿಯೋಲ್ ಮತ್ತು ಪಿಡ್ಜಿನ್ಸ್‌ ಹೀಗೆ ಹಲವು ಭಾಷೆಗಳು ಗೊತ್ತಿದೆ.

2014 ರಲ್ಲಿ ಕೆನಡಾದ ಮ್ಯಾನಿಟೋಬಾ ವಿಶ್ವವಿದ್ಯಾಲಯದಿಂದ ಮೈಕ್ರೋಬಯಾಲಜಿಯಲ್ಲಿ ಪದವಿ ಪಡೆದಿದ್ದಾಳೆ ವಿಜಯಪ್ರಿಯ. ಜೊತೆಗೆ 2014ರವರೆಗೂ ವಿಶ್ವವಿದ್ಯಾಲಯದ ಡೀನ್ ಹಾನರ್ಸ್ ಪಟ್ಟಿಯಲ್ಲಿದ್ದಳು. 2013 ಮತ್ತು 2014 ರಲ್ಲಿ ಅಂತರರಾಷ್ಟ್ರೀಯ ಪದವಿಪೂರ್ವ ವಿದ್ಯಾರ್ಥಿವೇತನವನ್ನು ಸಹ ಪಡೆದಿದ್ದಾರೆ .

ಈಕೆ ಹೆಸರು ಬೆಳಕಿಗೆ ಬಂದಿದ್ದು, ಕಳೆದ ವರ್ಷ 2023ರ ಮಾರ್ಚ್‌ನಲ್ಲಿ ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದಾಗ, 'ಕೈಲಾಸ'ದ ನಿಯೋಗವು ಎನ್‌ಜಿಒ ಹೆಸರಿನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಈಕೆಯೇ ಪ್ರಮುಖ ಪ್ರತಿನಿಧಿಯಾಗಿ ನಿತ್ಯಾನಂದನ ಕೈಲಾಸದಿಂದ ಬಂದಿದ್ದಳು.

ಕೈಲಾಸದ ಪ್ರತಿನಿಧಿಯಾಗಿ ಭಾರತದ ವಿರುದ್ಧ ಆಪಾದನೆಗಳನ್ನು ಮಾಡಿದ್ದಳು, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿ (ಸಿಇಎಸ್‌ಸಿಆರ್) ಆಯೋಜಿಸಿದ್ದ ಚರ್ಚೆಯಲ್ಲಿ ಭಾಗವಹಿಸಿದ  ವಿಜಯಪ್ರಿಯ, 'ಹಿಂದೂಯಿಸಂನ ಸರ್ವೋಚ್ಛ ಮಠಾಧಿಪತಿ'ಗೆ ಅಂದರೆ ನಿತ್ಯಾನಂದನಿಗೆ ರಕ್ಷಣೆ ಒದಗಿಸುವಂತೆ ಬೇಡಿಕೆ ಇರಿಸಿದ್ದಳು.

ಹಿಂದೂ ಸನಾತನ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಿದ್ದಕ್ಕಾಗಿ ನಿತ್ಯಾನಂದನಿಗೆ ಕಿರುಕುಳ ನೀಡಲಾಗುತ್ತಿದೆ ಅವನದ್ದೇ ತವರು ದೇಶದಲ್ಲಿ ಅವನಿಗೆ ನಿಷೇಧವಿದೆ ಎಂದಿದ್ದಳು. ನಿತ್ಯಾನಂದರು ಹಿಂದೂ ಧರ್ಮದ 10,000 ಸ್ಥಳೀಯ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುತ್ತಿದ್ದು ಇದರಲ್ಲಿ ಆದಿ ಶೈವ ಸ್ಥಳೀಯ ಕೃಷಿ ಬುಡಕಟ್ಟು ಕೂಡ ಸೇರ್ಪಡೆಗೊಂಡಿದೆ ಎಂದಿದ್ದಳು.

ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಖಾಯಂ ರಾಯಭಾರಿಯೆಂದೇ ಆಕೆಯ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಅದರಂತೆಯೇ ವಿಶ್ವಸಂಸ್ಥೆಯ ಸಭೆಯಲ್ಲಿ ತನ್ನನ್ನು ಪರಿಚಯಿಸಿಕೊಂಡಿದ್ದಳು.

ಆಕೆ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿಕೊಂಡಿರುವ ಪೋಟೋವೊಂದರಲ್ಲಿ ಕೈಯ ತೋಳಿನಲ್ಲಿ ನಿತ್ಯಾನಂದನ ಹಚ್ಚೆ ಹಾಕಿಸಿಕೊಂಡಿದ್ದಾಳೆ. 'ಕೈಲಾಸ' ವೆಬ್‌ಸೈಟ್, 150 ದೇಶಗಳಲ್ಲಿ ತನ್ನ ರಾಯಭಾರ ಕಚೇರಿ ಮತ್ತು ಎನ್‌ಜಿಒಗಳನ್ನು ಹೊಂದಿದ್ದು, ಆ ಎಲ್ಲಾ ಕಡೆಗೂ ಹೆಣ್ಣು ಮಕ್ಕಳೇ ಮುಖ್ಯಸ್ಥರಾಗಿದ್ದಾರೆ.

Latest Videos

click me!