ರವಿಕೆ, ಬ್ರಾ, ಕಮೋಡ್‌, ಸೀರೆ..ಬಾಂಗ್ಲಾದೇಶದ ವಿದ್ಯಾರ್ಥಿ ಚಳುವಳಿಯ 'ಐಕಾನಿಕ್‌' ಚಿತ್ರಗಳು!

First Published | Aug 6, 2024, 8:03 PM IST

ವಿದ್ಯಾರ್ಥಿ ಚಳುವಳಿ ಎನ್ನುವ ಹೆಸರಿನಲ್ಲಿ ಆರಂಭಗೊಂಡ ಬಾಂಗ್ಲಾದೇಶದ ಪ್ರತಿಭಟನೆ ಈಗ ದಂಗೆಯ ರೂಪ ಪಡೆದುಕೊಂಡಿದೆ. ಪ್ರಧಾನಿ ಅಧಿಕೃತ ನಿವಾಸಕ್ಕೆ ನುಗ್ಗಿ ಪ್ರತಿಭಟನಾಕಾರರು ಏನೆಲ್ಲಾ ತೆಗೆದುಕೊಂಡು ಹೋಗಿದ್ದಾರೆ ಅನ್ನೋದರ ಚಿತ್ರಗಳು ಇಲ್ಲಿದೆ..
 

ಈತನನ್ನ ಬಾಂಗ್ಲಾದೇಶದ ಬ್ರಾ ರನ್ನರ್‌ ಎನ್ನಬಹುದು. ಪ್ರಧಾನಿ ನಿವಾಸದ ಲೂಟಿ ಮಾಡುವ ವೇಳೆ ಪ್ರತಿಭಟನಾಕಾರನಿಗೆ ಸಿಕ್ಕಿದ ಶೇಖ್‌ ಹಸೀನಾ ಅವರ ಒಳ ಉಡುಪು.

ಬಾಂಗ್ಲಾದೇಶದ ಕ್ರಾಸ್‌ಡ್ರೆಸರ್‌ ಈತ ಆಗಬಹುದು. ಲೂಟಿಯಲ್ಲಿ ತನಗೆ ಸಿಕ್ಕ ರವಿಕೆಯನ್ನು ಹೆಮ್ಮೆಯಿಂದ ಪ್ರದರ್ಶನ ಮಾಡ್ತಿರೋ ವಿದ್ಯಾರ್ಥಿ.

Tap to resize

ಬಾಂಗ್ಲಾದೇಶದಲ್ಲಿ ಒಂದೂ ಕೆಎಫ್‌ಸಿ ಸೆಂಟರ್‌ ಇಲ್ಲವೇನೋ ಎನ್ನುವಂತೆ ಪ್ರಧಾನಿ ನಿವಾಸದ ಲೂಟಿಯ ವೇಳೆ ಚಿಕನ್‌ ಬಿರಿಯಾನಿ ತಿಂದ ವಿದ್ಯಾರ್ಥಿ,

ಹೊಡಿರಿ ಚಪ್ಪಾಳೆ.. ಈಕೆ ಬಾಂಗ್ಲಾದೇಶದ ಪ್ರಗತಿಪರ ನಾರಿ.. ಶೇಖ್‌ ಹಸೀನಾ ನಿವಾಸ ಲೂಟಿಯ ವೇಳೆ ಸೂಟ್‌ಕೇಸ್‌ ಕದ್ದುಕೊಂಡು ಹೋಗುತ್ತಿರುವ ಮಹಿಳೆ.

ಇವನಿಗೆ ಏನ್‌ ಅನ್ಬಹುದು.. ಬಾಂಗ್ಲಾದೇಶದ ದಿ ಗ್ರೇಟ್‌ ಕೂಲಿ ನಂ.1 ಈತ. ಸೂಟ್‌ಕೇಸ್‌ಅನ್ನೂ ಬಿಡದೇ ಮನೆಗೆ ಕೊಂಡೊಯ್ಯುತ್ತಿರುವ ವಿದ್ಯಾರ್ಥಿ.

ಈತನನ್ನ ಬಾಂಗ್ಲಾದೇಶದ ಮುಂದಿನ ಸರ್ಕಾರ ಖಂಡಿತವಾಗಿ ಮೀನುಗಾರಿಕೆ ಸಚಿವನನ್ನಾಗಿಯೇ ಮಾಡ್ಬೇಕು. ಪ್ರಧಾನಿ ನಿವಾಸದ ಕೆರೆಯಲ್ಲಿ ಮೀನು ಹಿಡಿದು ಹೊತ್ಕೊಂಡು ಹೋಗ್ತಿದ್ದಾನೆ.

ಬಕೆಟ್‌ ಕಳ್ಳ ಈ ಮದನಾರಿ... ಶೇಖ್‌ ಹಸೀನಾ ಅವರ ಸೀರೆಯನ್ನು ಧರಿಸಿಕೊಂಡು ನಿವಾಸದಲ್ಲಿದ್ದ ಬಕೆಟ್‌ನಲ್ಲಿ ಬಟ್ಟೆ ತುಂಬಿಸಿಕೊಂಡು ಹೊರಟ ವಿದ್ಯಾರ್ಥಿ!

ಯೆಸ್‌.. ಈತ ಖಂಡಿತವಾಗಿ ಬಾಂಗ್ಲಾದೇಶದ ಅಲೆಗ್ಸಾಂಡರ್‌ ಗ್ರಾಹಂ ಬೆಲ್‌ ಆಗೋಕೆ ಸೂಕ್ತ. ಪ್ರಧಾನಿ ನಿವಾಸದಿಂದ ಫೋನ್‌ ಕಿತ್ಕೊಂಡು ಹೋಗಿದ್ದಾನೆ. ಅದರಿಂದ ಏನ್‌ ಮಾಡ್ತಾನೋ ಗೊತ್ತಿಲ್ಲ.

ಇವ ಬಾಂಗ್ಲಾದ ಕಮೋಡೋ ಡ್ರ್ಯಾಗನ್‌ ಆಗೋಕೆ ಬೆಸ್ಟ್‌. ಪ್ರಧಾನಿ ನಿವಾಸದಲ್ಲಿ ಕಮೋಡ್‌ನ ಈತ ಎಲ್ಲಿ ಹುಡುಕಿದ್ನೋ ಏನೋ.. ಎತ್ಕೊಂಡು ಹೊರಟಿದ್ದಾನೆ.

ಈತ ಮಾಡಿದ್ದ ಕಾರ್ಯವನ್ನ ಬಾಂಗ್ಲಾದೇಶ ಗೋಲ್ಡನ್‌ ಶವರ್‌ ರೆವನ್ಯೂಷನ್‌ ಅಂತಲೇ ಹೇಳ್ಬೇಕು. ಮೂತ್ರ ಮಾಡೋಕೆ ಜಾಗ ಇಲ್ದೆ ದೇಶದ ಧೀಮಂತ ನಾಯಕನ ಮೂರ್ತಿಯ ಮೇಲೆ ಮಾಡಿದ್ದಾನೆ.

Latest Videos

click me!