ವಿಡಿಯೋ ಕಾನ್ಫರೆನ್ಸ್ ವೇಳೆ ಬಟ್ಟೆ ಬಿಚ್ಚಿದ ನಾಯಕಿ, ಸಚಿವರೆಲ್ಲಾ ಶಾಕ್!

First Published | Jun 6, 2020, 2:41 PM IST

ಕೊರೋನಾದಿಂದ ನಿರ್ಮಾಣವಾದ ಪರಿಸ್ಥಿತಿಯನ್ನು ಬಹುಶಃ ಯಾರೂ ಕನಸಿನಲ್ಲೂ ಊಹಿಸಿರಲಿಕ್ಕಿಲ್ಲ. ಈ ಮಹಾಮಾರಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಹೇರುವಂತೆ ಮಾಡಿದೆ. ಫ್ಯಾಕ್ಟರಿ, ಅಂಗಡಿ, ಆಫೀಸ್, ಸ್ಕೂಲ್ ಕಾಲೇಜು ಹೀಗೆ ಎಲ್ಲವೂ ಮುಚ್ಚಲಾಗಿದೆ. ಹೀಗಿರುವಾಗ ವಿಡಿಯೋ ಕಾನ್ಫರೆನ್ಸ್‌ಗಳಷ್ಟೇ ಜನರಿಗೆ ತಮ್ಮ ಕೆಲಸ ಮುಂದುವರೆಸಲು ಇರುವ ಏಕೈಕ ಮಾರ್ಗವಾಗಿ ಉಳಿದಿದೆ. ಅದರಲ್ಲೂ ವಿಶೇಷವಾಗಿ ಜೂಮ್ ಕಾಲ್‌ ಬಹಳ ವೇಗವಾಗಿ ಹೆಜ್ಜೆ ಇರಿಸಿದೆ. ಅನೇಕ ಸಂಸ್ಥೆಗಳ ಅಧಿಕೃತ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಕರೆಗಳನ್ನು ಜೂಮ್ ಕಾಲ್ ಮೂಲಕವೇ ಮಾಡಲಾಗುತ್ತಿದೆ. ಹೀಗಿರುವಾಗ ಮೆಕ್ಸಿಕೋದಲ್ಲಿ ಅಧಿಕಾರದಲ್ಲಿರುವ ಸರ್ಕಾರ ಜೂಮ್ ಕಾಲ್ ಮೂಲಕ ತಮ್ಮ ನಾಯಕರೊಂದಿಗೆ ಮೀಟಿಂಗ್ ನಡೆಸಿದ್ದಾರೆ. ಇದರಲ್ಲಿ ಸರ್ಕಾರದ ಎಲ್ಲಾ ಸಚಿವರು ಭಾಗಿಯಾಗಿದ್ದರು. ಹೀಗಿರುವಾಗ ನಾಯಕಿಯೊಬ್ಬರು ಅಚಾನಕ್ಕಾಗಿ ಎದ್ದು ತಮ್ಮ ಬಟ್ಟೆ ಬಿಚ್ಚಲಾರಂಭಿಸಿದ್ದಾರೆ. ಇದನ್ನು ಎಲ್ಲರೂ ಗಮನಿಸಿದ್ದು, ಆನ್‌ಲೈನ್‌ ಕರೆಯಲ್ಲಿ ಅನಾನುಕೂಲ ವಾತಾವರಣ ನಿರ್ಮಾಣವಾಗಿದೆ. ಆದರೆ ವಾಸ್ತವವಾಗಿ ಇದು ತಪ್ಪು ತಿಳುವಳಿಕೆಯಿಂದ ನಡೆದ ಘಟನೆಯಾಗಿದ್ದು, ಸಚಿವೆ ಕೂಡಲೇ ಕ್ಷಮೆ ಯಾಚಿಸಿದ್ದಾರೆ.

ಈ ಘಟನೆ ಮೇ. 29 ರಂದು ನಡೆದಿದೆ. ಮೆಕ್ಸಿಕೋ ಸರ್ಕಾರ ಈ ವಿಡಿಯೋ ಕಾನ್ಪರೆನ್ಸ್ ಆಯೋಜಿಸಿದ್ದು, ಎಲ್ಲಾ ಸಚಿವರು ಇದರಲ್ಲಿ ಭಾಗಿಯಾಗಿದ್ದರು.
ಹೀಗಿರುವಾಗಲೇ 66 ವರ್ಷದ ಸೆನೇಟರ್ ಮಾರ್ಥಾ ಲೂವಿಸ್ ಮಿಚೆರ್ ಎದ್ದು ಎಲ್ಲರೆದುರು ಬಟ್ಟೆ ಬಿಚ್ಚತೊಡಗಿದರು. ಇದನ್ನು ಗಮನಿಸಿದ ಎಲ್ಲರೂ ದಂಗಾಗಿದ್ದಾರೆ.
Tap to resize

ಈ ಸಭೆಯಲ್ಲಿ ನ್ಯಾಷನಲ್ ರಿಜನರೇಷನ್ ಮೂವ್ಮೆಂಟ್ ಪಾಲಿಟಿಕಲ್ ಪಾರ್ಟಿಯ ನಾಯಕರು, ಬ್ಯಾಂಕಕ್ಆಫ್ ಮೆಕ್ಸಿಕೋ ಸಿಬ್ಬಂದಿ ಹಾಗೂ ಅನೇಕ ಪತ್ರಕರ್ತರೂ ಶಾಮೀಲಾಗಿದ್ದರು. ಇವರೆಲ್ಲರೆದುರು ಈ ಎಡವಟ್ಟು ನಡೆದಿದೆ.
ಈ ಮೀಟಿಂಗ್‌ನ ಸ್ಕ್ರೀನ್‌ಶಾಟ್ಸ್ ಭಾರೀ ವೇಗವಾಗಿ ವೈರಲ್ ಆಗಿದೆ. ಈ ಮೀಟಿಂಗ್‌ನಲ್ಲಿ ಕೊರೋನಾದಿಂದ ದೇಶದ ಆರ್ಥಿಕತೆ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಕುರಿತಾದ ಚರ್ಚೆ ನಡೆಯುತ್ತಿತ್ತು. ಹೀಗಿರುವಾಗ ಈ ಘಟನೆ ನಡೆಯುವಾಗ ಯಾರೋ ಒಬಬ್ಬ ಸದಸ್ಯ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದಾರೆ.
ಈ ಘಟನೆ ಬಳಿಕ ಸೆನೆಟರ್ ಮಾರ್ಥಾ ಎಲ್ಲರೆದುರು ಕ್ಷಮೆ ಯಾಚಿಸಿದ್ದಾರೆ. ಎಡವಟ್ಟಿಂದಾಗಿ ಹೀಗಾಯಿತು ಎಂದು ತಿಳಿಸಿದ್ದಾರೆ. ತಾನು ಬಟ್ಟೆ ಬದಲಾಯಿಸುವ ಮುನ್ನ ವಿಡಿಯೋ ಆಫ್ ಮಾಡಿದ್ದೆ. ಆದರೆ ಕಣ್ತಪ್ಪಿನಿಂದ ವಿಡಿಯೋ ಬದಲು ಆಡಿಯೋ ಮ್ಯೂಟ್ ಆಗಿದೆ ಎಂದಿದ್ದಾರೆ.
ಈ ಫೋಟೋಗಳು ವೈರಲ್ ಆದ ಬಳಿಕ ಸೆನೆಟರ್ ಮಾರ್ಥಾ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ. ಅನೇಕರು ಇದು ಪಬ್ಲಿಸಿಟಿ ಸ್ಟಂಟ್ ಎಂದು ಹಣಿದಿದ್ದಾರೆ. ಆದರೆ ಮಾರ್ಥಾ ಹೀಗೆ ಹಿಯಾಳಿಸಿದವರಿಗೆ ಭರ್ಜರಿಯಾಗೇ ಮಾತಿನೇಟು ಕೊಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಾರ್ಥಾ ಏನು ನಡೆದಿದೆಯೋ ಅದು ನಡೆಯಬಾರದಿತ್ತು. ಒಂದು ಎಡವಟ್ಟಿನಿಂದ ಇದು ಸಂಭಜವಿಸಿದೆ. ಆದರೆ ಇದಾದ ಬಳಿಕ ಅವ ಬಾಡಿ ಶೇಮಿಂಗ್ ಕಮೆಂಟ್ ಮಾಡಲಾಗುತ್ತಿದ್ದು, ಇದು ಅಕ್ಷ್ಮ್ಯ ತಪ್ಪಾಗಿದೆ.
ನನಗೆ ನನ್ನ ದೇಹದ ಮೇಲೆ ಅಭಿಮಾನವಿದೆ ಎಂದು ಮಾರ್ಥಾ ತಿಳಿಸಿದ್ದಾರೆ. ಏನು ಸಂಭವಿಸಿದೆಯೋ ಅದೊಂದು ಕಹಿ ಘಟನೆಯಾಗಿದ್ದು, ಸದ್ಯ ಈ ಸ್ಕ್ರೀನ್ ಶಾಟ್ಸ್ ಶೇರ್ ಮಾಡಿದವರ ಪತ್ತೆ ಹಚ್ಚವ ನಿಟ್ಟಿನಲ್ಲಿ ತನಿಖೆ ಆರಂಭವಾಗಿದೆ.

Latest Videos

click me!