ಪ್ರತಿಭಟನಾಕಾರರ ಪರ ನಿಂತ ಟ್ರಂಪ್ ಮಗಳು, ಇಕ್ಕಟ್ಟಿನಲ್ಲಿ ಅಮೆರಿಕ ಅಧ್ಯಕ್ಷ!

First Published Jun 4, 2020, 5:33 PM IST

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿನ ಬಳಿಕ ಅಮೆರಿಕದಲ್ಲಿ ಹಿಂಸಾಚಾರ ಪ್ರತಿಭಟನೆಗಳು ಜನ್ಮ ತಾಳಿವೆ. ಈ ಪ್ರತಿಭಟನೆಯನ್ನು ವಿಶ್ವಾದ್ಯಂತ ಎಲ್ಲಾ ರಾಷ್ಟ್ರಗಳು ಬೆಂಬಲಿಸಿವೆ. ಈ ಹಿಂಸಾಚಾರ ತಡೆಯುವಲ್ಲಿ ಟ್ರಂಪ್ ಆಡಳಿತ ಸಂಪೂರ್ಣವಾಗಿ ವಿಫಲಗೊಂಡಿದೆ. ಆದರೀಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಟಿಫ್ನಿ ಟ್ರಂಪ್ ಕೂಡಾ ಈ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಮಗಳ ಈ ನಡೆ ಟ್ರಂಪ್ ಸಮಸ್ಯೆ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈಕೆ ಹಿರಿ ಮಗಳು ಇವಾಂಕಾರಂತೆ ರಾಜಕೀಯ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿಲ್ಲ. ಹಾಗಾದ್ರೆ ಈಕೆ ಏನು ಮಾಡುತ್ತಾರೆ? ಇಲ್ಲಿದೆ ವಿವರ
 

ಫ್ಲಾಯ್ಡ್ ಸಾವಿನ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸಿರವ ಟಿಫ್ನಿ ಬ್ಲ್ಯಾಕ್ ಸ್ಕ್ರೀನ್ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಆಕೆಯ ತಾಯಿ ಮಾರ್ಲಾ ಮ್ಯಾಪಲ್ಸ್ ಕೂಡಾ ಪ್ರತಿಭಟನಾಕಾರರನ್ನು ಸಮರ್ಥಿಸಿಕೊಂಡಿದ್ದಾರೆ.
undefined
ಯಾರು ಟಿಫ್ನಿ?:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಒಟ್ಟು ಮೂರು ಮದುವೆಗಳಾಗಿವೆ. ಇವರಿಗೆ ಒಟ್ಟು ಐವರು ಮಕ್ಕಳು. ಡೊನಾಲ್ಡ್ ಟ್ರಂಪ್ ಜೂನಿಯರ್, ಇವಾಂಕಾ, ಎರಿಕ್, ಟಿಫ್ನಿ ಹಾಗೂ ಬ್ಯಾರನ್ ಟ್ರಂಪ್. ಟಿಫ್ನಿ ಡೊನಾಲ್ಡ್ ಟ್ರಂಪ್ ಎರಡನೇ ಹೆಂಡತಿ ಮಾರ್ಲಾ ಮ್ಯಾಪಲ್ಸ್ ಮಗಳು. ಟ್ರಂಪ್ ಮಾರ್ಲಾ ಜೊತೆ 1993ರಲ್ಲಿ ವಿವಾಹವಾಗಿದ್ದರು.
undefined
ಟ್ರಂಪ್ ಹಾಗೂ ಮಾರ್ಲಾ ಕೇವಲ ಆರು ವರ್ಷ ಜೊತೆಗಿದ್ದರು. ಇದಾದ ಬಳಿಕ ಇಬ್ಬರೂ 1999ರಲ್ಲಿ ಬೇರೆಯಾದರು. ಬಳಿಕ ಟ್ರಂಪ್ ಮಲೇನಿಯಾ ಜೊತೆ ವಿವಾಹವಾದರು. ಮಲೇನಿಯಾ ಹಾಗೂ ಟ್ರಂಪ್ ಮಗನ ಹೆಸರು ಎರಿಕ್.
undefined
ಟಿಫ್ನಿ ರಾಜಕೀಯದಿಂದ ಬಹಳ ದೂರವಿರುತ್ತಾರೆ. ಇದೇ ಕಾರಣದಿಂದ ಅವರು ಶ್ವೇತ ಭವನದಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಟಿಫ್ನಿ ರಾಜಕೀಯ ಹಾಗೂ ತನ್ನ ತಂದೆಯ ಉದ್ಯಮದಲ್ಲಿ ಆಸಕ್ತಿ ತೋರಿಸದೆ ಕಾನೂನಿನಲ್ಲಿ ಹೆಚ್ಚು ಆಸಕ್ತಿ ತೋರಿಸಿದ್ದಾರೆ.
undefined
ಇಷ್ಟೇ ಅಲ್ಲ ಟಿಫ್ನಿ ತನ್ನ ತಮ್ಮಂದಿರು ಹಾಗೂ ಇವಾಂಕಾ ಜೊತೆಯೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇನ್ನು ಟಿಇಫ್ನಿ ತಾಯಿ ಮಾರ್ಲಾ ಓರ್ವ ನಟಿ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ.
undefined
ಟಿಫ್ನಿ 13 ಅಕ್ಟೋಬರ್ 1993 ರಲ್ಲಿ ಜನಿಸಿದ್ದರು. ಇವರು ಕ್ಯಾಲಿಫೋರ್ನಿಯಾದಲ್ಲಿ ಹುಟ್ಟಿ ಬೆಳೆದವರು. ಇವರು ತನ್ನ ತಾಯಿ ಜೊತೆ ವಾಸಿಸುತ್ತಾರೆ.
undefined
ಟಿಫ್ನಿ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆಕ್ಟಿವ್ ಆಗಿರುತ್ತಾರೆ. ಜನರು ಅವರನ್ನು ಹೆಚ್ಚು ಇಷ್ಟಪಡುತ್ತಾರೆ.
undefined
ಅವರ ಜೀವನ ಶೈಲಿಯೂ ಬಹಳ ಸರಳ. ಅವರೊಂದು ಬಾರಿ ಬಟ್ಟೆ ವಿಚಾರವಾಗಿ ಬಹಳಷ್ಟು ಚರ್ಚೆಗೀಡಾಗಿದ್ದರು. ಸೇಲ್ ಒಂದರಲ್ಲಿ ಖರೀದಿಸಿದ್ದ ಬಟ್ಟೆಯನ್ನು ಧರಿಸಿ ರಿಪಬ್ಲಿಕನ್ ಪಾರ್ಟಿಯಲ್ಲಿ ಅವರು ಭಾಗಿಯಾಗಿದ್ದರು.
undefined
ಟಿಫ್ನಿ ಸದ್ಯ ನೈಜೀರಿಯಾದ ಮೈಕಲ್ ಬೊಲೂಸ್ ಎಂಬವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅವರು ತಮ್ಮ ಬಾಯ್‌ಫ್ರೆಂಡ್ ಜೊತೆ ಹಲವಾರು ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ. ಕೆಲ ಸಮಯದ ಹಿಂದೆ ಅವರು ಮೈಕಲ್‌ನನ್ನು ತಂದೆಗೂ ಪರಿಚಯ ಮಾಡಿಕೊಟ್ಟಿದ್ದರು.
undefined
2019ರಲ್ಲಿ ಟ್ರಂಪ್ ತಮ್ಮ ಓರ್ವ ಸಹಾಯಕನನ್ನು ಕೆಲಸದಿಂದ ಕಿತ್ತು ಹಾಕಿದ್ದರು. ಅವರು ಟಿಫ್ನಿಯನ್ನು ಡುಮ್ಮಿ ಎಂದು ಕರೆದಿದ್ದೇ ಇದಕ್ಕೆ ಕಾರಣವೆನ್ನಲಾಗಿದೆ. ಮಗಳು ದಪ್ಪಗಿದ್ದಾಳೆ ಎಂಬ ಕಾರಣಕ್ಕಾಗಿ ಟ್ರಂಪ್ ಟಿಫ್ನಿ ಜೊತೆ ಫೋಟೋ ತೆಗೆಸಿಕೊಳ್ಳುವುದರಿಂದ ನುಣುಚಿಕೊಳ್ಳುತ್ತಾರೆ ಎಂದಿದ್ದರು.
undefined
click me!