ಲೈವ್‌ ವಿಡಿಯೋ ಮಾಡಿ ಮಗುವಿಗೆ ಜನ್ಮ ಕೊಟ್ಟ ಮಹಿಳೆ!: ವೈರಲ್ ಆಯ್ತು ಡೆಲಿವರಿ ದೃಶ್ಯ

First Published Jun 6, 2020, 12:01 PM IST

ಕೊರೋನಾ ವೈರಸ್ ಮಹಾಮಾರಿ ತೊಲಗಿಸಲು ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗ ಜನರು ಮನೆಯಲ್ಲೇ ಇದ್ದು, ಚಿತ್ರ ವಿಚಿತ್ರ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿ ಅನೇಕ ಮಂದಿಯ ಗಮನ ಸೆಳೆದಿದೆ. ಯಾರೂ ಊಹಿಸಲು ಸಾಧ್ಯವಾಗದ ಘಟನೆಯ ವಿಡಿಯೋಗಳು ಕೂಡಾ ಇದರಲ್ಲಿ ಶಾಮೀಲಾಗಿವೆ. ಈ ಮೂಲಕ ಈ ಲಾಕ್‌ಡೌನ್‌ಗೆ ಜನರು ಹೊಸ ಆಯಾಮ ನೀಡಿದ್ದಾರೆ. ಹೀಗಿರುವಾಗ ಈ ಲಾಕ್‌ಡೌನ್ ನಡುವೆ ತಾಯಿಯೊಬ್ಬಳು ಲಾಕ್‌ಡೌನ್‌ ವೇಳೆ ಅಪಾಯಕಾರಿ ನಿರ್ಧಾರ ತೆಗೆದುಕೊಂಡಿದ್ದಾಳೆ. ಇದರ ಫಲಿತಾಂಶ ನೆಗೆಟಿವ್ ಆಗುವ ಸಾಧ್ಯತೆಗಳೂ ಇದ್ದವು. ಹೌದು ಈಕೆ ಮನೆಯಲ್ಲೇ ಮಗುವಿಗೆ ಜನ್ಮ ನೀಡಲು ನಿರ್ಧರಿಸಿದ್ದಾಳೆ. ಆಸ್ಟ್ರೇಲಿಯಾದ ತಾಯಿ ಈ ನಿರ್ಧಾರ ತೆಗೆದುಕೊಂಡಿದ್ದು, ಡೆಲಿವರಿಯನ್ನು ಇನ್ಸ್ಟಾಗ್ರಾಂನಲ್ಲಿ ಲೈವ್ ನೀಡಿದ್ದಾರೆ. 

ಐವರು ಮಕ್ಕಳ ತಾಯಿ ಎಮ್ಮಾ ತನ್ನ ಕಿರಿಯ ಮಗುವಿಗೆ ಜನ್ಮ ಕೊಡುವುದನ್ನು ಇಡೀ ಜಗತ್ತೇ ನೋಡಬೇಕೆಂಬ ಆಸೆ ಇಟ್ಟುಕೊಂಡಿದ್ದರು. ಹೀಗಾಗಿ ಈಕೆ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ಪೋಸ್ಟ್ ಕೂಡಾ ಮಾಡಿದ್ದಾರೆ.
undefined
ತಾನು ಆರನೇ ಮಗುವಿಗೆ ಜನ್ಮ ನೀಡುವ ದೃಶ್ಯ ಲೈವ್ ಪ್ರಸಾರವಾಗಬೇಕೆಂದು ಬಯಸಿದ್ದರು.
undefined
ಹೀಗಾಗಿಅವರು ಗೆಳೆಯರೇ ಇಂದು ರಾತ್ರಿ ನಮ್ಮ ಮನೆಯಲ್ಲಿ ಏನೋ ನಡೆಯುವುದಿದೆ ಎಂದು ಪೋಸ್ಟ್ ಮಾಡಿದ್ದರು.
undefined
ಅವರಕುಟುಂಬ, ಗೆಳೆಯರು ಹಾಗೂ ಮನೆಯಲ್ಲಿದ್ದ ಸಾಕು ನಾಯಿ ಕೂಡಾ ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಬೆಳಗ್ಗೆ ಐದು ಗಂಟೆಗೆ ಅವರು ಪುಟ್ಟ ಕಂದನಿಗೆ ಜನ್ಮ ನೀಡಿದರು.
undefined
ಹೆರಿಗೆ ನೋವಿಗೂ ಮುನ್ನ ಎಮ್ಮಾ ಮಕ್ಕಳು ತಾಯಿಗೆ ಧೈರ್ಯ ತುಂಬಲು ಹಾರ ತೊಡಿಸಿದ್ದಾರೆ. ಅವರ ಕುಟುಂಬ ಪ್ರತಿ ಕ್ಷಣ ಅವರೊಂದಿಗಿತ್ತು.
undefined
ತನ್ನ ಡೆಲಿವರಿಯಾಗುವುದು ಲೈವ್ ಕೊಡಬೇಕೆಂಬ ಇಚ್ಛೆ ಎಮ್ಮಾ ಅವರದ್ದಾಗಿತ್ತು.
undefined
ಎಮ್ಮಾ ತಾಯಿಯಾಗುವುದಕ್ಕೂ ಮೊದಲು ಹೆರಿಗೆ ನೋವು ಹಾಗೂ ಮಗುವಿಗೆ ಜನ್ಮ ನೀಡುವ ವಿಚಾರವಾಗಿ ಬಹಳ ಗಾಬರಿಗೀಡಾಗಿದ್ದರು.
undefined
ಹೀಗಿದ್ದರೂ ತಮ್ಮ ಭಯವನ್ನು ಜಯಿಸಿದ ಎಮ್ಮಾ ಆರನೇ ಮಗುವಿಗೆ ಜನ್ಮ ನೀಡಿದ್ದಾರೆ. ತನ್ನ ಭಯ ನಿಂತಿದೆ ಎಂದು ಎಮ್ಮಾ ನುಡಿದಿದ್ದಾರೆ.
undefined
click me!