ಭಾರತದಲ್ಲಿ ಸೋಶಿಯಲ್ ಮೀಡಿಯಾ ಬಳಕೆಗೆ ಯಾವುದೇ ವಯಸ್ಸಿನ ನಿರ್ಬಂಧ ಇಲ್ಲ. ಹೀಗಾಗಿ ಮಕ್ಕಳಿಂದ ಹಿಡಿದು ಬಹುತೇಕ ಎಲ್ಲರು ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಆ್ಯಪ್ ಬಳಸುತ್ತಿದ್ದಾರೆ. ಆದರೆ ಮೆಟಾ ನಡೆಸಿದ ಆಂತರಿಕ ಸಮೀಕ್ಷೆಯೊಂದು ಹೊರಬಿದ್ದಿದೆ. ಇದು ಪೋಷಕರ ಚಿಂತೆ ಹೆಚ್ಚಿಸಿದೆ. ಈ ವರದಿ ಪ್ರಕಾರ ಇನ್‌ಸ್ಟಾಗ್ರಾಂ ಮಕ್ಕಳು ಹಾಗೂ ಹದಿಹರೆಯದ ಮಂದಿಗೆ ಆಪತ್ತು ತರುತ್ತಿದೆ ಎನ್ನುತ್ತಿದೆ.
25
ಅಶ್ಲೀಲ ಚಿತ್ರ ಪ್ರತ್ಯಕ್ಷ
13 ರಿಂದ 15 ವರ್ಷದೊಳಗಿನ ಮಕ್ಕಳು ಇನ್‌ಸ್ಟಾಗ್ರಾಂ ಬಳಕೆ ಮಾಡುವಾಗ ಅಶ್ಲೀಲ ಫೋಟೋಗಳು ಪ್ರದರ್ಶನವಾಗುತ್ತದೆ. ನಾವು ಕ್ಲಿಕ್ ಮಾಡಿದ್ದರೂ, ಸರ್ಚ್ ಮಾಡದಿದ್ದರೂ ಅಶ್ಲೀಲ ಫೋಟೋಗಳು ಕಾಣುತ್ತದೆ. ಶೇಕಡಾ 19 ರಷ್ಟು ಹದಿಹರೆಯದ ಮಂದಿ ಅಶ್ಲೀಲ ಫೋಟೋ ಪ್ರತ್ಯಕ್ಷವಾಗುತ್ತಿದೆ ಎಂದು ರಿಪೋರ್ಟ್ ಮಾಡಿದ್ದಾರೆ. ಇನ್ನು ಹಲವರು ಇನ್‌ಸ್ಟಾಗ್ರಾಂ ತೋರಿಸುವ ಅಶ್ಲೀಲ ಫೋಟೋಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ.
35
ಹದಿಹರೆಯದವರ ಮೇಲೆ ಪರಿಣಾಮ
ಕ್ಯಾಲಿಫೋರ್ನಿಯಾದಲ್ಲಿ ಈ ಕುರಿತು ದಾಖಲಾಗಿರುವ ದೂರಿನ ಕಾರಣದಿಂದ ಆಂತರಿಕ ಸಮೀಕ್ಷೆ ನಡೆಸಿ ಕ್ಯಾಲಿಫೋರ್ನಿಯಾ ಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಲಾಗಿದೆ. ಈ ವದಿಯ ಸ್ಫೋಟಕ ಅಂಶಗಳು ಬಯಲಾಗಿದೆ. ಈ ರೀತಿಯ ಅಶ್ಲೀಲ ಚಿತ್ರಗಳು ಹದಿಹರೆಯದವರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.ಕ್ಯಾಲಿಫೋರ್ನಿಯಾ ಕೋರ್ಟ್ ಇನ್‌ಸ್ಟಾಗ್ರಾಂ ಮುಖ್ಯಸ್ಥ ಆ್ಯಡಮ್ ಮೊಸ್ಸೆರಿ ವಿಚಾರಣೆ ನಡೆಸಿದೆ.
ಈ ವರದಿಯಲ್ಲಿ ಹಲವು ಸ್ಫೋಟಕ ಮಾಹಿತಿಗಳಿವೆ. ಇನ್‌ಸ್ಟಾಗ್ರಾಂ ಮಕ್ಕಳನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿದೆ ಎಂದಿದೆ. ಹದಿ ಹರೆಯದ ಮಕ್ಕಳನ್ನು ಇನ್‌ಸ್ಟಾಗ್ರಾಂ ಸೆಳೆಯುವಂತೆ ಮಾಡುತ್ತಿದೆ. ಇದರಿಂದ ಮಕ್ಕಳು, ಆವರ ಆಪ್ತರು, ಗೆಳೆಯರು, ಪೋಷಕರು ಬಳಸುವಂತೆ ಮಾಡುವುದು ಇನ್‌ಸ್ಟಾಗ್ರಾಂ ಉದ್ದೇಶವಾಗಿದೆ. ಇದರ ನಡುವೆ ಹದಿಹರೆಯದ ಮಕ್ಕಳನ್ನು ಇನ್‌ಸ್ಟಾದಲ್ಲಿ ಅಡಿಕ್ಟ್ ಮಾಡುವಂತೆ ಮಾಡಲು ಅಶ್ಲೀಲ ಫೋಟೋ, ಅನಗತ್ಯ ಫೋಟೋಗಳನ್ನು ಕಾಣುವಂತೆ ಮಾಡಲಾಗುತ್ತಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.
55
ಇನ್‌ಸ್ಟಾಗ್ರಾಂಗೆ ಕಾನೂನು ಸಂಕಷ್ಟ
ಇನ್‌ಸ್ಟಾಗ್ರಾಂ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಅಶ್ಲೀಲ ಫೋಟೋಗಳನ್ನು ನೋಡಬೇಕಾಗಿ ಬಂದಿದೆ. ಹಲವರಲ್ಲಿ ಇನ್‌ಸ್ಟಾಗ್ರಾಂ ಹುಚ್ಚು ಹಿಡಿಸಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ ಅನ್ನೋ ಆರೋಪದ ಜೊತೆಗೆ ಕಾನೂನು ಸಂಕಷ್ಟ ಎದುರಿಸುತ್ತಿದೆ.
ಇನ್‌ಸ್ಟಾಗ್ರಾಂಗೆ ಕಾನೂನು ಸಂಕಷ್ಟ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ