ಇಸ್ರೇಲ್ ಸೈನಿಕರಿಗೆ ಉಚಿತ ಊಟ ಘೋಷಣೆ: ಮೆಕ್‌ಡೊನಾಲ್ಡ್ಸ್ ಔಟ್ಲೆಟ್‌ ಮೇಲೆ ಪ್ಯಾಲೆಸ್ತೀನ್‌ ಬೆಂಬಲಿಗರ ದಾಳಿ!

First Published | Oct 15, 2023, 12:39 PM IST

ಇಸ್ರೇಲ್‌ ಸೈನಿಕರಿಗೆ ಉಚಿತ ಊಟ ನೀಡೋದಾಗಿ ಮೆಕ್‌ಡೊನಾಲ್ಡ್ಸ್‌ನ ಇಸ್ರೇಲ್‌ ಘಟಕ ಘೋಷಣೆ ಮಾಡಿದ್ದು, ಇದಕ್ಕೆ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ಮೇಲೆ ಹಮಾಸ್‌ ದಾಳಿ ನಡೆದ ಬೆನ್ನಲ್ಲೇ ಇಸ್ರೇಲ್‌ ಗಾಜಾದಲ್ಲಿ ಪ್ರತಿದಾಳಿ ನಡೆಸುತ್ತಿದೆ. ಈ ಹಿನ್ನೆಲೆ ಇಸ್ರೇಲ್ - ಪ್ಯಾಲೆಸ್ತೀನ್‌ ಯುದ್ಧ ಆರಂಭವಾಗಿದೆ. ಈ ಮಧ್ಯೆ, ಇಸ್ರೇಲ್‌ ಸೈನಿಕರಿಗೆ ಉಚಿತ ಊಟ ನೀಡೋದಾಗಿ ಮೆಕ್‌ಡೊನಾಲ್ಡ್ಸ್‌ನ ಇಸ್ರೇಲ್‌ ಘಟಕ ಘೋಷಣೆ ಮಾಡಿದ್ದು, ಇದಕ್ಕೆ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದನ್ನು ವಿರೋಧಿಸಿ ಔಟ್ಲೆಟ್‌ವೊಂದರ ಮೇಲೆ ದಾಳಿಯನ್ನೂ ನಡೆಸಲಾಗಿದೆ.

ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದ ನಂತರ ಇಸ್ರೇಲ್ ಸೈನಿಕರಿಗೆ ಫಾಸ್ಟ್‌ ಫುಡ್‌ ಚೈನ್‌ ಮೆಕ್‌ಡೊನಾಲ್ಡ್ಸ್ ಉಚಿತ ಊಟ ನೀಡುವುದಾಗಿ ಘೋಷಿಸಿದೆ. ಮೆಕ್‌ಡೊನಾಲ್ಡ್ಸ್ ಇಸ್ರೇಲ್ ತನ್ನ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಆಸ್ಪತ್ರೆಗಳು ಮತ್ತು ಇಸ್ರೇಲ್ ರಕ್ಷಣಾ ಪಡೆಗಳಲ್ಲಿರುವ ಸೈನಿಕರಿಗೆ ಸಾವಿರಾರು ಉಚಿತ ಊಟ ನೀಡುತ್ತಿದೆ ಎಂದು ಘೋಷಿಸಿತು. 

Latest Videos


 "ನಿನ್ನೆ ನಾವು ಆಸ್ಪತ್ರೆಗಳು ಮತ್ತು ಮಿಲಿಟರಿ ಘಟಕಗಳಿಗೆ 4000 ಊಟಗಳನ್ನು ದಾನ ಮಾಡಿದ್ದೇವೆ. ಯುದ್ಧ ಭೂಮಿ ಮತ್ತು ಡ್ರಾಫ್ಟಿಂಗ್ ಪ್ರದೇಶಗಳಲ್ಲಿ ಸೈನಿಕರಿಗೆ ಪ್ರತಿದಿನ ಸಾವಿರಾರು ಊಟಗಳನ್ನು ದಾನ ಮಾಡಲು ನಾವು ಉದ್ದೇಶಿಸಿದ್ದೇವೆ ಮತ್ತು ರೆಸ್ಟೋರೆಂಟ್‌ಗಳಿಗೆ ಬರುವ ಸೈನಿಕರಿಗೆ ಡಿಸ್ಕೌಂಟ್‌ ನೀಡುವ ಸ್ಕೀಂ ಅನ್ನೂ ಈಗಾಗಲೇ ಹೊಂದಿದ್ದೇವೆ. ನಾವು ಈ ಉದ್ದೇಶಕ್ಕಾಗಿಯೇ  5 ರೆಸ್ಟೋರೆಂಟ್‌ಗಳನ್ನು ತೆರೆದಿದ್ದೇವೆ’’ ಎಂದು ಮೆಕ್‌ಡೊನಾಲ್ಡ್ಸ್ ಇಸ್ರೇಲ್ ಬರೆದುಕೊಂಡಿದೆ ಎಂದು ನ್ಯೂಸ್‌ವೀಕ್‌ನ ವರದಿ ಹೇಳುತ್ತದೆ.

ಆದರೆ, ರೆಸ್ಟೋರೆಂಟ್‌ನ ಈ ಕ್ರಮವನ್ನು ಅನೇಕ ಸಾಮಾಜಿಕ ಬಳಕೆದಾರರು ಟೀಕಿಸಿದ್ದಾರೆ.  "ಮೆಕ್‌ಡೊನಾಲ್ಡ್ಸ್ IDF ಗೆ (ಇಸ್ರೇಲ್‌ನ ಮಿಲಿಟರಿ ಪಡೆಗಳಿಗೆ) ಉಚಿತ ಊಟವನ್ನು ಒದಗಿಸುತ್ತಿದೆ. ನಾವು ನಮ್ಮ ತತ್ವಗಳ ಮೇಲೆ ನಿಲ್ಲಬೇಕು ಮತ್ತು ನಮ್ಮ ನಂಬಿಕೆಗಳಿಗೆ ಹೊಂದಿಕೆಯಾಗುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಹಿನ್ನೆಲೆ ಘರ್ಷಣೆಯಲ್ಲಿ ತೊಡಗಿರುವವರಿಗೆ ಬೆಂಬಲ ನೀಡುವ ಕಂಪನಿಗಳನ್ನು ಬಹಿಷ್ಕರಿಸೋಣ. ವಿಶೇಷವಾಗಿ ಮುಗ್ಧ ಜೀವಗಳ ನಷ್ಟವನ್ನು ಗಮನ ತೆಗೆದುಕೊಳ್ಳಬೇಕು. ಇದೇ ರೀತಿ, ಮೆಕ್‌ಡೊನಾಲ್ಡ್ಸ್‌ ಅನ್ನು ಬಹಿಷ್ಟಕರಿಸೋಣ ಎಂದೂ ಬಳಕೆದಾರರೊಬ್ಬರು ಹೇಳಿದರು. 

"ಮೆಕ್‌ಡೊನಾಲ್ಡ್ಸ್ ಇಸ್ರೇಲ್ ಡಿಫೆನ್ಸ್ ಫೋರ್ಸ್‌ಗೆ ಉಚಿತ ಊಟವನ್ನು ನೀಡಿದರೆ ಮತ್ತು ಗಾಜಾದಲ್ಲಿ ಬಾಧಿತರಾದವರಿಗೆ ನೀಡದಿದ್ದರೆ, ಆಗ ನಾನು ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಮೆಕ್‌ಡೊನಾಲ್ಡ್ಸ್ ಅನ್ನು ಬಹಿಷ್ಕರಿಸಬೇಕು ಎಂದು ನಾನು ಭಾವಿಸುತ್ತೇನೆ" ಎಂದೂ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನು, ಕೆಲವು ಬಳಕೆದಾರರು ಇಸ್ರೇಲ್‌ನ ಬೆಂಬಲಕ್ಕಾಗಿ ಫಾಸ್ಟ್-ಫುಡ್ ಚೈನ್‌ ಅನ್ನು ಶ್ಲಾಘಿಸಿದ್ದಾರೆ. "ಒಳ್ಳೆಯದು ಮೆಕ್ಡೊನಾಲ್ಡ್ಸ್ ಇಸ್ರೇಲ್’’ ಎಂದು ಒಬ್ಬ ವ್ಯಕ್ತಿ ಹೇಳಿದ್ದಾರೆ. ಆದರೆ, ಈ ವಿರೋಧದ ಕಾಮೆಂಟ್‌ಗಳ ನಂತರ, ಮೆಕ್‌ಡೊನಾಲ್ಡ್ಸ್ ಇಸ್ರೇಲ್‌ನ ಅಧಿಕೃತ ಖಾತೆಯು ಅಂದಿನಿಂದ ಪ್ರೈವೇಟ್‌ ಆಗಿದೆ ಎಂಬುದನ್ನು ಗಮನಿಸಬೇಕು.

ಇಸ್ರೇಲ್ ಪಡೆಗಳಿಗೆ ಉಚಿತ ಆಹಾರ ಒದಗಿಸುವ ಮೆಕ್‌ಡೊನಾಲ್ಡ್ಸ್‌ ಕ್ರಮದ ನಂತರ, ಅಕ್ಟೋಬರ್ 13 ರಂದು ಲೆಬನಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಸಿಡಾನ್‌ನ ಸ್ಪಿನ್ನೀಸ್‌ನಲ್ಲಿರುವ ಮೆಕ್‌ಡೊನಾಲ್ಡ್ಸ್‌ ಮೇಲೆ ಪ್ಯಾಲೆಸ್ತೀನ್‌ ಗುಂಪುಗಳು ದಾಳಿ ಮಾಡಿದೆ ಎಂದು ಲೆಬನಾನ್ ಮೂಲದ 961 ವರದಿ ಮಾಡಿದೆ. ಆದರೆ, ಯಾವುದೇ ಗಾಯಗಳು ವರದಿಯಾಗಿಲ್ಲ. 

ಈ ಬಗ್ಗೆ ಮೆಕ್‌ಡೊನಾಲ್ಡ್ಸ್‌ ಲೆಬನಾನ್‌ ಹೇಳಿಕೆ ನೀಡಿದ್ದು, "ಇತರ ದೇಶಗಳು ಮತ್ತು ಪ್ರಾಂತ್ಯಗಳಲ್ಲಿನ ಇತರ ಫ್ರಾಂಚೈಸಿಗಳ ಸ್ಥಾನವು ಯಾವುದೇ ರೀತಿಯಲ್ಲಿ ಮೆಕ್‌ಡೊನಾಲ್ಡ್ಸ್ ಲೆಬನಾನ್‌ನ ದೃಷ್ಟಿಕೋನಗಳು ಅಥವಾ ಸ್ಥಾನಗಳನ್ನು ಪ್ರತಿನಿಧಿಸುವುದಿಲ್ಲ ಮತ್ತು ಮೆಕ್‌ಡೊನಾಲ್ಡ್ಸ್ ಲೆಬನಾನ್ ಇತರ ಮಾರುಕಟ್ಟೆಗಳಲ್ಲಿ ತೆಗೆದುಕೊಂಡ ಕ್ರಮಗಳಲ್ಲಿ ಯಾವುದೇ ರೀತಿಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ದೃಢಪಡಿಸುತ್ತದೆ. ಲೆಬನಾನ್‌ನ ಹೊರಗೆ, ನಾವು ನಮ್ಮ ರಾಷ್ಟ್ರ ಮತ್ತು ಅದರ ಜನರಿಗೆ ಅತ್ಯಂತ ಗೌರವ ಮತ್ತು ಒಗ್ಗಟ್ಟಿನಿಂದ ಬದ್ಧರಾಗಿದ್ದೇವೆ." ಎಂದಿದೆ. 

click me!