ಇಸ್ರೇಲ್‌ ಮೊದಲ ಗುರಿ; ಮುಂದೆ ಸಂಪೂರ್ಣ ಭೂಮಿಯಲ್ಲೇ ನಮ್ಮ ಕಾನೂನು ಇರುತ್ತೆ: ಹಮಾಸ್‌ ಕಮಾಂಡರ್‌ ಎಚ್ಚರಿಕೆ!

First Published | Oct 12, 2023, 12:34 PM IST

ಇಸ್ರೇಲ್ ಕೇವಲ ಆರಂಭಿಕ ಗುರಿಯಾಗಿದೆ ಮತ್ತು ನಾವು ಇಡೀ ಪ್ರಪಂಚದ ಮೇಲೆ ತಮ್ಮ ಪ್ರಭಾವವನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆಂದು ಹಮಾಸ್‌ ಕಮಾಂಡರ್‌ ಪ್ರತಿಪಾದಿಸಿದ್ದಾರೆ. 

ಇಸ್ರೇಲ್‌ - ಗಾಜಾ ಸಂಘರ್ಷ ಮುಂದುವರಿದಿದ್ದು, ಈ ಮದ್ಯೆ ಹಮಾಸ್‌ ಕಮಾಂಡರ್‌ ಮಹಮೂದ್ ಅಲ್-ಜಹರ್ ಅವರಿಂದ ಗೊಂದಲದ ಸಂದೇಶ ಹೊರಹೊಮ್ಮಿದೆ. ಅಲ್ಲಿ ಅವರು ಜಾಗತಿಕ ಪ್ರಾಬಲ್ಯಕ್ಕಾಗಿ ತಮ್ಮ ಗುಂಪಿನ ಮಹತ್ವಾಕಾಂಕ್ಷೆಗಳ ಬಗ್ಗೆ ಮಾತನಾಡಿದ್ದಾರೆ. 

ಹಮಾಸ್‌ನ ಹಿರಿಯ ಅಧಿಕಾರಿಯನ್ನು ಒಳಗೊಂಡ ಒಂದು ನಿಮಿಷಕ್ಕೂ ಹೆಚ್ಚು ವಿಡಿಯೋ ತುಣುಕು ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಅವರು ಇಸ್ರೇಲ್ ಕೇವಲ ಆರಂಭಿಕ ಗುರಿಯಾಗಿದೆ ಮತ್ತು ನಾವು ಇಡೀ ಪ್ರಪಂಚದ ಮೇಲೆ ತಮ್ಮ ಪ್ರಭಾವವನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆಂದು ಪ್ರತಿಪಾದಿಸಿದ್ದಾರೆ.

Tap to resize

ಆಘಾತಕಾರಿ ವಾರಾಂತ್ಯದ ದಾಳಿಯಿಂದ ನೂರಾರು ಇಸ್ರೇಲಿಗಳು ಮೃತಪಟ್ಟಿರುವ ನಂತರ ಇಸ್ರೇಲ್ ಹಮಾಸ್ ವಿರುದ್ಧ ಯುದ್ಧವನ್ನು ಘೋಷಿಸಿದ ಸಮಯದಲ್ಲಿ ಈ ಎಚ್ಚರಿಕೆ ಬಂದಿದೆ.

"ಇಸ್ರೇಲ್ ಕೇವಲ ಮೊದಲ ಗುರಿಯಾಗಿದೆ. ಇಡೀ ಗ್ರಹವು ನಮ್ಮ ಕಾನೂನಿನ ಅಡಿಯಲ್ಲಿರುತ್ತದೆ" ಎಂದು ಮಹಮೂದ್ ಅಲ್-ಜಹರ್ ವಿಡಿಯೋದಲ್ಲಿ ಹೇಳಿದ್ದಾರೆ. 

 "ಪ್ಲ್ಯಾನೆಟ್ ಅರ್ಥ್‌ನ ಸಂಪೂರ್ಣ 510 ಮಿಲಿಯನ್ ಚದರ ಕಿಲೋಮೀಟರ್‌ಗಳು ಯಾವುದೇ ಅನ್ಯಾಯ, ದಬ್ಬಾಳಿಕೆ ಮತ್ತು ಪ್ಯಾಲೆಸ್ತೀನ್‌ ಜನರ ವಿರುದ್ಧ ಮತ್ತು ಅರಬ್ ದೇಶಗಳಲ್ಲಿ ಅವರ ವಿರುದ್ದ, ಲೆಬನಾನ್, ಸಿರಿಯಾ, ಇರಾಕ್ ಮತ್ತು ಇತರ ದೇಶಗಳಲ್ಲಿ ನಡೆದಂತಹ ಹತ್ಯೆಗಳು ಮತ್ತು ಅಪರಾಧಗಳಿಲ್ಲದ ವ್ಯವಸ್ಥೆಯ ಅಡಿಯಲ್ಲಿ ಬರುತ್ತವೆ’’ ಎಂದು ಅವರು ಹೇಳಿದರು.

ಇನ್ನು, ಈ ವಿಡಿಯೋ ಕಾಣಿಸಿಕೊಂಡ ಕೆಲವೇ ಗಂಟೆಗಳ ನಂತರ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ವಿರುದ್ಧದ ಹೋರಾಟವನ್ನು ಮುಂದುವರೆಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸುವ ಹೇಳಿಕೆಯನ್ನು ನೀಡಿದರು. ಹಾಗೂ, ಪ್ಯಾಲೆಸ್ತೀನ್‌ ಗುಂಪಿನ ಪ್ರತಿಯೊಬ್ಬ ಸದಸ್ಯರು "ಸತ್ತ ವ್ಯಕ್ತಿ" ಎಂದು ಹೇಳಿದರು.

"ಹಮಾಸ್ ಅಂದರೆ ದಾಯಿಶ್‌ (ಇಸ್ಲಾಮಿಕ್ ಸ್ಟೇಟ್ ಗುಂಪು), ಮತ್ತು ಪ್ರಪಂಚವು ದಾಯಿಶ್‌ ಅನ್ನು ನಾಶಪಡಿಸಿದಂತೆ ನಾವು ಅವರನ್ನು ಪುಡಿಮಾಡಿ ನಾಶಪಡಿಸುತ್ತೇವೆ" ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್ ತುರ್ತು ಏಕತಾ ಸರ್ಕಾರವನ್ನು ರಚಿಸಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾಜಿ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್ ಅವರೊಂದಿಗೆ ಯುದ್ಧ ಕ್ಯಾಬಿನೆಟ್‌ನಲ್ಲಿ ಕುಳಿತಿದ್ದಾರೆ.

ಹಮಾಸ್ ISIS ಗಿಂತ ಕೆಟ್ಟದಾಗಿದೆ ಎಂದು ಕರೆದ ಬೆಂಜಮಿನ್ ನೆತನ್ಯಾಹು, ಜನರನ್ನು ಜೀವಂತವಾಗಿ ಸುಡುವುದು ಸೇರಿದಂತೆ ಶನಿವಾರ ಮಾಡಿದ ಕೆಲವು ದೌರ್ಜನ್ಯಗಳನ್ನು ಪಟ್ಟಿ ಮಾಡಿದರು. ಇಸ್ರೇಲ್‌ನ ಪ್ರತಿಯೊಂದು ಕುಟುಂಬವು ದಾಳಿಯ ಬಲಿಪಶುಗಳೊಂದಿಗೆ ಕೆಲವು ರೀತಿಯಲ್ಲಿ ಸಂಪರ್ಕ ಹೊಂದಿದೆ ಎಂದೂ ಅವರು ಹೇಳಿದರು. 

ಹಾಗೂ,  "ನಮ್ಮ ಮನೆಗಾಗಿ ನಾವೆಲ್ಲರೂ ಒಟ್ಟಾಗಿ ಹೋರಾಡುತ್ತೇವೆ". ಇನ್ನು, ವಿಶ್ವ ನಾಯಕರಿಂದ ಇಸ್ರೇಲ್ ಪಡೆದ "ಅಭೂತಪೂರ್ವ" ಬೆಂಬಲವನ್ನು ಅವರು ವಿವರಿಸಿದರು. "ನಾವು ಆಕ್ರಮಣಕಾರಿಯಾಗಿದ್ದೇವೆ. ಹಮಾಸ್‌ನ ಪ್ರತಿಯೊಬ್ಬ ಸದಸ್ಯರು ಸತ್ತ ವ್ಯಕ್ತಿ" ಎಂದೂ ಬೆಂಜಮಿನ್ ನೆತನ್ಯಾಹು ಘೋಷಿಸಿದರು.

ಅಲ್ಲದೆ, ಇಸ್ರೇಲ್ ತನ್ನ ಸೈನಿಕರ ಬೆಂಬಲಕ್ಕೆ ನಿಂತಿದೆ ಮತ್ತು ಇಸ್ರೇಲ್ ಗೆಲ್ಲುತ್ತದೆ ಎಂದೂ ಇಸ್ರೇಲ್‌ ಪ್ರಧಾನಿ ತಮ್ಮ ಹೇಳಿಕೆಯ ಕೊನೆಯಲ್ಲಿ ಘೋಷಿಸಿದರು. "ನಾವೆಲ್ಲರೂ ಒಂದೇ; ನಾವೆಲ್ಲರೂ ಸೇರುತ್ತಿದ್ದೇವೆ; ನಾವೆಲ್ಲರೂ (ಹೋರಾಟದಲ್ಲಿ) ಸೇರಿಕೊಂಡಿದ್ದೇವೆ" ಎಂದು ಬೆನ್ನಿ ಗ್ಯಾಂಟ್ಜ್ ಘೋಷಿಸಿದರು.
 

ಗಾಜಾ ಪಟ್ಟಿಯಲ್ಲಿರುವ 2.3 ಮಿಲಿಯನ್ ಜನರಲ್ಲಿ ಹೆಚ್ಚಿನವರಿಗೆ ವಿದ್ಯುತ್ ಮತ್ತು ನೀರಿಲ್ಲ. ಮತ್ತು, ನೂರಾರು ಇಸ್ರೇಲಿ ಸ್ಟ್ರೈಕ್‌ ಮಳೆ ನಡೆಯುತ್ತಿದ್ದು, ಅವರಿಗೆ ಓಡಲು ಬೇರೆ ಸ್ಥಳವೂ ಇಲ್ಲ. ಗಾಜಾ ಗಡಿಯಾದ ಈಜಿಪ್ಟ್ ಅನ್ನು ಈಜಿಪ್ಟ್ ಅಧಿಕಾರಿಗಳು ನಿರ್ಬಂಧಿಸಿದ್ದು. ಜನರು ಸಿಕ್ಕಿಬಿದ್ದಿದ್ದಾರೆ ಎಂದೂ ಹೇಳಿದರು.
 

Latest Videos

click me!