ಗಾಜಾಗೆ ಮತ್ತೊಂದು ದೊಡ್ಡ ಶಾಕ್ ನೀಡಿದ ಇಸ್ರೇಲ್‌: ನೀರಿಲ್ಲ, ಕರೆಂಟಿಲ್ಲ, ಇಂಧನವೂ ಇಲ್ಲ!

First Published | Oct 12, 2023, 3:06 PM IST

ಹಮಾಸ್ ತನ್ನ ದಾಳಿಯಲ್ಲಿ ಅಪಹರಿಸಿದ ಜನರನ್ನು ಬಿಡುಗಡೆ ಮಾಡುವವರೆಗೆ ತನ್ನ ದೇಶವು ಗಾಜಾಗೆ ಮೂಲಭೂತ ಸಂಪನ್ಮೂಲಗಳು ಅಥವಾ ಮಾನವೀಯ ನೆರವನ್ನು ಅನುಮತಿಸುವುದಿಲ್ಲ ಎಂದು ಇಸ್ರೇಲ್‌ ಇಂಧನ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.

ಇಸ್ರೇಲ್‌ ಮೇಲೆ ಹಮಾಸ್‌ ಹಠಾತ್‌ ರಾಕೆಟ್‌ ದಾಳಿ ಹಾಗೂ ಮಕ್ಕಳು, ಮಹಿಳೆಯರು ಸೇರಿ ನಾಗರಿಕರನ್ನು ಹಾಗೂ ಸೈನಿಕರನ್ನು ಅಪಹರಿಸಿದ್ದಾರೆ. ನಂತರ ಇಸ್ರೇಲ್ ಸಹ ಗಾಜಾ ಪಟ್ಟಿಯಲ್ಲಿ ಭಾರಿ ಪ್ರಮಾಣದಲ್ಲಿ ಪ್ರತಿದಾಳಿ ನಡೆಸ್ತಿದೆ.

ಇನ್ನೊಂದೆಡೆ, ಗಾಜಾಗೆ ನೀಡಿದ್ದ ನೀರು, ವಿದ್ಯುತ್‌ ಸೌಲಭ್ಯವನ್ನು ಕಡಿತಗೊಳಿಸಿದೆ. ಈ ನಡುವೆ ಗಾಜಾಗೆ ಇಸ್ರೇಲ್‌ ಮತ್ತೊಂದು ದೊಡ್ಡ ಎಚ್ಚರಿಕೆ ನೀಡಿದೆ. 

Tap to resize

ಹಮಾಸ್ ತನ್ನ ದಾಳಿಯಲ್ಲಿ ಅಪಹರಿಸಿದ ಜನರನ್ನು ಬಿಡುಗಡೆ ಮಾಡುವವರೆಗೆ ತನ್ನ ದೇಶವು ಗಾಜಾಗೆ ಮೂಲಭೂತ ಸಂಪನ್ಮೂಲಗಳು ಅಥವಾ ಮಾನವೀಯ ನೆರವನ್ನು ಅನುಮತಿಸುವುದಿಲ್ಲ ಎಂದು ಇಸ್ರೇಲ್‌ ಇಂಧನ ಸಚಿವ ಇಸ್ರೇಲ್ ಕಾಟ್ಜ್ ಗುರುವಾರ ಪ್ರತಿಜ್ಞೆ ಮಾಡಿದ್ದಾರೆ.

ಗಾಜಾಗೆ ಮಾನವೀಯ ನೆರವು? ಯಾವುದೇ ವಿದ್ಯುತ್ ಸ್ವಿಚ್ ಆನ್ ಮಾಡಲಾಗುವುದಿಲ್ಲ, ಯಾವುದೇ ನೀರಿನ ನಲ್ಲಿ ಓಪನ್‌ ಮಾಡುವುದಿಲ್ಲ ಮತ್ತು ಇಸ್ರೇಲ್ ಅಪಹರಣಕ್ಕೊಳಗಾದವರನ್ನು ಮನೆಗೆ ವಾಪಸ್‌ ಕಳಿಸುವವರಿಗೆ ಯಾವುದೇ ಇಂಧನ ಟ್ರಕ್ ಪ್ರವೇಶಿಸುವುದಿಲ್ಲ ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶನಿವಾರದ ದಾಳಿಯ ಭಾಗವಾಗಿ ಸುಮಾರು 150 ಇಸ್ರೇಲಿಗಳು, ವಿದೇಶಿಯರು ಮತ್ತು ಉಭಯ ದೇಶಗಳ ಪ್ರಜೆಗಳನ್ನು ಹಮಾಸ್ ಗುಂಪು ಗಾಜಾ ಪಟ್ಟಿಗೆ ಅಪಹರಿಸಿದ್ದು, ಇಸ್ರೇಲಿ ಪಟ್ಟಣಗಳು ​​ಮತ್ತು ಸುತ್ತಮುತ್ತಲಿನ ಸಮುದಾಯಗಳಲ್ಲಿ 1,200ಕ್ಕೂ ಹೆಚ್ಚು ಜನರನ್ನು ಕೊಲೆ ಮಾಡಿತ್ತು. 
 

ದಿಗ್ಬಂಧನಕ್ಕೊಳಗಾದ ಗಾಜಾ ಪಟ್ಟಿಯಲ್ಲಿ ಹಮಾಸ್ ಗುಂಪಿನ ವಿರುದ್ಧ ಇಸ್ರೇಲ್‌ ವೈಮಾನಿಕ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಹಾಗೂ, ಸುಮಾರು 1,200 ಜನರನ್ನು ಕೊಲೆ ಮಾಡಿತ್ತು.

ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಗಾಜಾದ ಮೇಲೆ "ಸಂಪೂರ್ಣ ಮುತ್ತಿಗೆ" ಘೋಷಿಸಿದ್ದು, ನೀರು, ಇಂಧನ ಮತ್ತು ವಿದ್ಯುತ್ ಸರಬರಾಜುಗಳನ್ನು ಕಡಿತಗೊಳಿಸಿದೆ. ಇನ್ನು, ಪ್ಯಾಲೆಸ್ತೀನ್‌ ಪ್ರದೇಶದ ಏಕೈಕ ವಿದ್ಯುತ್ ಸ್ಥಾವರವು ಇಂಧನ ಖಾಲಿಯಾದ ನಂತರ ಬುಧವಾರ ಮುಚ್ಚಲ್ಪಟ್ಟಿದೆ.

Latest Videos

click me!