ಆನ್‌ಲೈನ್ ಆರ್ಡರ್ ಮಾಡಿದವನಿಗೆ ಶೌಚ ಕಳುಹಿಸಿದ ಬ್ರ್ಯಾಂಡೆಡ್ ಕಂಪನಿ!
ಯಾವಾಗಿನಿಂದ ಆನ್‌ಲೈನ್ ಶಾಪಿಂಗ್ ಎಂಬ ಕಾನ್ಸೆಪ್ಟ್ ಆರಂಭವಾಯ್ತೋ, ಅಂದಿನಿಂದ ಜನರ ಜೀವನ ಶೈಲಿ ಬಹಳಷ್ಟು ಸರಳವಾಗಿದೆ. ಮನೆಯಲ್ಲಿದ್ದುಕೊಂಡೇ ನೀವು ನಿಮಗಿಷ್ಟವಾದ ವಸ್ತುಗಳನ್ನು ತರಿಸಿಕೊಳ್ಳಬುದು. ಆದರೆ ಅನೇಕ ಬಾರಿ ಇದೊಂದು ಕೆಟ್ಟ ಕನಸಿನ ಅನುಭವ ನೀಡುತ್ತದೆ. ಇತ್ತೀಚೆಗಷ್ಟೇ ಯುಕೆಯ ವ್ಯಕ್ತಿಯೊಬ್ಬನಿಗೂ ಇಂತಹುದೇ ಅನುಭವ ಎದುರಾಗುದೆ. ಕೊರೋನಾ ನಡುವೆ ಈತ ಪ್ರಸಿದ್ಧ ಅಂತಾರಾಷ್ಟ್ರೀಯ ಬ್ರಾಂಡ್ ಆಗಿರುವ ಜಾನ್ ಲೆವಿಸ್‌ನಿಂದ ಒಂದು ಟೀ ಶರ್ಟ್ ಹಾಗೂ ಗ್ಲಾಸ್ ಆರ್ಡರ್ ಮಾಡಿದ್ದರು. ಆದರೆ ಆತನಿಗೆ ಡೆಲಿವರಿ ಮಾಡಿದ ಪ್ಯಾಕೆಟ್ನೊಳಗೆ ವ್ಯಾಕ್ಯುಮ್ ಪ್ಯಾಕ್ ಮಾಡಿದ ಪ್ಲಾಸ್ಟಿಕ್ ಚೀಲವಿತ್ತು. ಆದೆ ಇದರೊಳಗೆ ಮಾತ್ರ ಇದ್ದದ್ದು ಶೌಚ. ಇದನ್ನು ನೋಡಿದ ವ್ಯಕ್ತಿ ವಾಂತಿ ಮಾಡಲಾರಂಭಿಸಿದ್ದಾನೆ. ತಾನು ಆರ್ಡರ್ ಮಾಡಿದ ಪ್ಯಾಕೆಟ್‌ನಲ್ಲಿ ಇಂತಹುದ್ದೊಂದು ವಸ್ತು ಇರಬಹುದೆದು ಆತ ಊಹಿಸಿಯೂ ಇರಲಿಲ್ಲ. ಕೂಡಲೇ ಆತ ಈ ಬಗ್ಗೆ ದೂರು ದಾಖಲಿಸಿದ್ದಾನೆ. ಬದಲಾಗಿ ಆತನಿಗೆ ಸಿಕ್ಕಿದ್ದು ಕ್ಷಮಿಸಿ ಎಂಬ ಉತ್ತರ.