ನಾಸ್ತಿಕತೆ ಹಾಗೂ ಲೈಂಗಿಕ ಕ್ರಾಂತಿಯಿಂದ ಬದಲಾದ ರಷ್ಯಾ!
First Published | Jul 28, 2020, 6:20 PM ISTನಾಸ್ತಿಕತೆ ಕ್ರಾಂತಿ ಜೊತೆ ನಡೆದ ಲೈಂಗಿಕ ಕ್ರಾಂತಿ ರಷ್ಯಾದ ಅತ್ಯಂತ ಬಲಶಾಲಿ ಕ್ರಾಂತಿಗಳಲ್ಲಿ ಒಂದು ಎಂಬುವುದರಲ್ಲಿ ಅನುಮಾನವಿಲ್ಲ. ನಗ್ನತೆ ಮತ್ತು ಲೈಂಗಿಕತೆ ಎಂಬ ಕಲ್ಪನೆ ಲಿಂಗ ಸಮಾನತೆಯ ಜೊತೆಗೇ ಹುಟ್ಟಿಕೊಂಡಿದೆ ಎಂಬುವುದನ್ನು ಸೋವಿಯತ್ ಒಕ್ಕೂಟವು ಅರಿತುಕೊಂಡಿದೆ. ಬೆತ್ತಲೆ ದೇಹವನ್ನು ರಷ್ಯಾದಲ್ಲೂ ಕರಟ್ಟದಾಗಿ ನೋಡುತ್ತಿದ್ದ ಪದ್ಧತಿ ಇತ್ತು. ಆದರೆ ಅಕ್ಟೋಬರ್ ಕ್ರಾಂತಿ ಇವೆಲ್ಲಕ್ಕೂ ಒಂದು ವಿರಾಮ ಇಟ್ಟಿತು. ಇದಾದ ಬಳಿಕವೇ ಇಲ್ಲಿ ನಗ್ನ ಛಾಯಾಗ್ರಹಣಕ್ಕೆ ಹೆಚ್ಚು ಮಹತ್ವ ಸಿಕ್ಕಿತು. ಸೋವಿಯತ್ ಒಕ್ಕೂಟದಲ್ಲಿ ನಗ್ನತೆ ತುಲನಾತ್ಮಕವಾಗಿ ಹೊಸ ಪರಿಕಲ್ಪನೆಯಾಗಿದ್ದರೂ, ಸನ್ ಬಾತ್ ಮತ್ತು ಈಜು ಜನರ ದೈನಂದಿನ ದಿನಚರಿಯ ಭಾಗವಾಯಿತು. 1920 ರ ದಶಕದಲ್ಲಿ ಸಮಾಜ ಸುಧಾರಕರಿಂದಾಗಿ ಸೋವಿಯತ್ ಒಕ್ಕೂಟಕ್ಕೆ ಲೈಂಗಿಕ ವಿಚಾರಗಳ ವಿಷಯದಲ್ಲಿ ಯೋಚಿಸುವ ಅವಕಾಶ ಲಭಿಸಿತು. ಈ ಮೂಲಕ ಡೌನ್ ವಿಥ್ ಶೇಮ್ ಎಂಬ ಘೋಷಣೆ ಜೊತೆ ಈ ಕ್ರಾಂತಿ ಆರಂಭವಾಯಿತು.