ಬಿಕಿನಿ ಧರಿಸಿ ಚಿಕಿತ್ಸೆ ನೀಡುತ್ತಾರೆ ಈ ವೈದ್ಯೆ, ಟೀಕಿಸಿದ್ರೆ ಸಿಗುತ್ತೆ ಕಜ್ಜಾಯ!
First Published | Jul 30, 2020, 5:12 PM IST'ವೈದ್ಯೋ ನಾರಾಯಣೋ ಹರಿಃ', ಅಂದರೆ ವೈದ್ಯರು ದೇವರಿಗೆ ಸಮಾನ ಎನ್ನಲಾಗುತ್ತದೆ. ಹೀಗಾಗೇ ರೋಗಿಗಳ ಪ್ರಾಣ ಕಾಪಾಡವ ವೈದ್ಯರನ್ನು ಸಮಾಜ
ದಲ್ಲಿ ಬಹಳ ಗೌರವ ನೀಡಲಾಗುತ್ತದೆ. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈದ್ಯೆಯೊಬ್ಬಳು ಸೃಷ್ಟಿಸಿದ ಅವಾಂತರದದಿಂದ ವಿವಾದವೊಂದು ಹುಟ್ಟಿಕೊಂಡಿದೆ. ಹವಾಯಿಯ ಡಾ. ಕ್ಯಾಂಡಿಸ್ ಮೈಹರೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಒಂದನ್ನು ಸೇರ್ ಮಾಡಿದ್ದು, ಇದನ್ನು ಈಗಾಗಲೇ 258,000ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಇದರಲ್ಲಿ ಡಾ. ಕ್ಯಾಂಡಿಸ್ ಮೈಹರೆ ಬಿಕಿನಿ ಧರಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ನೋಡಬಹುದಾಗಿದೆ. ವಾಸ್ತವವಆಗಿ ಇವರು ಸಮುದ್ರದದ ತಟದಲ್ಲಿ ಬೋಟ್ ತಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಾರೆ. ಬೀಚ್ ಬಳಿ ಡ್ಯೂಟಿ ಇರುವುದರಿಂದ ಅವರು ಬಿಕಿನಿ ಧರಿಸಿಕೊಂಡೇ ಇರುತ್ತಾರೆ. ಹೀಗಿರುವಾಗ ಅವರು ತಮ್ಮ ಈ ಫೋಟೋ ಶೇರ್ ಮಾಡಿದ ಬೆನ್ನಲ್ಲೇ ಭಾರೀ ಟೀಕೆ ವ್ಯಕ್ತವಾಗಿದೆ. ಅನೇಕ ಮಂದಿ ಇದು ವೃತ್ತಿಪರ ವರ್ತನೆಯಲ್ಲ ಎಂದು ದೂರಿದ್ದರೆ, ಇನ್ನು ಕೆಲವರು ಇದು ವೈದ್ಯ ವೃತ್ತಿಗೆ ಮಾಡುವ ಅವಮಾನ ಎಂದಿದ್ದಾರೆ. ಆದರೆ ಹೀಗೆ ಟೀಕಿಸಿದವರೆಲ್ಲರಿಗೂ ಈ ವೈದ್ಯೆ ತಕ್ಕ ತಿರುಗೇಟು ನೀಡಿದ್ದಾರೆ.