ಕಿಮ್ ಮೆದುಳು ನಿಷ್ಕ್ರಿಯ: ಉತ್ತರಾಧಿಕಾರಿ ರೇಸ್‌ನಲ್ಲಿ ಈ 'ಶಕ್ತಿಶಾಲಿ ಮಹಿಳೆ', ಯಾರೀಕೆ?

First Published Apr 21, 2020, 3:38 PM IST

ವಿಶ್ವದ ನಿಗೂಢ ರಾಷ್ಟ್ರಗಳಲ್ಲೊಂದಾದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇತ್ತೀಚೆಗೆ ಐಷಾರಾಮಿ ಕಟ್ಟಡದೊಳಗೆ ನಿರ್ಮಿಸಲಾಗಿರುವ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ. ಇನ್ನು ಕಿಮ್ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಕಿಮ್ ಆರೋಗ್ಯ ಗಂಭೀರವಾಗಿದೆ ಎಂಬ ಸುದ್ದಿ ಬೆನ್ನಲ್ಲೇ ಉತ್ತರ ಕೊರಿಯಾದ ಮುಂದಿನ ಸರ್ವಾಧಿಕಾರಿ ಯಾರು? ಎಂಬ ಪ್ರಶ್ನೆಯೂ ಎದ್ದಿದೆ. ಈ ಪಟ್ಟಿಯಲ್ಲಿ ಶಕ್ತಿಶಾಲಿ ಮಹಿಳೆ ಎಂದೇ ಪ್ರಖ್ಯಾತಿ ಗಳಿಸಿದ ಕಿಮ್ ಯೋ ಜೋಂಗ್ ಹೆಸರು ಮುಂಚೂಣಿಯಲ್ಲಿದೆ. ಇದಕ್ಕೆ ಇತ್ತೀಚೆಗೆ ನಡೆದ ಬೆಳವಣಿಗಗಳೂ ಕಾರಣವಾಗಿದೆ. ಅಷ್ಟಕ್ಕೂ ಕಿಮ್ ಜೊತೆಗೆ ಯಾವತ್ತೂ ಕಾಣಿಸಿಕೊಳ್ಳುತ್ತಿದ್ದ ಆ ಶಕ್ತಿಶಾಲಿ ಮಹಿಳೆ ಯಾರು? ಇಲ್ಲಿದೆ ವಿವರ

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಗಂಭೀರವಾಗಿದೆ ಎಂಬ ಸುಳಿವು, ಅವರು ತಮ್ಮ ಅಜ್ಜನ ಹುಟ್ಟುಹಬ್ಬದ ಪ್ರಯುಕ್ತ ಏಪ್ರಿಲ್ 15 ರಂದು ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಗೈರಾದಾಗ ಲಭಿಸಿತ್ತು. ಇದಾದ ಬಳಿಕ ಅವರು ಎಲ್ಲೂ ಕಾಣಿಸಕೊಳ್ಳದಿರುವುದರಿಂದ ಈ ಮಾತು ಜೋರಾಗಿತ್ತು.
undefined
ಇಷ್ಟೇ ಅಲ್ಲದೇ ಕಳೆದ ಕೆಲ ದಿನಗಳ ಹಿಂದಷ್ಟೇ ಕಿಮ್ ಕಿರಿಯ ತಂಗಿ ಯೋ ಜೋಂಗ್‌ರನ್ನು ಮಹತ್ವದ ನಿರ್ಣಯ ತೆಗೆದುಕೊಳ್ಳುವ ಸಮಿತಿಗೆ ಮರು ನೇಮಕವನ್ನೂ ಮಾಡಲಾಗಿತ್ತು. ಹೀಗಾಗಿ ಈಕೆಯೇ ಮುಂದಿನ ಉತ್ತರಾಧಿಕಾರಿಯಾಗಬಹುದೆಂಬ ಶಂಕೆ ಹುಟ್ಟಿಕೊಂಡಿತು. ಅಲ್ಲದೇ ದೇಶಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನೂ ಆಕೆ ತೆಗೆದುಕೊಳ್ಳಲಾರಂಭಿಸಿದರು.
undefined
ಮಾಧ್ಯಮಗಳ ವರದಿಯನ್ವಯ ಕಿಮ್ ಯೋ ಜಾಂಗ್, ತನ್ನ ಅಣ್ಣ ಕಿಮ್ ಜಾಂಗ್ ಉನ್‌ಗೆ ದೀರ್ಘ ಕಾಲದಿಂದ ಆತ್ಮೀಯ ಸಲಹಗಾರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರನ್ನು ಶನಿವಾರ ಮತ್ತೊಂದು ಬಾರಿ ಕೇಂದ್ರೀಯ ಸಮಿತಿಯ ಪೊಲಿಟಿಕಲ್ ಬ್ಯೂರೋನ ಸದಸ್ಯರಾಗಿ ನೇಮಿಸಲಾಗಿದೆ.
undefined
ತಂಗಿಯನ್ನು ನೇಮಕ ಮಾಡುವ ನಿರ್ಧಾರ ಕಿಮ್ ಜಾಂಗ್ ಉನ್ ಅಧ್ಯಕ್ಷತೆಯ ಸಭೆಯಲ್ಲೇ ತೆಗೆದುಕೊಳ್ಳಲಾಗಿತ್ತು ಎನ್ನಲಾಗಿದೆ. ಆದರೆ ಈ ಹಿಂದೆ ಅಮೆರಿಕ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್‌ ನಡುವೆ ಹನೋಯಿಯಲ್ಲಿ ನಡೆದಿದ್ದ ಭೇಟಿ ವಿಫಲವಾದ ವೇಳೆ ಆಕೆಯನ್ನು ಈ ಸ್ಥಾನದಿಂದ ತೆಗೆದು ಹಾಕಲಾಗಿತ್ತು.
undefined
ಆದರೆ ಈಗ ಮತ್ತೆ ಆಕೆಯನ್ನು ನೇಮಕ ಮಾಡಿರುವುದು ಆಕೆಯ ಜವಾಬ್ದಾರಿಯನ್ನು ಹೆಚ್ಚಿಸಿದೆ ಎನ್ನಲಾಗಿದೆ. ಅಲ್ಲದೇ ಕಿಮ್ ಜಾಂಗ್ ಉನ್ ವಿಶ್ವಾಸ ಹೊಂದಿದ್ದವರಲ್ಲಿ ಅವರ ಈ ಕಿರಿಯ ತಂಗಿ ಮೊದಲ ಸ್ಥಾನದಲ್ಲಿದ್ದಾರೆ ಎನ್ನಲಾಗಿದೆ.
undefined
ಇನ್ನು ಕಿಮ್ ಯೋ ಜೋಂಗ್ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು 2018ರಲ್ಲಿ ವಿಂಟರ್ ಒಲಿಂಪಿಕ್‌ನಲ್ಲಿ ತನ್ನ ಅಣ್ಣನ ಸ್ಥಾನದಲ್ಲಿ ಇವರೇ ಉತ್ತರ ಕೊರಿಯಾವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ ಅವರ ಪ್ರಭಾವ ಅವರ ಪಕ್ಷದಲ್ಲಿ ಇನ್ನಷ್ಟು ಹೆಚ್ಚಾಗಿದೆ.
undefined
ಇನ್ನು ಕಿಮ್‌ ಜಾಂಗ್‌ ಉನ್‌ ತನ್ನ ರಾಷ್ಟ್ರ ಹಾಗೂ ಇತರ ರಾಷ್ಟ್ರದ ಎದುರು ಬೆಳೆಸಿಕೊಂಡಿರುವ ವ್ಯಕ್ತಿತ್ವದ ಹಿಂದೆ ಅವರ ಈ ತಂಗಿ ಕಿಮ್ ಯೋ ಜೋಂಗ್ ಬುದ್ಧಿವಂತಿಕೆ ಇದೆ ಎನ್ನಲಾಗಿದೆ.
undefined
ಇಷ್ಟೇ ಅಲ್ಲ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ಗೆ ತನ್ನ ಕಿರಿಯ ತಂಗಿ ಕಿಮ್ ಯೋ ಜೋಂಗ್ ಮೇಲೆ ಭಾರೀ ನಂಬಿಕೆ ಇದೆ.
undefined
ಕಿಮ್ ಜಾಂಗ್ ಉನ್ ಬಹಳ ಕಕಠೋರ ವ್ಯಕ್ತಿ. ದೇಶದ್ರೋದ ಆರೋಪದಡಿಯಲ್ಲಿ ಅವರು ತನ್ನ ಚಿಕ್ಕಪ್ಪನನ್ನೇ ಗಲ್ಲಿಗೇರಿಸಿದ್ದರೆನ್ನಲಾಗುತ್ತದೆ.
undefined
ಇನ್ನು ಇತ್ತೀಚೆಗಷ್ಟೇ ಉತ್ತರ ಕೊರಿಯಾ ಲೈವ್ ಫಯರ್ ಮಿಲಿಟ್ರಿ ಅಭ್ಯಾಸ ನಡೆಸಿತ್ತು. ಇದನ್ನು ದಕ್ಷಿಣ ಕೊರಿಯಾ ವಿರೋಧಿಸಿತ್ತು. ಈ ವೇಳೆ ಖಡಕ್‌ ಆಗಿ ಮರುತ್ತರಿಸಿದ್ದ ಕಿಮ್ ತಂಗಿ ಯೋ ಜೋಂಗ್ ಭಯಭೀತಗೊಂಡಿರುವ ನಾಯಿಗಳು ಬೊಗಳುತ್ತಿವೆ ಎಂದಿದ್ದರು.
undefined
ಇದಕ್ಕೂ ಮುನ್ನ ಯೋ ಜೋಂಗ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಶ್ಲಾಘಿಸುತ್ತಾ, ಉತ್ತರ ಕೊರಿಯಾ ಹಾಗೂ ಅಮೆರಿಕ ನಡುವಿನ ಸಂಬಂಧ ಗಟ್ಟಿಯಾಗುವ ಭರವಸೆ ಇದೆ ಎಂದಿದ್ದರು.
undefined
ಉತ್ತರ ಕೊರಿಯಾ ಕುರಿತು ಮಾಹಿತಿ ಇರುವ ಲಿಯೋನಿಡ್ ಹೇಳುವ ಅನ್ವಯ ಸೀಮಿತ ಅಧಿಕಾರವುಳ್ಳ ಈ ದೇಶದಲ್ಲಿ ಯೋ ಜೋಂಗ್ ತನ್ನ ಅಣ್ಣನವರೆಗೆ ಪ್ರಭಾವ ಹೊಂದಿದ್ದಾಳೆ ಎಂದಿದ್ದಾರೆ.
undefined
ಇನ್ನು ಯೋ ಜೋಂಗ್ ಕೂಡಾ ತನ್ನ ಅಣ್ಣನ ಪರ ಪ್ರಾಮಾಣಿಕವಾಗಿದ್ದಾಳೆ. ವಿದೇಶ ಹಾಗೂ ದ ಕೊರಿಯಾ ಜೊತೆ ಒಪ್ಪಂದ ಮಾಡುವುದು ಈಕೆಯೇ. ಈಕೆ ತನ್ನ ಅಣ್ಣನ ವ್ಯಕ್ತಿತ್ವವನ್ನು ಧನಾತ್ಮಕವಾಗಿ ತೋರಿಸುವಲ್ಲಿ ಶ್ರಮಿಸುತ್ತಾಳೆನ್ನಲಾಗಿದೆ.
undefined
ಇನ್ನು ಈಕೆ ಕೇವಲ 31 ವರ್ಷದವಳು ಹಾಗೂ ಕಿಮ್ ಕುಟುಂದಬದ ಅತ್ಯಂತ ಕಿರಿಯ ಹೆಣ್ಮಗಳು. ಕಿಮ್ ಜಾಂಗ್ ಉನ್ ಹಾಗೂ ಯೋ ಜೋಂಗ್ ಇಬ್ಬರೂ ಬಾಲ್ಯದಿಂದಲೇ ಬಹಳ ಆತ್ಮೀಯರಾಗಿದ್ದಾರೆ.
undefined
ಒಂದು ವೇಳೆ ಕಿಮ್ ಜಾಂಗ್ ಉನ್‌ಗೆ ಏನಾದರೂ ಆದರೆ, ಮುಂದೆ ಆ ಸ್ಥಾನ ಅವರ ತಂಗಿ ಯೋ ಜೋಂಗ್ ಅಥವಾ ಅವರ ಮಗನಿಗೆ ಸಿಗುವ ಸಾಧ್ಯತೆಗಳಿವೆ.
undefined
ಈಗಾಗಲೇ ಅಮೆರಿಕಮಾಧ್ಯಮಗಳು ಕಿಮ್ ಆರೀಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಮಾಡಿವೆ. ಇನ್ನು ಸಿಎನ್‌ಎನ್‌ ಕಳೆದ ಹಲವಾರು ತಿಂಗಳಿಂದ ಅವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆಂದು ವರದಿ ಮಾಡಿದೆ.
undefined
ಕಿಮ್ ಅತಿ ಹೆಚ್ಚು ಧೂಮಪಾನ ಮಾಡುತ್ತಾರೆ, ಅಲ್ಲದೇ ಸ್ಥೂಲಕಾಯ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಅವರನ್ನುಏಪ್ರಿಲ್ 11 ರಂದು ಕೊನೆಯ ಬಾರಿ ನೋಡಲಾಗಿತ್ತು.
undefined
ಇದಕ್ಕೂ ಮೊದಲು 2008ರಲ್ಲಿ ಉತ್ತರ ಕೊರಿಯಾದ 60ನೇ ವಾರ್ಷಿಕೋತ್ಸವದಂದು ಕಿಮ್ ತಂದೆ ಕಿಮ್ ಜಾಂಗ್ ಇಲ್ ಅನಾರೋಗ್ಯಕ್ಕೀಡಾಗಿದ್ದರೆಂಬ ಸುದ್ದಿ ಸದ್ದು ಮಾಡಿತ್ತು. ಇದಾದ ಬಳಿಕ ಅವರಿಗೆ ಸ್ಟ್ರೋಕ್ ಆಗಿದೆ ಎಂಬ ಮಾಹಿತಿ ಬಹಿರಂಗಗೊಂಡಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಟ್ಟಿತ್ತು.
undefined
ಕಿಮ್ ಜಾಂಗ್ ಇಲ್ 2011ರಲ್ಲಿ ನಿಧನರಾದರು. ಇನ್ನು 2014ರಲ್ಲಿ ಕಿಮ್ ಜಾಂಗ್ ಉನ್ ಕೂಡಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಿರುವಾಗ ಅವರಿಗೆ ಮೊಣಕಾಲಿನ ಸರ್ಜರಿಯಾಗಿದೆ ಎಂಬ ಮಾಹಿತಿ ಬಹಿರಂಗವಾಗಿತ್ತು.
undefined
click me!