ಕೊರೋನಾ ಅಟ್ಟಹಾಸ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಈವರೆಗೂ ವವಿಶ್ವದಾದ್ಯಂತ ಈ ಮಹಾಮಾರಿಗೆ ಒಂದು ಲಕ್ಷ ಅರ್ವತ್ತು ಸಾವಿರಕ್ಕೂ ಅಧಿಕ ಂದಿ ಸಾವನ್ನಪ್ಪಿದ್ದಾರೆ. ಬ್ರಿಟನ್‌ನಲ್ಲಿ ಹದಿನಾರು ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಂತಹ ಸ್ಥಿತಿಯಲ್ಲಿ ಬರ್ಮಿಂಗ್ ಹ್ಯಾಮ್‌ನ ಸೆಂಟ್ರಲ್ ಜಾಮಿಯಾ ಮಸೀದಿ ಘಮ್ಕೋಲ್ ಶರೀಫ್‌ನಲ್ಲಿ ಕೊರೋನಾಗೆ ಬಲಿಯಾದ ಸಾವಿರಾರು ಮಂದಿಯ ಶವಗಳನ್ನಿಡಲಾಗಿದೆ. ಆದರೀಗ ಈ ಶವಗಳನ್ನು ಸಮಾಧಿ ಮಾಡೋದೇ ಬಹುದೊಡ್ಡ ತಲೆನೋವಾಗಿದೆ. ಸದ್ಯ ಈ ಶವಗಳನ್ನು ಮಸೀದಿ ಹೊರಭಾಗದ ಟೆಂಟ್‌ನಲ್ಲಿ ಇರಿಸಲಾಗಿದ್ದು, ಅಲ್ಲದೇ ಈ ಶವಗಳು ಹದಗೆಡದಂತೆ ಐದು ದೊಡ್ಡ ಫ್ರಿಡ್ಜ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ವೆಸ್ಟ್ ಮಿಡ್‌ಲ್ಯಾಂಡ್‌ನಲ್ಲಿರುವ ಈ ಮಸೀದಿಯಲ್ಲಿ ಟೆಂಟ್‌ನ್ನು ಶವಾಗಾರವನ್ನಾಗಿ ಮಾಡಲಾಗಿದೆ. ಇದರಲಲ್ಲಿ ಇಂದೇ ಬಾರಿ 150 ಶವಗಳನ್ನಿರಿಸುವ ಸೌಲಭ್ಯವಿದೆ. ಮೃತರ ಸಂಖ್ಯೆ ಹೆಚ್ಚುತ್ತಿರುವುದನ್ನು ಕಂಡರೆ ಈ ಸ್ಥಳ ಕಡಿಮೆಯಾಗುವ ಸಾಧ್ಯತೆಗಳಿವೆ. ಈ ಮಸೀದಿಯ ಒಂದು ನೋಟ.
ಶವಾಗಾರದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಸಿಬ್ಬಂದಿ. ತಮ್ಮ ಸುರಕ್ಷತೆ ಕುರಿತೂ ಇವರು ನಿಗಾ ವಹಿಸುತ್ತಿದ್ದಾರೆ.
ಶವಾಗಾರದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಸಿಬ್ಬಂದಿ. ತಮ್ಮ ಸುರಕ್ಷತೆ ಕುರಿತೂ ಇವರು ನಿಗಾ ವಹಿಸುತ್ತಿದ್ದಾರೆ.
911
ಟೆಂಟ್‌ನಿಂದ ಮಾಡಿದ ಈ ಶವಾಗಾರ ಬಹಳಷ್ಟು ದೊಡ್ಡದಿದೆ. ಎಲ್ಲೆಡೆ ಸಾವಿನ ಭಯಾನಕ ಮೌನ ಆವರಿಸಿದೆ.
ಟೆಂಟ್‌ನಿಂದ ಮಾಡಿದ ಈ ಶವಾಗಾರ ಬಹಳಷ್ಟು ದೊಡ್ಡದಿದೆ. ಎಲ್ಲೆಡೆ ಸಾವಿನ ಭಯಾನಕ ಮೌನ ಆವರಿಸಿದೆ.
1011
ಇಷ್ಟೊಂದು ಶವಗಳನ್ನು ಸಮಾಧಿ ಮಾಡುವುದು ಸುಲಭದ ಮಾತಲ್ಲ. ಇದಕ್ಕಾಗಿ ಹೆಚ್ಚು ಸಿಬ್ಬಂದಿಯೂ ಇಲ್ಲ.
ಇಷ್ಟೊಂದು ಶವಗಳನ್ನು ಸಮಾಧಿ ಮಾಡುವುದು ಸುಲಭದ ಮಾತಲ್ಲ. ಇದಕ್ಕಾಗಿ ಹೆಚ್ಚು ಸಿಬ್ಬಂದಿಯೂ ಇಲ್ಲ.
1111
ಬರ್ಮಿಂಗ್ ಹ್ಯಾಮ್‌ನ ವೆಸ್ಟ್ ಮಿಡ್‌ಲ್ಯಾಂಡ್‌ನಲ್ಲಿರುವ ಮಸೀದಿ ಹಾಗೂ ಅದರ ಹೊರಗೆ ನಿರ್ಮಿಸಲಾಗಿರುವ ಶವಾಗಾರದ ಒಂದು ದೃಶ್ಯ.
ಬರ್ಮಿಂಗ್ ಹ್ಯಾಮ್‌ನ ವೆಸ್ಟ್ ಮಿಡ್‌ಲ್ಯಾಂಡ್‌ನಲ್ಲಿರುವ ಮಸೀದಿ ಹಾಗೂ ಅದರ ಹೊರಗೆ ನಿರ್ಮಿಸಲಾಗಿರುವ ಶವಾಗಾರದ ಒಂದು ದೃಶ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ