ಕೊರೋನಾದಿಂದಾದ ಈ ಹತ್ತು ಒಳ್ಳೆ ವಿಚಾರ ಇಡೀ ವಿಶ್ವವೇ ನೆನಪಿಡುತ್ತೆ!

Published : Apr 19, 2020, 04:50 PM IST

ಕೊರೋನಾದಿಂದಾಗಿ ವಿಶ್ವದಾದ್ಯಂತ ಆತಂಕ ಮನೆ ಮಾಡಿದೆ. ಈವರೆಗೆ ಒಂದು ಲಕ್ಷದ ಐವತ್ತು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 22 ಲಕ್ಷಕ್ಕೂ ಅಧಿಕ ಮಂದಿ ಸಂಕ್ರಮಿತರಾಗಿದ್ದಾರೆ. ಕೊರೋನಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವದಾದ್ಯಯಂತ ಅನೇಕ ದೇಶಗಳು ಲಾಕ್‌ಡೌನ್ ಘೋಷಿಸಿವೆ. ಹೀಗಿರುವಾಗ ಜನ ಸಾಮಾನ್ಯರಿಗೆ ಅನೇಕ ಸಮಸ್ಯೆಗಳನ್ನೆದುರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಹೀಗಿರುವಾಗ ಆರ್ಥಿಕ ವ್ಯವಸ್ಥೆಯೂ ಹದಗೆಡಲಾರಂಭಿಸಿದೆ. ಆದರೆ ಇವೆಲ್ಲವನ್ನೂ ಹೊರತುಪಡಿಸಿ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ನಡುವೆ ನಡೆದ ಕೆಲ ವಿಚಾರಗಳಿಂದ ಲಾಭವೂ ಆಗಿದೆ. ಕೊರೋನಾದಿಂದದ ಸಾವು ನೋವು ಯಾವತ್ತೂ ಮರೆಯಲಸಾಧ್ಯ ಹೀಗಿದ್ದರೂ ಇಡೀ ವಿಶ್ವವೇ ನೆನಪಿಡುವ ಕೊರೋನಾದಿಂದಾದ ಹತ್ತು ಒಳ್ಳೆಯ ವಿಚಾರಗಳು.

PREV
110
ಕೊರೋನಾದಿಂದಾದ ಈ ಹತ್ತು ಒಳ್ಳೆ ವಿಚಾರ ಇಡೀ ವಿಶ್ವವೇ ನೆನಪಿಡುತ್ತೆ!

ಇಡೀ ವಿಶ್ವದಾದ್ಯಂತ ಜನರು ಕೈತೊಳೆಯುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ: ಕೈ ತೊಳೆಯುವುದು ಒಳ್ಳೆ ಅಭ್ಯಾಸ. ಭಾರತೀಯ ಸಂಸ್ಕೃತಿಯನ್ವಯ ಆಹಾರ ಸೇವಿಸುವ ಮುನ್ನ ಕೈ ತೊಳೆಯುವುದು ಅತ್ಯಗತ್ಯ. ಆದರೆ ಕೆಲ ವರ್ಷಗಳಿಂದ ಈ ಪದ್ಧತಿಯಲ್ಲಿ ಕೊಂಚ ಬದಲಾವಣೆಯಾಗಿತ್ತು. ಆದರೀಗ ಮತ್ತೊಂದು ಬಾರಿ ಭಾರತ ಮಾತ್ರವಲ್ಲ ಇಡೀ ವಿಶ್ವದಲ್ಲಿ ಕೈತೊಳೆಯುವ ಪದ್ಧತಿ ಮತ್ತೆ ಜಾರಿಗೆ ಬಂದಿದೆ. ಕೋಟ್ಯಂತರ ಮಂದಿ ಪದೇ ಪದೇ ಕೈತೊಳೆಯಲಾರಂಭಿಸಿದ್ದಾರೆ. ಕೊರೋನಾ ನಿಯಂತ್ರಿಸುವ ಲಸಿಕೆ ಈವರೆಗೆ ಲಭ್ಯವಾಗಿಲ್ಲ. ಹೀಗಿರುವಾಗ ಸ್ವಚ್ಛತೆ, ಅದರಲ್ಲೂ ವಿಶೇಷವಾಗಿ ಕೈತೊಳೆಯುವುದು ಅತಿ ಅಗತ್ಯ ಎನ್ನಲಾಗಿದೆ. 

210

ಕೊರೋನಾ ತಡೆಯುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮದಿಂದ ರೋಗ ಹರಡುವ ಇತರ ವೈರಾಣುಗಳಿಗೂ ಬ್ರೇಕ್: ಕೊರೋನಾ ನಿಯಂತ್ರಿಸುಉವ ನಿಟ್ಟಿನಲ್ಲಿ ದೇಶದಾದ್ಯಂತ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ಪ್ರತಿ ಇಲಾಖೆ, ಗಲ್ಲಿ ಗಲ್ಲಿಗಳನ್ನೂ ಸ್ಯಾನಿಟೈಸ್ ಮಾಸಲಾಗುತ್ತಿದೆ. ಇದರಿಂದ ಕೊರೋನಾ ಮಾತ್ರವಲ್ಲ, ಇತರ ಎಲ್ಲಾ ವೈರಾಣುಗಳು ನಾಶವಾಗುತ್ತಿವೆ. ಇದರಿಂದ ಭವಿಷಷ್ಯದಲ್ಲೂ ಉಪಯೋಗವಾಗಲಿದೆ.

310

ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ ಜನ: ಲಾಕ್‌ಡೌನ್‌ನಿಂದಾಗಿ ಎಲ್ಲಾ ಉದ್ಯೋಗ, ವ್ಯವಹಾರ ಹಾಗೂ ಕಚೇರಿಗಳು ಬಂದ್ ಆಗಿವೆ. ಮನೆಯಿಂದಲೇ ಕೆಲಲಸ ಮಾಡಬೇಕಾಗಿದೆ. ಅಚಾನಕ್ಕಾಗಿ ಮಾಡಿದ ಲಾಕ್‌ಡೌನ್‌ನಿಂದ ಜನರು ಮನೆಯಲ್ಲೇ ಉಳಿಯುವಂತಾಗಿದೆ. ಬಿಡುವಿಲ್ಲದ ಜೀವನ ಶೈಲಿಯಿಂದ ಜನರು ತಮಗಾಗಿ ಸಮಯ ಮೀಸಲಿಡುತ್ತಿರಲಿಲ್ಲ. ಆದರೀಗ ಲಾಕ್‌ಡೌನ್‌ನಿಂದಾಗಿ ಜನರು ತಮ್ಮವರೊಂದಿಗೆ ಸಮಯ ಕಳೆಯುತ್ತಿದ್ದಾರೆ.

410

ರಸ್ತೆ ಅಪಘಾತಗಳು ಕಡಿಮೆ: ವಿಶ್ವದಾದ್ಯಂತ ಪ್ರತಿ ದಿನ ಸುಮಾರು 3424 ಮಂದಿ ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದರು. ಅಂದರೆ ಪ್ರತಿ ನಿಮಿಷಕ್ಕೆ ಒಬ್ಬರಂತೆ ಮೃತಪಡುತ್ತಿದ್ದರು. ಆದರೀಗ ಲಾಕ್‌ಡೌನ್‌ನಿಂದ ರಸ್ತೆಗಿಳಿಯುವಂತಿಲ್ಲ. ಹೀಗಾಗಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ.

510

ಗಾಳಿ, ನೀರು ಎಲ್ಲವೂ ಶುದ್ಧ: ಭಾರತದಲ್ಲಿ ಮಾರ್ಚ್ 25 ರಂದು ಲಾಕ್‌ಡೌನ್ ಘೋಷಿಸಲಾಗಿತ್ತು. ಕಳೆದ 25ನ ದಿನಗಳಲ್ಲಿ ಉದ್ಯೋಗ, ವ್ಯವಹಾರ ಹಾಗೂ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ವಾಹನಗಳ ಓಡಾಟವೂ ನಿಂತಿದೆ. ಹೀಗಿರುವಾಗ ಗಾಳಿ ಶುದ್ಧಗೊಂಡಿದೆ. ದೇಶದಾದ್ಯಂತ ಅನೇಕ ನಗರಗಳಲ್ಲಿ ವಾಯುಗುಣ ಬಹಳಷ್ಟು ಸುಧಾರಿಸಿದೆ. ಇನ್ನು ದೇಶದ ಅತ್ಯಂತ ಮಲಿನ ನದಿಗಳೆಂದು ಕುಖ್ಯಾತಿ ಪಡೆದಿದ್ದ ಗಂಗಾ, ಯಮುನಾ ನದಿಗಳು ಕೂಡಾ ಶುದ್ಧಗೊಂಡಿವೆ. 

610

ಖರ್ಚು ಕಡಿಮೆ: ಲಾಕ್‌ಡೌನ್‌ನಿಂದಾಗಿ ಮಾಲ್, ಸಿನಿಮಾ ಹಾಲ್, ಕಾಂಪ್ಲೆಕ್ಸ್, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚಿವೆ. ಹೀಗಿರುವಾಗ ಜನರು ಇಂತಹ ಸ್ಥಳಗಳಿಗೆ ತೆರಳುತ್ತಿಲ್ಲ ಹಾಗೂ ಹಣವೂ ಖರ್ಚಾಗುತ್ತಿಲ್ಲ. ಕೇವಲ ಅಗತ್ಯ ವಸ್ತುಗಳಿಗಷ್ಟೇ ಹಹಣ ಖರ್ಚು ಮಾಡುತ್ತಿದ್ದಾರೆ.

710

ರಿಯಲ್ ವಾರಿಯರ್ಸ್ ಮಹತ್ವ ತಿಳಿಯಿತು: ವಿಶ್ವದಾದ್ಯಂತ ಕೊರೋನಾ ವಿರುದ್ಧ ಸಮರ ಆರಂಭವಾಗಿದೆ. ಈ ಸಮರದಲ್ಲಿ ಡಾಕ್ಟರ್, ನರ್ಸ್ ಹಾಗೂ ಮೆಡಿಕಲ್ ಸಿಬ್ಬಂದಿ ಬಹುದೊಡ್ಡ ಪಾತ್ರ ವಹಿಸಿದ್ದಾರೆ. ಇಷ್ಟೇ ಅಲ್ಲದೇ, ಪೊಲೀಸ್ ಸಿಬ್ಬಂದಿ, ಮಾಧ್ಯಮ ಮಂದಿ, ಪೌರ ಕಾರ್ಮಿಕರು ಹಾಗೂ ಭದ್ರತಾ ಸಿಬ್ಬಂದಿ ಹಾಗೂ ಅಗತ್ಯ ಸೇವೆಗಳನ್ನು ನೀಡುತ್ತಿರುವ ಮಂದಿ ತಮ್ಮ ಜೀವ ಪಣಕ್ಕಿಟ್ಟು ಜನರ ಅಗತ್ಯಗಳನ್ನು ಪೂರಸುತ್ತಿದ್ದಾರೆ. ಮಹಾಮಾರಿ ಲಗ್ಗೆ ಇಟ್ಟಾಗ ನಮಗೆ ಈ ಕೊರೋನಾ ವಾರಿಯರ್ಸ್ ಮಹತ್ವ ತಿಳಿದು ಬಂದಿದೆ.

810

ಪರೋಪಕಾರ ಮಾಡಲು ಪ್ರೋತ್ಸಾಹ: ಕೊರೋನಾಗೆ ಇಡೀ ವಿಶ್ವವೇ ನಲುಗಿದೆ. ಹೀಗಿರುವಾಗ ಈ ಅದೃಶ್ಯ ಶತ್ರುವಿನ ವಿರುದ್ಧದ ಸಮರದಲ್ಲಿ ಕೈಜೋಡಿಸಲು ಇಡೀ ದೇಶವೇ ಮುಂದಾಗಿದೆ, ಒಗ್ಗಟ್ಟು ಪ್ರದರ್ಶಿಸಿದೆ. ಉದ್ಯಮಿಗಳಿಂದ ಜನ ಸಾಮಾನ್ಯರವರೆಗೆ ಸರ್ಕಾರಿ ಸಂಸ್ಥೆ ಹಾಗೂ ಎನ್‌ಜಿಒ ಗಳು ಸಹಾಯ ಮಾಡಲು ಮುಂದಾಗಿದ್ದಾರೆ. ಕೆಲವರು ಆರ್ಥಕವಾಗಿ ಸಹಾಯ ಮಾಡುತ್ತಿದ್ದರೆ, ಇನ್ನು ಕೆಲವರು ಬಡವರಿಗೆ ಆಹಾರ ಹಾಗೂ ಊಟ ಪೂರೈಸುತ್ತಿದ್ದಾರೆ. ಕೊರೋನಾ ಸಂಕಟದ ನಡುವೆ ಮಾನವೀಯತೆ ಎಲ್ಲೆಎಡೆ ಕಂಡು ಬಂದಿದೆ.

910

ವೈದ್ಯಕೀಯ ಸೇವೆ ಮತ್ತಷ್ಟು ಉತ್ತಮಗೊಳಿಸುವ ಅವಕಾಶ: ಕೊರೋನಾದಿಂದಾಗಿ ವಿಶ್ವದಾದ್ಯಂತ ರಾಷ್ಟ್ರಗಳು ತಮ್ಮ ವೈದ್ಯಕೀಯ ಸೇವೆ ಉತ್ತಮಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿವೆ. ಕೊರೋನಾ ವಿರುದ್ಧ ತೆಗೆದುಕೊಂಡ ಈ ಕ್ರಮಗಳು ಮುಂದಿನ ದಿನಗಳಲ್ಲೂ ಬಹಳಷ್ಟು ಸಹಾಯ ಮಾಡಲಿವೆ. ಇದರಿಂದ ದೇಶದ ಆರೋಗ್ಯ ಸೇವೆ ಅಭಿವೃದ್ದೀಗೊಳ್ಳುವುದರೊಂದಿಗೆ, ದೇಶಗಳು ತಮ್ಮ ಅರ್ಥ ವ್ಯವ್ಸಥೆಯ ಕೊಂಚ ಭಾಗವನ್ನು ಆರೋಗ್ಯ ಸೇವೆಗೆಂದು ಮೀಸಲಿಡುತ್ತವೆ.

1010

ತಮ್ಮ ಇಷ್ಟದ ಕೆಲಸದ ಮೇಲೆ ಗಮನ ಕೊಡುವ ಅವಕಾಶ: ಲಾಕ್‌ಡೌನ್‌ನಿಂದ ಎಲ್ಲರೂ ಮನೆಯಲ್ಲಿ ದಿನ ಕಳೆಯುತ್ತಿದ್ದಾರೆ. ಹೀಗಿರುವಾಗ ಅವರಿಗೆ ತಮ್ಮ ಇಷ್ಟದ ವಿಚಾರದಲ್ಲಿ ತೊಡಗಿಸಿಕೊಳ್ಳುವ ಸಮಯ ಸಿಗುತ್ತಿದೆ. ಕೆಲವರು ಇಷ್ಟದ ಪುಸ್ತಕಗಳನ್ನು ಓದುತ್ತಿದ್ದರೆ, ಇನ್ನು ಕೆಲವರು ಇಷ್ಟದ ಅಡುಗೆ ಮಾಡುವುದನ್ನು ಕಲಿಯುತ್ತಿದ್ದಾರೆ. ಇದನ್ನು ಹೊರತುಪಡಿಸಿ ತಮ್ಮಿಷ್ಟದ ವಿಚಾರಗಳನ್ನು ಹುಡುಕಾಡುತ್ತಿದ್ದರೆ, ಇನ್ನು ಕೆಲವರು ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾರೆ. 

click me!

Recommended Stories