ಕೊರೋನಾಗೆ ಎಲ್ಲವೂ ಸ್ತಬ್ಧ: ಜನರಿಂದ ಗಿಜಿಗುಡುತ್ತಿದ್ದ ಪ್ರದೇಶದಲ್ಲಿ ನೊಣಗಳ ಕಾರುಬಾರು!
First Published | Mar 16, 2020, 1:13 PM ISTಚೀನಾದ ಹುಬೇ ಪ್ರಾಂತ್ಯದ ವುಹಾನ್ ನಗರದಿಂದ ಹಬ್ಬಿದ ಕೊರೋನಾ ವೈರಸ್ ಸದ್ಯ ಜಗತ್ತಿನೆಲ್ಲೆಡೆ ಅಬ್ಬರ ಸೃಷ್ಟಿಸಿದೆ. ನೂರಕ್ಕೂ ಅಧಿಕ ದೇಶಗಳಲ್ಲಿ ಸೋಂಕು ಹರಡಿದೆ. ಈಗಾಗಲೇ ಈ ಡೆಡ್ಲಿ ವೈರಸ್ ಗೆ 6 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಹೆಲ್ತ್ ಎಮರ್ಜೆನ್ಸಿ ಘೋಷಿಸಿದ್ದು, ಜನರನ್ನು ಓಡಾಡದಂತೆ ನಿರ್ಬಂಧಿಸಿವೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 100 ದಾಟಿದ್ದರೆ, ಅತ್ತ ಇರಾನ್ ನಲ್ಲಿ ಸುಮಾರು 10 ಮಂದಿ ಪ್ರತಿದಿನ ಮೃತಪಡುತ್ತಿದ್ದಾರೆ. ಪುಟ್ಟ ರಾಷ್ಟ್ರ ಇಟಲಿ ಸಾವಿನ ಮನೆಯಂತಾಗಿದೆ. ಕೊರೋನಾಗೆ ಕಂಗೆಟ್ಟ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಹೀಗಿರುವಾಗ ಜನರಿಂದ ಗಿಜಿಗುಡುತ್ತಿದ್ದ ವಿಶ್ವದ ಅನೇಕ ಪ್ರದೆಶಗಳು ಜನರಿಲ್ಲದೇ ಖಾಲಿ ಖಾಲಿಯಾಗಿವೆ. ನೊಣಗಳ ಹಾರಾಟ ಆರಂಭವಾಗಿದೆ.