ಹಮಾಸ್‌ನ್ನು ಉಗ್ರ ಸಂಘಟನೆ ಎಂದು ಘೋಷಿಸಿ: ಭಾರತಕ್ಕೆ ಇಸ್ರೇಲ್ ಮನವಿ

First Published Oct 26, 2023, 2:34 PM IST

ಇಸ್ರೇಲ್ ಮೇಲೆ ಆಕ್ಟೋಬರ್ 7 ರಂದು ದಾಳಿ ನಡೆಸಿದ ಹಮಾಸ್ ಉಗ್ರ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಬೇಕು ಎಂದು ಇಸ್ರೇಲ್‌ ಭಾರತವನ್ನು ಕೇಳಿದೆ. 

ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ  ಭಯೋತ್ಪಾದಕ ದಾಳಿಯ ನಂತರ ಹಮಾಸ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಹೆಸರಿಸುವಂತೆ  ಇಸ್ರೇಲ್ ಭಾರತೀಯ ಅಧಿಕಾರಿಗಳನ್ನು ಕೇಳಿದೆ 

ಇಸ್ರೇಲ್ ಮೇಲೆ ಆಕ್ಟೋಬರ್ 7 ರಂದು ದಾಳಿ ನಡೆಸಿದ ಹಮಾಸ್ ಉಗ್ರ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಬೇಕು ಎಂದು ಇಸ್ರೇಲ್‌ ಭಾರತವನ್ನು ಕೇಳಿದೆ. ಈ ಬಗ್ಗೆ ಮಾತನಾಡಿದ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನಾರ್ ನಾರ್ ಗಿಲೋನ್, ಭಾರತದ  ಬೆಂಬಲಕ್ಕೂ ಧನ್ಯವಾದ ತಿಳಿಸಿದ್ದಾರೆ. 

Latest Videos


ಪತ್ರಕರ್ತರೊಂದಿಗೆ ಸಂವಾದದಲ್ಲಿ ಇಸ್ರೇಲ್ ರಾಯಭಾರಿ ಗಿಲೋನ್  ಈ ವಿಚಾರ ತಿಳಿಸಿದ್ದಾರೆ. ಆಕ್ಟೋಬರ್ 7 ರ ಈ ಭೀಕರ ದಾಳಿಯಲ್ಲಿ  ಇಸ್ರೇಲ್‌ನಲ್ಲಿ 1,200ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. 

ಇಸ್ರೇಲ್ ದಾಳಿಗೆ ಹಾನಿಗೀಡಾದ ಮಸೀದಿ

ಭಾರತದಲ್ಲಿ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಇದು ಸರಿಯಾದ ಸಮಯ. ಈ ಹಿಂದೆಯೂ ಭಾರತಕ್ಕೆ ಈ ಮನವಿ ಮಾಡಲಾಗಿತ್ತು ಎಂದು ಗಿಲೋನ್ ಹೇಳಿದ್ದಾರೆ. 

ಹೆಣದ ರಾಶಿಯ ಮಧ್ಯೆ ಸಂಬಂಧಿಗಳ ರೋದನೆ

ಅಲ್ಲದೇ ಹಮಾಸ್ ವಿರುದ್ಧದ ಇಸ್ರೇಲ್‌ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಗೆ ಶೇ.100 ರಷ್ಟು ಬೆಂಬಲ ಸೂಚಿಸಿರುವ ಭಾರತಕ್ಕೆ ಅವರು ಇದೇ ವೇಳೆ ಧನ್ಯವಾದವನ್ನು ಅರ್ಪಿಸಿದರು.

ಯುದ್ಧದಿಂದ ಹಾನಿಗೀಡಾದ ಕಟ್ಟಡಗಳು

ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಖಂಡಿಸಿದ ವಿಶ್ವ ಮಟ್ಟದ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲಿಗರಾಗಿದ್ದಾರೆ. ಭಾರತ ಜಗತ್ತಿನಲ್ಲಿ ತುಂಬಾ ಮುಖ್ಯವಾದ ನೈತಿಕ ಧ್ವನಿಯಾಗಿದೆ ಹಾಗೂ ವಿಶ್ವದ ಪ್ರಮುಖ ದೇಶಗಳು  ನಮ್ಮೊಂದಿಗಿವೆ ಎಂದು ಗಿಲನ್ ಹೇಳಿದ್ದಾರೆ.

ಯುದ್ಧದಿಂದಾಗಿ ವಲಸೆ ಹೋಗುತ್ತಿರುವ ಜನ

ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟವನ್ನು ಭಾರತ  ಗಟ್ಟಿ ಧ್ವನಿಯಲ್ಲಿ  ಬೆಂಬಲಿಸಿದೆ ಎಂದು ಅವರು ಹೇಳಿದ್ದಾರೆ. ಆಕ್ಟೋಬರ್ 7 ರ ನಂತರ ಗಾಜಾಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ಹಮಾಸ್ ಉಗ್ರ ಸಂಘಟನೆ ವಿರುದ್ಧದ ಕಾರ್ಯಾಚರಣೆಯಲ್ಲಿ ಈಗಾಗಲೇ 5 ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. 

ಯುದ್ಧದಿಂದ ಹಾನಿಗೀಡಾದ ಕಟ್ಟಡಗಳು

 ಮಧ್ಯಪ್ರಾಚ್ಯದಲ್ಲಿ ತನ್ನ ಉಳಿವಿಗಾಗಿ ಇಸ್ರೇಲ್ ಈ ಯುದ್ಧವನ್ನು ಮಾಡುತ್ತಿದೆ. ಹಾಗೂ ಇದಕ್ಕಾಗಿಯೇ ಇಸ್ರೇಲ್  ಹಮಾಸ್‌ನ ಸರ್ವನಾಶಕ್ಕೆ ಶಪಥ ಮಾಡಿದೆ ಎಂದು ಅವರು ಹೇಳಿದ್ದಾರೆ.

ಯುದ್ಧದಿಂದ ಹಾನಿಗೀಡಾದ ಕಟ್ಟಡಗಳು

ಮಧ್ಯಪ್ರಾಚ್ಯದಲ್ಲಿ ತನ್ನ ಉಳಿವಿಗಾಗಿ ಇಸ್ರೇಲ್ ಈ ಯುದ್ಧವನ್ನು ಮಾಡುತ್ತಿದೆ. ಹಾಗೂ ಇದಕ್ಕಾಗಿಯೇ ಇಸ್ರೇಲ್  ಹಮಾಸ್‌ನ ಸರ್ವನಾಶಕ್ಕೆ ಶಪಥ ಮಾಡಿದೆ ಎಂದು ಅವರು ಹೇಳಿದ್ದಾರೆ. 

ಯುದ್ಧದಿಂದ ಹಾನಿಗೀಡಾದ ಕಟ್ಟಡಗಳು

ಈ ಮಧ್ಯೆ ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿಯ ಹಿನ್ನೆಲೆಯಲ್ಲಿ ಇರಾನ್‌, ಲೆಬನಾನ್‌ ಬೆಂಬಲಿತ ಉಗ್ರ ಸಂಘಟನೆಯಾದ ಹಿಜ್ಬುಲ್ಲಾದ ಮುಖ್ಯಸ್ಥ ಸಯ್ಯದ್‌ ಹಸ್ಸನ್‌ ನಸ್ರಲ್ಲಾಹ್‌, ಇನ್ನೆರಡು ಕುಖ್ಯಾತ ಪ್ಯಾಲೆಸ್ತೀನ್‌ ಪರ ಉಗ್ರ ಸಂಘಟನೆಗಳಾದ ಹಮಾಸ್‌ ಮತ್ತು ಇಸ್ಲಾಮಿಕ್‌ ಜಿಹಾದ್ ಮುಖ್ಯಸ್ಥರ ಜೊತೆ ರಹಸ್ಯ ಸಭೆ ನಡೆಸಿದ ಬಗ್ಗೆ ವರದಿಯಾಗಿದೆ.

ಯುದ್ಧಕ್ಕೆ ಬಲಿಯಾದ ಪುಟ್ಟ ಕಂದನ ಕಳೆಬರದೊಂದಿಗೆ ಸಂಬಂಧಿ

ಸಯ್ಯದ್‌ ಅಸ್ಸನ್‌, ಹಮಾಸ್‌ನ ಉಪನಾಯಕ ಸಲೇಹ್‌ ಅಲ್‌ ಅರೌರಿ ಮತ್ತು ಇಸ್ಲಾಮಿಕ್‌ ಜಿಹಾದ್‌ನ ನಾಯಕ ಜೈದ್‌ ಅಲ್‌ ನಖ್ಲಾ ಜೊತೆ ಸಭೆ ನಡೆಸುತ್ತಿರುವ ಫೋಟೋವನ್ನು ಇಸ್ರೇಲಿ ಮಾಧ್ಯಮವೊಂದು ಪ್ರಕಟಿಸಿದೆ. 

click me!