ಭಾರತ, ನೇಪಾಳ ನಡುವಿನ ಸಂಬಂಧಕ್ಕೆ ಹುಳಿ ಹಿಂಡಿದ ಈಕೆ ಯಾರು?

Published : Jul 06, 2020, 07:19 PM IST

ಭಾರತ ಹಾಗೂ ನೇಪಾಳ ನಡುವಿನ ಸಂಬಂಧ ಇತ್ತೀಚೆಗೆ ಕೊಂಚ ಹಾಳಾಗಿದೆ. ಉಭಯ ರಾಷ್ಟ್ರಗಳ ನಡುವಿನ ಈ ಬಿರುಕಿಗೆ ಚೀನಾ ಜೊತೆಗೆ ನೇಪಾಳದ ಆತ್ಮೀಯತೆ ಕಾರಣ ಎನ್ನಲಾಗುತ್ತದೆ. ಆದರೆ ನೇಪಾಳ ಹಾಗೂ ಚೀನಾ ನಡುವಿನ ಈ ಆತ್ಮೀಯತೆ ಹೆಚ್ಚುವಲ್ಲಿ ಓರ್ವ ಮಹಿಳಾ ನಾಯಕಿ ಬಹುದೊಡ್ಡ ಪಾತ್ರ ನಿರ್ವಹಿಸಿದ್ದಾರೆನ್ನಾಗಿದೆ. ಅವರೇ ನೇಪಾಳದಲ್ಲಿರುವ ಚೀನಾದ ಮಹಿಳಾ ರಾಯಭಾರಿ ಹೋವ್ ಯಾಂಕಿ. ಇವರು ನೇಪಾಳದಲ್ಲಿ ಬಹಳ ಸಕ್ರಿಯರಾಗಿದ್ದಾರೆನ್ನಲಾಗಿದೆ. ಇವರು ತಮ್ಮ ರಣತಂತ್ರದಿಂದ ಉಭಯ ರಾಷ್ಟ್ರಗಳ ನಡುವಿನ ಆತ್ಮೀಯತೆ ಹೆಚ್ಚಿಸಿದ್ದಾರೆ.  

PREV
112
ಭಾರತ, ನೇಪಾಳ ನಡುವಿನ ಸಂಬಂಧಕ್ಕೆ ಹುಳಿ ಹಿಂಡಿದ ಈಕೆ ಯಾರು?

ನೇಪಾಳ ಇತ್ತೀಚೆಗಷ್ಟೇ ಭಾರತದ ಮೂರು ಪ್ರದೇಶಗಳನ್ನು ತನ್ನ ನಕ್ಷೆಗೆ ಸೇರ್ಪಡೆಗೊಒಳಿಸಿತ್ತು. ಇದಾದ ಬಳಿಕ ಈ ಈ ತಿದ್ದುಪಡಿ ಮಸೂದೆಗೆ ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕಾರ ದೊರಕಿತ್ತು. ಆದರೀಗ ನೇಪಾಳದ ಪ್ರಧಾನ ಮಂತ್ರಿ ಕೆ. ಪಿ ಶರ್ಮಾ ಓಲಿಗೆ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಲು ಚೀನಾದ ರಾಯಭಾರಿ ಪ್ರೇರೇಪಿಸಿದ್ದರೆನ್ನಲಾಗಿದೆ.

212

ಇಷ್ಟೇ ಅಲ್ಲ ಯಾಂಕಿ ಭಾರತೀಯ ಸೇನೆ ಮುಖ್ಯಸ್ಥ ಮನೋಜ್ ನರವಣೆ ನೇಪಾಳ ಹಾಗೂ ಚೀನಾ ಕುರಿತಾಗಿ ನೀಡಿದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದೆರು.

312

ವಾಸ್ತವವಾಗಿ ಸೇನಾ ಮುಖ್ಯಸ್ಥ ಚೀನಾವನ್ನು ಗುರುಯಾಗಿಸಿ ಮಾತನಾಡುತ್ತಾ ನೇಪಾಳ ಬೇರೊಬ್ಬರ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದೆ ಎಂದಿದ್ದರು. ಹೀಗಿರುವಾಗಲೇ ಯಾಂಕಿ ರೈಸಿಂಗ್ ನೇಪಾಳ್‌ಗೆ ನೀಡಿರುವ ಸಂದರ್ಶನದಲ್ಲಿ ನೇಪಾಳ ಸರ್ಕಾರ ತನ್ನ ಕ್ಷೇತ್ರೀಯ ಏಕತೆಯ ಸುರಕ್ಷತೆಗಾಗಿ ಇದನ್ನು ಮಾಡಿದೆ ಎಂದಿದ್ದರು.

412

ಇಷ್ಟೇ ಅಲ್ಲದೇ ನೇಪಾಳ ಚೀನಾ ಹೇಳಿದಂತೆ ನಡೆದುಕೊಳ್ಳುತ್ತಿದೆ ಎಂಬುವುದು ಆಧಾರ ರಹಿತ ಆರೋಪವಾಗಿದೆ. ತಪ್ಪು ಉದ್ದೇಶದಿಂದ ಈ ಆರೋಪ ಮಾಡಲಾಗಿದೆ. ಇದು ಕೇವಲ ನೇಪಾಳದ ಮಹತ್ವಾಕಾಂಕ್ಷೆಗಳನ್ನು ಅವಮಾನಿಸುವುದಷ್ಟೇ ಅಲ್ಲದೆ, ಚೀನಾ ಹಾಗೂ ನೇಪಾಳ ನಡುವಿನ ಸಂಬಂಧಗಳನ್ನೂ ಹಾನಿಗೊಳಿಸುತ್ತದೆ ಎಂದಿದ್ದಾರೆ.

512

ನೇಪಾಳದಲ್ಲಿರುವ ಚೀನಾದ ರಾಯಭಾರಿ ಕಚೇರಿ ಬಹಳಷ್ಟು ಸಕ್ರಿಯವಾಗಿದೆ. ಅವರು ಕೇವಲ ರಾಜತಾಂತ್ರಿಕತೆಗಷ್ಟೇ ಸೀಮಿತವಾಗಿರದೆ, ನೇಪಾಳದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳುತ್ತದೆ. ಅಂತರಾಷ್ಟ್ರೀಯ ಮಹಿಳಾ ದಿನದಂದು ಅವರು ಅಲ್ಲಿನ ಯುವತಿಯರೊಂದಿಗೆ ನೃತ್ಯ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.

612

2018ರಲ್ಲಿ ಯಾಂಕಿ ನೇಆಳದಲ್ಲಿ ಚೀನಾ ರಾಯಭಾರಿಯಾಗಿ ನೇಮಕಗೊಂಡಿದ್ದರು. ಇದಾದ ಬಳಿಕ ಉಭಯ ರಾಷ್ಟ್ರಗಳ ಸಮಬಂಧ ದಿನೇ ದಿನೇ ಉತ್ತಮವಾಗತೊಡಗಿತು. ಇಷ್ಟೇ ಅಲ್ಲ ಯಾಂಕಿ ನೇಪಾಳದ ರಾಜಕೀಯ ವಿಚಾರದಲ್ಲೂ ಪಾತ್ರ ವಹಿಸುತ್ತಾರೆ. ಅನೇಕ ಬಾರಿ ಓಲಿ ಸರ್ಕಾರಕ್ಕೆ ವಿಘ್ನ ನಿವಾರಕಿಯೂ ಆಗಿದ್ದಾರೆ.

712

ಚೀನಾದಿಂದ ಹಬ್ಬಿದ ಕೊರೋನಾ ಇಡೀ ವಿಶ್ವಕ್ಕೇ ವ್ಯಾಪಿಸಿದೆ. ಆದರೆ ಈ ಸಂಕಷ್ಟದ ವೇಳೆ ಯಾಂಕಿ ನೇಪಾಳಕ್ಕೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಕೊರೋನಾ ಸಹಯೋಗದ ಹೆಸರಲ್ಲಿ ಅವರು ಸೇನೆಯಿಂದ ಹಿಡಿದು ಸರ್ಕಾರ ಹಾಗೂ ಜನ ಸಾಮಾನ್ಯರವರೆಗೆ ನೇರವಾಗಿ ಸಂಪರ್ಕಕಿಸಿದರು ಹಾಗೂ ಅಗತ್ಯವಿದ್ದ ಔಷಧಿಗಳನ್ನು ಪೂರೈಸಿದರು.

812

ಯಾಂಕೀ ನೇಪಾಳದ ಅನೇಕ ಸಚಿವಾಲಯಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಅಲ್ಲದೇ ಕೊರೋನಾ ನೆಪದಲ್ಲಿ ಅನೇಕ ರಾಜಕೀಯ ಪಕ್ಷಗಳ ಸಂಪರ್ಕದಲ್ಲೂ ಇದ್ದಾರೆ.

912

ಇಷ್ಟೇ ಅಲ್ಲ ಯಾಂಕಿ ನೇಪಾಳ ಚುನಾವಣೆಗೂ ಮೊದಲು ಎರಡೂ ಕಮ್ಯುನಿಸ್ಟ್ ಪಕ್ಷದ ಮೈತ್ರಿ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಷ್ಟೇ ಅಲ್ಲ ಈಗ ಓಲಿ ಪಕ್ಷ ಮುರಿದು ಬೀಳುವ ಹಂತಕ್ಕೆ ತಲುಪಿದಾಗಲೂ ಅವರೇ ಅದನ್ನು ಸರಿಪಡಿಸಿದರು.

1012

ಯಾಂಕಿ 1996ರಿಂದಲೂ ಚೀನಾದ ವಿದೇಶಾಂಗ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಅವರು ದಕ್ಷಿಣ ಏಷ್ಯಾ ವಿಚಾರದಲ್ಲಿ ಡೆಪ್ಯುಟಿ ಡೈರೆಕ್ಟರ್ ಹುದ್ದೆಯನ್ನೂ ಅಲಂಕರಿಸಿದ್ದಾರೆ. 

1112

ನೇಪಾಳಕ್ಕಿಂತ ಮೊದಲು ಯಾಂಕಿ ಪಾಕಿಸ್ತಾನದಲ್ಲಿದ್ದ ಚೀನಾ ರಾಯಭಾರಿ ಕಚೇರಿಯಲ್ಲಿದ್ದರು. ಅವರಿಗೆ ಆಂಗ್ಲ, ಚೀನಾ ಹಾಗೂ ಉರ್ದೂ ಈ ಮೂರು ಭಾಷೆಗಳು ಚೆನ್ನಾಗಿ ತಿಳಿದಿವೆ.

1212

ಸದ್ಯ ನೇಪಾಳಿ ಭಾಷೆಯನ್ನೂ ಅರಿತುಕೊಂಡು ಉತ್ತರಿಸಲು ಆರಂಭಿಸಿದ್ದಾರೆ.

click me!

Recommended Stories