ಈ 'ಸ್ಪೆಷಲ್' ವಿಮಾನ ಏರಲು ಮುಗಿ ಬೀಳ್ತಿದ್ದಾರೆ ಜನ, ಲಕ್ಷ ರೂ. ಕೊಟ್ಟು ಟಿಕೆಟ್ ಖರೀದಿ!

First Published | Jul 5, 2020, 5:51 PM IST

ಕೊರೋನಾತಂಕದಿಂದಾಗಿ ವಿಶ್ವಾದ್ಯಂತ ಅನೇಕ ಕಡೆ ಲಾಕ್‌ಡೌನ್ ಘೋಷಿಸಲಾಗಿದೆ. ಕೊರೋನಾಗಿಂತ ಮೊದಲು ತಿಂಗಳ ಮೊದಲೇ ತಮ್ಮ ರಜೆ ಕುರಿತು ಎಲ್ಲಾ ಪ್ಲಾನಿಂಗ್ ನಡೆಸುತ್ತಿದ್ದ ಜನ ಇಂದು ಮನೆಯೊಳಗೇ ಉಳಿಯುವಂತಾಗಿದೆ. ಹೀಗಾಗಿ ಸುತ್ತಾಟ, ಪ್ರವಾಸ ಮಾಡುತ್ತಿದ್ದ ಜನ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಿರುವಾಗ ನೀವೂ ಸುತ್ತಾಟವನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರೆಂದರೆ ಈ ಸುದ್ದಿ ನಿಮಗಾಗಿ. ಪ್ರಸಿದ್ಧ ಏರ್‌ಲೈನ್ಸ್‌ ಕಂಪನಿಯೊಂದು ದೇಶ ವಿದೇಶವೆಂದು ಪ್ರಯಾಣಿಸಿ ಖುಷಿ ಪಡುವವರಿಗಾಗೇ ಸ್ಪೆಷಲ್ ಟ್ರಿಪ್‌ಗಾಗಿ ವಿಮಾನವೊಂದನ್ನು ಏರ್ಪಾಡು ಮಾಡಿದೆ. ಇದಕ್ಕಾಗಿ ನೀವು ಟಿಕೆಟ್ ಖರೀದಿಸಿ, ಏರ್‌ಪೋರ್ಟ್‌ನಲ್ಲಿ ಚೆಕ್‌ಇನ್ ಕೂಡಾ ಮಾಡಬೇಕು. ವಿಮಾನದೊಳಗೆ ಕುಳಿತುಕೊಳ್ಳಬಹುದು ಕೂಡಾ ಆದರೆ ವಿಮಾನ ಹಾರಾಟ ನಡೆಸುವ ಸಮಯದಲ್ಲಿ ಬರುತ್ತೆ ಬಿಗ್ ಟ್ವಿಸ್ಟ್. ಹೌದು ಈ ಮಜಾದಾಯಕ ಟ್ರಿಪ್ ಇತ್ತೀಚೆಗೆ ಭಾರೀ ಸೌಂಡ್ ಮಾಡುತ್ತಿದೆ. ಈವರೆಗೂ ಸುಮಾರು ಏಳು ಸಾವಿರ ಮಂದಿ ಇದಕ್ಕೆ ರಿಜಿಸ್ಟರ್ ಮಾಡಿದ್ದಾರೆ.

ನೀವೂ ಕೂಡಾ ಲಾಕ್‌ಡೌನ್‌ ನಡುವೆ ಸುತ್ತಾಡುವುದನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೀರಾ? ನಿಮಗೂ ಮನೆಯಲ್ಲಿದ್ದು ಬೋರಾಗುತ್ತಿದೆಯಾ? ನಿಮ್ಮೆಲ್ಲಾ ವಸ್ತುಗಳನ್ನು ಗಂಟು ಮೂಟೆ ಕಟ್ಟಿ ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಆಸೆ ಇದೆಯಾ?
ತೈವಾನ್‌ನಲ್ಲಿ ಸೋಂಗ್‌ಶಾನ್‌ ಏರ್‌ಪೋರ್ಟ್‌ನಲ್ಲಿ ನಕಲಿ ವಿಮಾನ ಆರಂಭವಾಗಿದೆ. ಇದಕ್ಕಾಗಿ ಈವರೆಗೆ ಏಳು ಸಾವಿರ ಮಂದಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಇವರಲ್ಲಿ 60 ಮಂದಿಗೆ Random ಆಗಿ ಆಯ್ಕೆ ಮಾಡುತ್ತಿದ್ದಾರೆ.
Tap to resize

ತೈವಾನ್‌ನ ಈ ಏರ್‌ಪೋರ್ಟ್‌ನಲ್ಲಿ ಆರಂಭವಾದ ಈ ವಿಭಿನ್ನ ವಿಮಾನಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ವಾಸ್ತವವಾಗಿ ಇದರಲ್ಲಿ ಜನ ಟಿಕೆಟ್ ಖರೀದಿಸಲು ಏರ್‌ಪೋರ್ಟ್‌ಗೆ ತಲುಪಿದ್ದಾರೆ.
ಅಲ್ಲಿ ಈ ಮೊದಲಿನಂತೆ ಚೆಕ್‌ಇನ್ ಮಾಡುತ್ತಿದ್ದಾರೆ. ಅಲ್ಲಿ ಸೆಕ್ಯೂರಿಟಿ ಚೆಕ್ ಕೂಡಾ ನಡೆಯುತ್ತದೆ. ಇದಾದ ಬಳಿಕ ವಿಮಾನದೊಳಗೆ ಬೋರ್ಡಿಂಗ್ ಕೂಡಾ ನಡೆಸುತ್ತಾರೆ. ಇದಾದ ಬಿಕ ಬರುತ್ತೆ ಬಹುದೊಡ್ಡ ತಿರುವು.
ಯಾಕಂದ್ರೆ ಈ ವಿಮಾನ ಟೇಕ್‌ ಆಫ್ ಆಗುವುದಿಲ್ಲ. ಎರಡು ಗಂಟೆ ಬಳಿಕ ನೀವು ವಿಮಾನದಿಂದ ಇಳಿಯಬೇಕಾಗುತ್ತದೆ. ಇಲ್ಲಿ ನೀವು ಆಹಾರವನ್ನೂ ಸೇವಿಸಬಹುದು. ಜೊತೆಗೆ ಕಸ್ಟಮ್ಸ್‌ ಡ್ಯೂಟಿಯಿಂದ ಶಾಪಿಂಗ್ ಕೂಡಾ ಮಾಡಬಹುದು.
ಈ ವಿಮಾನ ಇತ್ತೀಚೆಗೆ ಭಾರೀ ಸೌಂಡ್ ಮಾಡ್ತಿದೆ. ಜನರಿಗೆ ಲಾಕ್‌ಡೌನ್ ಬಳಿಕ ಸುತ್ತಾಡುವ ಈ ವಿಭಿನ್ನ ಅನುಭವ ಖುಷಿ ಕೊಡುತ್ತಿದೆ. ತೈವಾನ್‌ನ ಈ ಏರ್‌ಪೋರ್ಟ್‌ಗೆ ಚೀನಾದ ವಿಮಾನವನ್ನು ಬುಕ್ ಮಾಡಲಾಗಿದೆ.
ಜನರು ವಿಮಾನದೊಳಗೆ ತೆರಳಿ ಕುಳಿತುಕೊಳ್ಳುತ್ತಿದ್ದಾರೆ. ಅವರಿಗೆ ಡ್ರಿಂಕ್ಸ್, ಊಟ ಎಲ್ಲವನ್ನೂ ವಿತರಿಸಲಾಗುತ್ತಿದೆ. ಅಟೆಂಡರ್‌ ಬಂದು ಅವರನ್ನು ಸ್ವಾಗತಿಸುತ್ತಾರೆ.
ಇನ್ನು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಟೂರಿಸಂ ಈಗಲೂ ಬ್ಯಾನ್ ಆಗಿದೆ. ಕೊರೋನಾದಿಂದಾಗಿ ವಿದೇಶದಿಂದ ಬಂದವರನ್ನು ಹದಿನಾಲ್ಕು ದಿನ ಕ್ವಾರಂಟೈನ್‌ ಮಾಡಲಾಗುತ್ತಿದೆ. ಹೀಗಿರುಉವಾಗ ಈ ವಿಮಾನ ಜನರಿಗೆ ಖುಷಿ ಕೊಡುತ್ತಿದೆ.

Latest Videos

click me!