ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಒಪ್ಪಂದ ಏರ್ಪಡುತ್ತಿದ್ದು, ಇದರಿಂದ ಕಚ್ಚಾ ತೈಲ ಬೆಲೆಯಲ್ಲಿ ಶೇ.4ರಷ್ಟು ಕುಸಿತವಾಗಿದೆ. ಈ ಒಪ್ಪಂದದ ಪರಿಣಾಮವಾಗಿ, ಯುದ್ಧದ ಕಾರಣದಿಂದ ಮುಚ್ಚಲಾಗಿದ್ದ ಹರ್ಮೋಜ್ ಜಲಸಂಧಿ ಮತ್ತೆ ಮುಕ್ತವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಒಪ್ಪಂದ ಏರ್ಪಡುತ್ತಿದ್ದಂತೆ ಕಚ್ಚಾ ತೈಲ ಬೆಲೆಯಲ್ಲಿ ಶೇ.4ರಷ್ಟು ಕುಸಿತವಾಗಿದೆ. 80 ಡಾಲರ್‌ಗೆ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ಇರಾನ್ ದೇಶ ಹರ್ಮೋಜ್ ಜಲಸಂಧಿಯನ್ನು ಬಂದ್ ಮಾಡಿತ್ತು. ಶಾಂತಿ ಒಪ್ಪಂದದ ಬಳಿಕ ಜಲಸಂಧಿ ಮುಕ್ತವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ.
25
ತೈಲ ದರ
ಅಧ್ಯಕ್ಷ ಟ್ರಂಪ್ ಘೋಷಣೆ ಬೆನ್ನಲ್ಲೇ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 3.5% ಕ್ಕಿಂತ ಹೆಚ್ಚು ಕುಸಿದು 83.48 ಡಾಲರ್‌ಗೆ ತಲುಪಿದೆ. ಈ ನಡುವೆ ಅಮೆರಿಕದ ಕಚ್ಚಾ ತೈಲ, WTI (ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್) ಸುಮಾರು ಶೇ. 5 ರಷ್ಟು ಕುಸಿದು ಪ್ರತಿ ಬ್ಯಾರೆಲ್‌ಗೆ 80.61 ಡಾಲರ್‌ಗೆ ತಲುಪಿದೆ. ಯುದ್ಧದ ಪರಿಣಾಮದಿಂದ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್ 120 ಡಾಲರ್ ವರೆಗೆ ತಲುಪಿ ದಾಖಲೆಯನ್ನು ಬರೆದಿತ್ತು. ಯುದ್ಧಕ್ಕೂ ಮುನ್ನ ತೈಲ ದರ 70 ಡಾಲರ್‌ನ ಆಸುಪಾಸಿನಲ್ಲಿತ್ತು.
35
ಎಲ್‌ಪಿಜಿ ಸಿಲಿಂಡರ್ ಬೆಲೆ
ವಿಶ್ವದ ಶೇ.20ರಷ್ಟು ಕಚ್ಚಾತೈಲವು ಹರ್ಮೋಜ್ ಜಲಸಂಧಿ ಮೂಲಕ ಸಾಗುತ್ತದೆ. ಇರಾನ್ ಜಲಸಂಧಿ ಮೇಲೆ ನಿಬಂಧನೆ ಹಾಕಿದ್ದರಿಂದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಲೆಗಳಲ್ಲಿ ಏರಿಕೆಯಾಗಿತ್ತು. ಹಾಗೆಯೇ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿಯೂ ದರ ಏರಿಕೆಯಾಗಿತ್ತು.
ಎರಡೂ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನವು ಜೂನ್ 19 ರಂದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಟ್ರಂಪ್ ಅವರೇ ಬಂದು ಸಹಿ ಹಾಕಬೇಕು ಎಂಬ ಷರತ್ತನ್ನು ಇರಾನ್ ವಿಧಿಸಿದೆ ಎನ್ನಲಾಗುತ್ತಿದೆ. ಆದ್ರೆ ಈವರೆಗೆ ಇರಾನ್‌ನಿಂದ ಶಾಂತಿ ಒಪ್ಪಂದದ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
55
ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಯುದ್ಧ ಆರಂಭಗೊಂಡಿತ್ತು. ಯುದ್ಧದ ಮೊದಲ ದಿನದಂದು ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಹತ್ಯೆಯಾಗಿತ್ತು. ಇದಾದ ನಂತರ ಎರಡು ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ದಾಳಿ ಮಾಡಿತ್ತು. ಜೂನ್‌ನಲ್ಲಿ ಯುಎಸ್ ಅಪಾಚೆ ಹೆಲಿಕಾಪ್ಟರ್‌ನ್ನು ಇರಾನ್ ಹೊಡೆದುರುಳಿಸಿದ ಬಳಿಕ ಮತ್ತೆ ಯುದ್ಧ ಪುನಾರಂಭವಾಗುವ ಆತಂಕ ಎದುರಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ