Which Country Condoms Are Free: ಇಲ್ಲಿ ಯುವಕರಿಗೆ ಉಚಿತ ಕಾಂಡೋಮ್‌ಗಳನ್ನು ವಿತರಿಸುತ್ತಿದೆ. ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆ.
ಇಂದು ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಲಾಗುತ್ತಿದೆ. ಈ ಸಂಬಂಧ ಪ್ರತಿಯೊಂದು ದೇಶ ತನ್ನದೇ ಆದ ನೀತಿಗಳನ್ನು ಅಳವಡಿಸಿಕೊಂಡಿವೆ. ಲೈಂಗಿಕ ಶಿಕ್ಷಣ ಮತ್ತು ಸುರಕ್ಷಿತ ಸಂಪರ್ಕದ ಜಾಗೃತಿಗಾಗಿ ವಿಶ್ವದ ಒಂದು ದೇಶ ವಿಶಿಷ್ಟ ಹೆಜ್ಜೆ ಇಟ್ಟಿದೆ. ಈ ದೇಶದ ಸರ್ಕಾರ ಯುವಕರು ಮತ್ತು ಹದಿಹರೆಯದವರಿಗಾಗಿ ಒಂದು ದೊಡ್ಡ ಉಪಕ್ರಮವನ್ನು ತೆಗೆದುಕೊಂಡಿದೆ. ಈ ಕ್ರಮ ಏನು ಅಂದ್ರೆ ಸಂಪೂರ್ಣ ಉಚಿತವಾಗಿ ಕಾಂಡೋಮ್ ವಿತರಣೆ ಮಾಡೋದಾಗಿದೆ.
27
ಉಚಿತವಾಗಿ ಕಾಂಡೋಮ್ ವಿತರಣೆ
ಈ ಯೋಜನೆಯ ವಿಶೇಷವೆಂದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕ ಮತ್ತು ಯುವತಿಯರು ಈ ಸೌಲಭ್ಯದ ಲಾಭವನ್ನು ಪಡೆಯಬಹುದು. ಹಾಗಾದ್ರೆ ಉಚಿತವಾಗಿ ಕಾಂಡೋಮ್ ವಿತರಣೆ ಮಾಡುವ ದೇಶ ಯಾವುದು? ಈ ಕುರಿತು ಅಲ್ಲಿನ ಸರ್ಕಾರ ಏನು ಹೇಳುತ್ತೆ ಎಂಬುದರ ಮಾಹಿತಿ ಈ ಲೇಖನವನ್ನು ಒಳಗೊಂಡಿದೆ.
37
ಫ್ರಾನ್ಸ್
ಫ್ರಾನ್ಸ್‌ನಲ್ಲಿ ಉಚಿತವಾಗಿ ಕಾಂಡೋಮ್ ವಿತರಣೆ ಮಾಡುವ ಯೋಜನೆಯನ್ನು ಹೊಂದಿದೆ. ಇದಕ್ಕಾಗಿಯೇ ಫ್ರೆಂಚ್ ಸರ್ಕಾರ ಹಣವನ್ನು ಮೀಸಲಿಡುತ್ತದೆ. ಫ್ರೆಂಚ್ ಸರ್ಕಾರವು ಜನರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ವಿತರಿಸುತ್ತದೆ. ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಅನಗತ್ಯ ಗರ್ಭಧಾರಣೆಯಿಂದ ಜನರನ್ನು ರಕ್ಷಿಸುವುದು ಈ ನಿರ್ಧಾರದ ಉದ್ದೇಶ ಎಂದು ಫ್ರೆಂಚ್ ಸರ್ಕಾರ ಹೇಳುತ್ತದೆ.
ಹಲವು ಸಂದರ್ಭಗಳಲ್ಲಿ ಯುವ ಸಮುದಾಯ ಮಾಹಿತಿ ಕೊರತೆ ಮತ್ತು ತಪ್ಪು ತಿಳುವಳಿಕೆ ಅಥವಾ ನಾಚಿಕೆಯಿಂದಾಗಿ ಕಾಂಡೋಮ್ ಖರೀದಿಸಲು ಹಿಂದೇಟು ಹಾಕುತ್ತಾರೆ. ಈ ಮೂಲಕ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಾಗಿ ಅಪಾಯಕ್ಕೆ ಸಿಲುಕುತ್ತಾರೆ. ಈ ಕಾರಣದಿಂದ ಫ್ರಾನ್ಸ್ ಸರ್ಕಾರ ಕಾಂಡೋಮ್ ಖರೀದಿಸಲು ಯಾವುದೇ ಆರ್ಥಿಕ ಅಥವಾ ಸಾಮಾಜಿಕ ಅಡೆತಡೆಗಳನ್ನು ಎದುರಿಸಬಾರದು ಎಂದು ಬಯಸುತ್ತದೆ. ಈ ಹಿನ್ನೆಲೆ ಉಚಿತವಾಗಿ ಕಾಂಡೋಮ್ ವಿತರಣೆ ಮಾಡುತ್ತದೆ.
ವರದಿಗಳ ಪ್ರಕಾರ, ಫ್ರಾನ್ಸ್‌ನ ಮೆಡಿಕಲ್ ಸ್ಟೋರ್, ವಿಶ್ವವಿದ್ಯಾಲಯ ಆರೋಗ್ಯ ಕೇಂದ್ರ ಮತ್ತು ಚಿಕಿತ್ಸಾಲಯಗಳಲ್ಲಿ ಕಾಂಡೋಮ್‌ಗಳು ಸುಲಭವಾಗಿ ಲಭ್ಯವಿರುತ್ತದೆ. ಯಾವುದೇ ಹಿಂಜರಿಕೆಯಿಲ್ಲದೇ ಇರಿಸಲಾಗಿರುವ ಕಾಂಡೋಮ್ ಪಡೆದುಕೊಳ್ಳಬಹುದಾಗಿದೆ. 16 ಅಥವಾ 18 ವರ್ಷಕ್ಕಿಂತ ಮೇಲ್ಪಟ್ಟವರು ಉಚಿತ ಕಾಂಡೋಮ್ ಪಡೆದುಕೊಳ್ಳಬಹುದು ಎಂದು ಈ ದೇಶದ ನಿಯಮ ಹೇಳುತ್ತದೆ. ಹದಿಹರೆಯದವರು ಸುರಕ್ಷಿತವಾಗಿರಲು ಬಯಸಿದರೆಗಿ ಹಣವನ್ನು ಖರ್ಚು ಮಾಡುವ ಅಗತ್ಯವಿರಲ್ಲ.
ಸುಮಾರು 3-4 ವರ್ಷಗಳ ಹಿಂದೆ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಉಚಿತವಾಗಿ ಕಾಂಡೋಮ್ ವಿತರಣೆ ಮಾಡಲಾಗುವುದು ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದರು. ಯುವಕರು ಲೈಂಗಿಕ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು ಮತ್ತು ಅವರಿಗೆ ಸುರಕ್ಷಿತ ವಿಧಾನಗಳನ್ನು ಉಚಿತವಾಗಿ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದರು.
ಏಡ್ಸ್ ಮತ್ತು ಇತರ ಲೈಂಗಿಕವಾಗಿ ಹರಡುವ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಕಾಂಡೋಮ್‌ಗಳ ಲಭ್ಯತೆಯನ್ನು ಸುಲಭಗೊಳಿಸುವುದು ಅಗತ್ಯವಾಗಿದೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದರು. ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳಾದ ಎಸ್‌ಟಿಐಗಳನ್ನು ತಡೆಗಟ್ಟಲು ಮತ್ತು ನಿಯಂತ್ರಣಕ್ಕಾಗಿ ಕಾಂಡೋಮ್‌ಗಳನ್ನು ಬಳಕೆ ಮಾಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ