'ಪೋರ್ನ್ ವೆಬ್'ನಲ್ಲಿ ಮೆಲೋನಿ ನಕಲಿ ಫೋಟೋ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

Published : Aug 30, 2025, 02:20 PM IST

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ನಕಲಿ ಚಿತ್ರವನ್ನು ಅಶ್ಲೀಲ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೃತ್ಯವನ್ನು "ಅಸಹ್ಯಕರ" ಎಂದು ಬಣ್ಣಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

PREV
15

ರೋಮ್‌: ಅಶ್ಲೀಲ ವೆಬ್‌ಸೈಟ್‌ನಲ್ಲಿ ತಮ್ಮ ನಕಲಿ ಮತ್ತು ವಿರೂಪಗೊಳಿಸಿರುವ ಚಿತ್ರ ಹಂಚಿಕೊಂಡಿರುವ ಬಗ್ಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆಕ್ರೋಶ ಹೊರಹಾಕಿ ದ್ದಾರೆ. ಜೊತೆಗೆ ಇಂಥಹ ಪೋರ್ನ್ ವೆಬ್‌ಸೈಟ್ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. 7 ಲಕ್ಷ ಚಂದಾದಾರರನ್ನು ಹೊಂದಿರುವ ಫಿಕಾ ಎಂಬ ಅಶ್ಲೀಲ ವೆಬ್‌ಸೈಟ್‌ನಲ್ಲಿ ಮೆಲೋನಿ, ಅವರ ಸೋದರಿ ಅರಿಯಾನಾ ಮತ್ತು ಇಟಲಿ ವಿಪಕ್ಷ ನಾಯಕಿ ಎಲ್ಲೀ ಸ್‌ಕ್ಲೀನ್ ಅವರ ಚಿತ್ರಗಳಿದ್ದವು.

25

ಇಟಲಿಯ ಕುಖ್ಯಾತ ಅಶ್ಲೀಲ ಸೈಟ್‌ನಲ್ಲಿ ನಕಲಿ ಚಿತ್ರಗಳು ಕಾಣಿಸಿಕೊಂಡಿರುವುದನ್ನು 'ಅಸಹ್ಯಕರ' ಎಂದು ಮೆಲೋನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರಿಗೆ ಯಾವುದೇ ರಿಯಾಯತಿ ಇಲ್ಲದೆ ಶಿಕ್ಷೆ ವಿಧಿಸಲಾಗುವುದು ಎಂದು ಜಾರ್ಜಿಯಾ ಮೆಲೋನಿ ಹೇಳಿದ್ದಾರೆ. ಈ ವಿವಾದಾತ್ಮಕ ವೆಬ್‌ಸೈಟ್ ಏಳು ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ.

35

ಈ ಫೋಟೋ ವೈರಲ್ ಬೆನ್ನಲ್ಲೇ ಬಳಕೆದಾರರು ನಮ್ಮ ಪ್ಲಾಟ್‌ಫಾರಂನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ವೆಬ್‌ಸೈಟ್ ನಿರ್ವಾಹಕರು ಸೈಟ್ ಅನ್ನು ಸ್ಥಗಿತಗೊಳಿಸಿದ್ದಾರೆ. ಅತ್ಯಂತ ಅಶ್ಲೀಲ ಮತ್ತು ಅವಹೇಳನಕಾರಿ ರೀತಿಯಲ್ಲಿ ಚಿತ್ರಗಳನ್ನು ಸೈಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಪ್ರಧಾನ ಮಂತ್ರಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಚಿತ್ರಗಳನ್ನು ಬಳಸಿಕೊಂಡು ನಕಲಿ ಅಶ್ಲೀಲ ಚಿತ್ರಗಳನ್ನು ರಚಿಸಲಾಗಿದೆ.

45

ಈಗಾಗಲೇ ಹಲವಾರು ಮಹಿಳೆಯರು ಸೈಟ್ ವಿರುದ್ಧ ದೂರು ನೀಡಿದ್ದಾರೆ. ಕಳೆದ ವಾರ, ಪ್ರಮುಖ ವ್ಯಕ್ತಿಗಳು ಇಂತಹ ನಕಲಿ ನ*ಗ್ನ ಚಿತ್ರಗಳು ದೇಶದಲ್ಲಿ ಹರಿದಾಡುತ್ತಿವೆ ಎಂದು ದೂರಿದ್ದರು. 2025 ರಲ್ಲೂ ಮಹಿಳೆಯರನ್ನು ಅವಮಾನಿಸಲು ಮತ್ತು ಅವರನ್ನು ಸಾರ್ವಜನಿಕವಾಗಿ ಅಪಹಾಸ್ಯ ಮಾಡಲು ಇಂತಹ ನಕಲಿ ಚಿತ್ರಗಳನ್ನು ಬಳಸಲಾಗುತ್ತಿದೆ ಎಂದು ಅವರು ವಿಷಾದಿಸಿದರು.

55

2005 ರಲ್ಲಿ ಇಟಲಿಯಲ್ಲಿ ಈ ವಿವಾದಾತ್ಮಕ ಸೈಟ್ ಪ್ರಾರಂಭವಾಯಿತು. ಹಲವಾರು ಮಹಿಳೆಯರು ಈ ಹಿಂದೆಯೂ ಸೈಟ್ ವಿರುದ್ಧ ದನಿ ಎತ್ತಿದ್ದರು. ಪ್ರಧಾನಿ ಸೇರಿದಂತೆ ಹಲವಾರು ಮಹಿಳೆಯರ ನಕಲಿ ಚಿತ್ರಗಳನ್ನು ಸೈಟ್‌ನ 'ವಿಐಪಿ' ವಿಭಾಗದಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಮಿಲನ್ ವಿಶ್ವವಿದ್ಯಾನಿಲಯವು 2019 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ದೇಶದಲ್ಲಿ ಶೇಕಡಾ 20 ರಷ್ಟು ಮಹಿಳೆಯರು ಇಂತಹ ದೌರ್ಜನ್ಯಕ್ಕೆ ಒಳಗಾಗಿದ್ದಾರೆ.

Read more Photos on
click me!

Recommended Stories