2 ದೇಶಗಳಲ್ಲಿ ಮತ್ತೆ ಕೋವಿಡ್‌ ಸೋಂಕು ಹೆಚ್ಚಳ; ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ

Published : May 17, 2025, 08:05 AM IST

Covid Cases: ಮತ್ತೆ ಎರಡು ದೇಶಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಮತ್ತು ನೀರಿನಲ್ಲಿ ವೈರಾಣು ಪತ್ತೆಯಾಗುವುದು ಮತ್ತೆ ಕೊರೋನಾ ಸ್ಫೋಟದ ಭೀತಿ ಹುಟ್ಟಿಸಿದೆ.

PREV
15
2 ದೇಶಗಳಲ್ಲಿ ಮತ್ತೆ ಕೋವಿಡ್‌ ಸೋಂಕು ಹೆಚ್ಚಳ; ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ

3 ವರ್ಷಗಳಿಗೂ ಅಧಿಕ ಕಾಲ ವಿಶ್ವವನ್ನು ಕಾಡಿ ತೆರೆಮರೆಗೆ ಸರಿದಿದ್ದ ಕೊರೋನಾ ಮತ್ತೆ ಸದ್ದು ಮಾಡತೊಡಗಿದೆ. ಇದೀಗ ಮತ್ತೆ ಎರಡು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಕಂಡು ಬಂದಿವೆ. (ಸಾಂದರ್ಭಿಕ ಚಿತ್ರ)

25

ಸಿಂಗಾಪುರದಲ್ಲಿ ಮೇ 3ಕ್ಕೆ ಅಂತ್ಯವಾದ ವಾರದಲ್ಲಿ 14200 ಕೋವಿಡ್‌ ಪ್ರಕರಣ ದಾಖಲಾಗಿದೆ. ಇದು ಹಿಂದಿನ ವಾರಕ್ಕೆ ಹೋಲಿಸಿದರೆ ಶೇ.28ರಷ್ಟು ಹೆಚ್ಚಾಗಿದೆ. ಕಳೆದ ವಾರ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣದಲ್ಲೂ ಶೇ.30ರಷ್ಟು ಏರಿಕೆ ಕಂಡುಬಂದಿದೆ.  (ಸಾಂದರ್ಭಿಕ ಚಿತ್ರ)

35

ಜನರಲ್ಲಿ ಕೋವಿಡ್‌ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗಿರಬಹುದು. ಆದರೆ ಪ್ರಸಕ್ತ ಕಾಣಿಸಿಕೊಂಡಿರುವ ಕೋವಿಡ್‌ ತಳಿ ಹೆಚ್ಚು ಪ್ರಸರಣಕಾರಿ ಎಂಬುದಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ. (ಸಾಂದರ್ಭಿಕ ಚಿತ್ರ)

45

ಇನ್ನೊಂದೆಡೆ ಹಾಂಕಾಂಗ್‌ನಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಈ ವರ್ಷದ ಗರಿಷ್ಠಕ್ಕೆ ತಲುಪಿದೆ. ಅಂತೆಯೇ, ಸಾವಿನ ಪ್ರಕರಣಗಳೂ ಹೆಚ್ಚಾಗುತ್ತಿವೆ. ನೀರಿನಲ್ಲಿ ಕಂಡುಬರುತ್ತಿರುವ ವೈರಾಣು, ಹೆಚ್ಚುತ್ತಿರುವ ಕೋವಿಡ್‌ ಪರೀಕ್ಷೆ ಮತ್ತು ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಿಂದ ಮತ್ತೆ ಕೊರೋನಾ ಸ್ಫೋಟವಾಗುವ ಭಯ ಉದ್ಭವವಾಗಿದೆ. (ಸಾಂದರ್ಭಿಕ ಚಿತ್ರ)

55

ಕೊರೋನಾ ಮೊದಲ ಬಾರಿ 2019ರ ನವೆಂಬರ್‌ನಲ್ಲಿ ಪತ್ತೆಯಾಗಿದ್ದು, 704,753,890 ಜನರಲ್ಲಿ ಕಾಣಿಸಿಕೊಂಡಿತ್ತು. 7,010,681 ಮಂದಿ ವಿಶ್ವಾದ್ಯಂತ ಬಲಿಯಾಗಿದ್ದರು. ಕೋವಿಡ್ ಸೋಂಕು ಪಸರಿಸುವಿಕೆಯನ್ನು ನಿಯಂತ್ರಿಸಲು 'ಲಾಕ್‌ಡೌನ್' ಎಂಬ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲಾಗಿತ್ತು. (ಸಾಂದರ್ಭಿಕ ಚಿತ್ರ)

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories