ವೈಟ್ ಹೌಸ್ ಬಳಿ 2000 ಖಾಲಿ ಕುರ್ಚಿ, ಕೊರೋನಾಗೆ ಬಲಿಯಾದವರಿಗೆ ಹೀಗೊಂದು ಶ್ರದ್ಧಾಂಜಲಿ!

First Published Oct 5, 2020, 5:55 PM IST

ಇಡೀ ವಿಶ್ವವೇ ಕೊರೋನಾ ಸಂಕಟದಿಂದ ನಲುಗುತ್ತಿದೆ. ಈವರೆಗೂ ಹತ್ತು ಲಕ್ಷಕ್ಕೂ ಅಧಿಕ ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನು ಕೇವಲ ಅಮೆರಿಕದಲ್ಲೇ 2.14 ಲಕ್ಷ ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಅಮೆರಿಕದಲ್ಲಿ ಕೊರೋನಾಗೆ ಬಲಿಯಾದವರಿಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಇಲ್ಲಿನ ಶ್ವೇತ ಭವನದ ಬಳಿ 20 ಸಾವಿರ ಖಾಲಿ ಕುರ್ಚಿಗಳನ್ನಿಟ್ಟು ಶ್ರದ್ಧಾಂಜಲಿ ಅರ್ಪಿಸಲಾಗಿದೆ.
 

ಕೊರೋನಾಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಅರ್ಪಿಸಲು ವೈಟ್ ಹೌಸ್ ಎದುರು 20 ಸಾವಿರ ಖಾಲಿ ಕುರ್ಚಿಗಳನ್ನಿಡಲಾಯ್ತು.
undefined
ಈ ಕಾರ್ಯಕ್ರಮ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲೇನಿಯಾಗೆ ಕೊರೋನಾ ಸೋಂಕು ತಗುಲುವುದಕ್ಕೂ ಮೊದಲೇ ನಿಗಧಿಯಾಗಿತ್ತು.
undefined
ಅಮೆರಿಕದಲ್ಲಿ ಈವರೆಗೂ ಒಟ್ಟು 2.14ಲಕ್ಷ ಮಂದಿ ಕೊರೋನಾಗೆ ಮೃತಪಟ್ಟಿದ್ದಾರೆ.
undefined
ವಿಶ್ವಾದ್ಯಂತ ಕೊರೋನಾಗೆ ಅತಿ ಹೆಚ್ಚು ಸಾವನ್ನಪ್ಪಿರುವವರ ಪಟ್ಟಿಯಲ್ಲಿ ಅಮೆರಿಕ ಎಲ್ಲರಿಗಿಂತ ಮುಂಚೂಣಿಯಲ್ಲಿದೆ.
undefined
ವೈಟ್ ಹೌಸ್ ಬಳಿ ಹೀಗೆ ಕುರ್ಚಿಗಳನ್ನಿಟ್ಟು ಶ್ರದ್ಧಾಂಜಲಿ ಅರ್ಪಿಸಲಾಯ್ತು.
undefined
ಅಮೆರಿಕದಲ್ಲಿ ಈವರೆಗೂ 76 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲಿದೆ. ಎರಡನೇ ಸ್ಥಾನದಲ್ಲಿ ಭಾರತವಿದೆ. ಇಲ್ಲಿ ಈವರೆಗೆ ಒಟ್ಟು 66 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲಿದೆ.
undefined
ಇನ್ನು ವಿಶ್ವಾದ್ಯಂತ ಈವರೆಗೂ ಒಟ್ಟು 3.54 ಕೋಟಿ ಕೊರೋನಾ ಪ್ರಕರಣಗಳು ದಾಖಲಾಗಿವೆ. 10.42 ಲಕ್ಷ ಮಂದಿ ಮೃತಪಟ್ಟಿದ್ದಾರೆ.
undefined
ಅಮೆರಿಕ ಹಾಗೂ ಭಾರತ ಹೊರತುಪಡಿಸಿ ಬ್ರೆಜಿಲ್, ರಷ್ಯಾ, ಕೊಲಂಬಿಯಾ ಹಾಗೂ ಪೆರುಅತಿ ಹೆಚ್ಚು ಸೋಂಕಿತರಿರುವ ದೇಶಗಳಾಗಿವೆ.
undefined
click me!