ಕೊರೋನಾ ಟೆಸ್ಟ್ ನೆಪದಲ್ಲಿ 3 ಹೆಣ್ಮಕ್ಕಳ ಪ್ರಜ್ಞೆ ತಪ್ಪಿಸಿ ಯೋನಿಚ್ಛೇದನ ನಡೆಸಿದ ಅಪ್ಪ!
First Published | Jun 7, 2020, 10:58 AM ISTನೀವು ಗಾಢ ನಿದ್ದೆಯಲ್ಲಿದ್ದಾಗ, ನಿಮ್ಮ ದೇಹದ ಒಂದು ಭಾಗವನ್ನು ಕತ್ತರಿಸುವ ಬಗ್ಗೆ ನೀವೆಂದಾದರೂ ಊಹಿಸಿದ್ದೀರಾ? ಒಂದು ವೇಳೆ ಹೀಗಾದರೂ, ಅನುಭವ ಹೇಗಿರಬಹುದು? ನೋವಿನಲ್ಲಿ ಚೀರಾಡಿ, ನರಳಾಡಬಹುದು. ಸದ್ಯ ಮೂವರು ಹೆಣ್ಮಕ್ಕಳಿಗೂ ಹೀಗೇ ಆಗಿದೆ. ಇಲ್ಲಿ ಆ ಮಕ್ಕಳ ತಂದೆಯೇ ಅವರಿಗೆ ದ್ರೋಹವೆಸಗಿದ್ದಾರೆ. ಕೊರೋನಾ ಲಸಿಕೆ ನೀಡುವ ನೆಪದಲ್ಲಿ ಮೂವರು ಹೆಣ್ಮಕ್ಕಳ ಯೋನಿಚ್ಛೇದನ ನಡೆಸಿದ್ದಾರೆ. ಮಕ್ಕಳಿಗೆ ಪ್ರಜ್ಞೆ ತಪ್ಪಿಸಿದ ಅಪ್ಪ, ಕ್ರೂರತೆಯ ಗಡಿ ದಾಟಿ ಮಕ್ಕಳ ಗುಪ್ತಾಂಗವನ್ನು ಬ್ಲೇಡ್ ಮೂಲಕ ಕತ್ತರಿಸಿದ್ದಾರೆ. ಇನ್ನು ಈ ಘಟನೆ ಮಿಶ್ರ್(ಈಜಿಪ್ಟ್)ನಲ್ಲಿ ನಡೆದಿದ್ದು, ಇಲ್ಲಿ ಇಂತಹ ಕ್ರೂರ ಕೃತ್ಯಗಳ ಮೇಲೆ ಸಂಪೂರ್ಣ ಬ್ಯಾನ್ ಇದೆ ಎಂಬುವುದು ಉಲ್ಲೇಖನೀಯ. ಹೀಗಿದ್ದರೂ ತಂದೆ ವೈದ್ಯರ ಸಹಾಯದಿಂದ ಕಾನೂನು ಉಲ್ಲಂಘಿಸಿ ಇಂತಹ ಹೇಯ ಕೃತ್ಯವೆಸಗಿದ್ದಾರೆ.