ಕಾರುಗಳ ಯುಗಕ್ಕೂ ಮುಂಚೆ ಹವಾಮಾನ ಬದಲಾವಣೆ ಆರಂಭ!
ಮಾನವನಿಂದ ತಾಪಮಾನ ಏರಿಕೆಯ ಆರಂಭಿಕ ಸಂಕೇತಗಳನ್ನು ಗುರುತಿಸಲು, ಸಂಶೋಧಕರು ಐತಿಹಾಸಿಕ ತಾಪಮಾನ ದಾಖಲೆಗಳು, ಹವಾಮಾನ ಮಾದರಿಗಳು ಮತ್ತು ವಾಯುಮಂಡಲದ ಎರಡನೇ ಪದರದ ಅಧ್ಯಯನವನ್ನು ಆಧಾರವನ್ನಾಗಿ ಮಾಡಿಕೊಂಡಿದ್ದಾರೆ. ಹಳೆಯ ದಾಖಲೆಗಳ ಜೊತೆಗೆ, ಆಧುನಿಕ ಹವಾಮಾನ ಮಾದರಿಗಳು ಹಾಗೂ ಪ್ರಬಲ ಕಂಪ್ಯೂಟರ್ ಅನಾಲಿಸಿಸ್‌ಗಳನ್ನು ಬಳಸಿದ್ದಾರೆ. ಅವರ ಅಂಕಿಅಂಶಗಳ ಪ್ರಕಾರ, 1885ರ ವೇಳೆಗೆ ಹಸಿರುಮನೆ ಅನಿಲಗಳು (Greenhouse gases) ವಾತಾವರಣದ ಮೇಲ್ಭಾಗವನ್ನು ತಂಪು ಮಾಡುತ್ತಿರುವುಗಳು ಕಂಡುಬಂದಿದೆ – ಇದು ಜಾಗತಿಕ ತಾಪಮಾನ ಹೆಚ್ಚಳದ ಪ್ರಾರಂಭದ ಪ್ರಮುಖ ಸೂಚಕ.