South Korea Plane Crash: 2024 ರ ಡಿಸೆಂಬರ್‌ನಲ್ಲಿ 181 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನಗೊಂಡು 179 ಜನರು ಸಾವನ್ನಪ್ಪಿದ ದುರಂತದಲ್ಲಿ ಇಬ್ಬರು ಪವಾಡಸದೃಶವಾಗಿ ಬದುಕುಳಿದರು.
ಕಳೆದ ವರ್ಷ 2024 ಡಿಸೆಂಬರ್‌ನಲ್ಲಿ ದಕ್ಷಿಣ ಕೊರಿಯಾದಲ್ಲಿ ಪ್ರಯಾಣಿಕರ ವಿಮಾನವೊಂದು ಲ್ಯಾಂಡಿಂಗ್ ವೇಳೆ ಪತನಗೊಂಡಿತ್ತು. ಸಿಬ್ಬಂದಿಯೂ ಸೇರಿದಂತೆ ಈ ವಿಮಾನದಲ್ಲಿದ್ದ 181 ಜನರ ಪೈಕಿ 179 ಮಂದಿ ಪ್ರಾಣ ಕಳೆದುಕೊಂಡಿದ್ದರು. ಪವಾಡದಂತೆ ಇಬ್ಬರು ಬದುಕಿದ್ದರು.
25
Jeju Airways ಪ್ರಯಾಣಿಕರ ವಿಮಾನ ಡಿಸೆಂಬರ್ 29ರ ಬೆಳಗ್ಗೆ ದಕ್ಷಿಣ ಕೊರಿಯಾದ ಮುವಾನ್ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿತ್ತು. ವಿಮಾನ ರನ್‌ವೇಯಿಂದ ಸ್ಕಿಡ್ ಆಗಿ ಮುಂದಿನ ಗೋಡೆಗೆ ಡಿಕ್ಕಿ ಹೊಡೆದು ಸ್ಪೋಟವಾಗಿತ್ತು. ಲ್ಯಾಂಡಿಂಗ್ ವೇಳೆ ಯಾವುದಾದರೂ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿತ್ತು.
35
ವಿಮಾನ ಪತನವಾಗುತ್ತಿದ್ದಂತೆ ಸ್ಥಳದಲ್ಲಿದ್ದ ಎಮೆರ್ಜೆನ್ಸಿ ಸಿಬ್ಬಂದಿಯಿಂದಲೇ ಇಬ್ಬರ ಜೀವ ಉಳಿದಿದೆ ಎಂದು ವರದಿಯಾಗಿದೆ. ಇದರಲ್ಲಿ ಒಬ್ಬರು ಸಿಬ್ಬಂದಿ, ಮತ್ತೊಬ್ಬರು ಪ್ರಯಾಣಿಕರು ಎಂದು ವರದಿಯಾಗಿತ್ತು.
ಒಂದು ವಿಮಾನ ಗೋಡೆಗೆ ಡಿಕ್ಕಿಯಾದ ನಂತರ ಬೆಂಕಿ ಕಾಣಿಸಿಕೊಳ್ಳದಿದ್ದರೆ, ಹಿಂಬಾಗಿಲಿನಿಂದ ಪ್ರಯಾಣಿಕರನ್ನು ರಕ್ಷಣೆ ಮಾಡಬಹುದಿತ್ತು. ಆದರೆ ಬೆಂಕಿಯ ತೀವ್ರತೆ ಅಧಿಕವಾಗಿತ್ತು ಎಂದು ಸ್ಥಳೀಯರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ಹೇಳಿದ್ದರು.
55
Jeju Airways ಪ್ರಯಾಣಿಕರಲ್ಲಿ ಕ್ಷಮೆ ಕೇಳಿದ ಕಿಮ್ ಇ-ಬೇಜ್, 179 ಜನರ ಸಾವಿಗೆ ಸಂತಾಪ ಸೂಚಿಸಿದ್ದರು. ಈ ದುರಂತಕ್ಕೆ ಕಾರಣ ಏನೇ ಇರಲಿ. ಕಂಪನಿಯ ಸಿಇಒ ಆಗಿ ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ತಲೆ ಬಾಗಿಸಿದ್ದರು.