ಇಸ್ರೇಲ್-ಇರಾನ್ ಸಂಘರ್ಷ ಮೊದಲ ಬಾರಿ ಚೀನಾ ಅಧ್ಯಕ್ಷನ ಶಾಂತಿಯ ಕರೆ, ಕಾರಣ ಇಷ್ಟೇ!

Published : Jun 17, 2025, 08:09 PM IST

ಇಸ್ರೇಲ್ ಮತ್ತು ಇರಾನ್ ನಡುವಿನ ಹೆಚ್ಚುತ್ತಿರುವ ಸಂಘರ್ಷದ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ. ಶಾಂತಿ ಮತ್ತು ಸ್ಥಿರತೆ ಕಾಪಾಡುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದಾರೆ. ಮಿಲಿಟರಿ ದಾಳಿ ಪರಿಹಾರವಲ್ಲ ಎಂದು ಅವರು ಹೇಳಿದ್ದಾರೆ.

PREV
15

ಇಸ್ರೇಲ್ ಮತ್ತು ಇರಾನ್ (Israel Iran conflict) ನಡುವಿನ ಹೆಚ್ಚುತ್ತಿರುವ ಸಂಘರ್ಷದ ಕುರಿತು ಚೀನಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದು, ಈ ಬೆಳವಣಿಗೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Chinese President Xi Jinping) ಅವರು, ಈ ವಿಷಯದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವುದು ಅತ್ಯವಶ್ಯಕವೆಂದು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ದೇಶದ ಭದ್ರತೆ ಹಾಗೂ ಸಾರ್ವಭೌಮತೆಯನ್ನು ಹಾನಿಗೊಳಿಸುವ ಕ್ರಮಗಳನ್ನು ಚೀನಾ ಖಂಡಿಸುತ್ತದೆ. ದೇಶಗಳ ನಡುವಿನ ಸಮಸ್ಯೆಗಳಿಗೆ ಮಿಲಿಟರಿ ದಾಳಿ ಪರಿಹಾರವಲ್ಲ. ಈ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಹಿತಾಸಕ್ತಿಗಳಿಗೆ ಅಡ್ಡಿಯಾಗುತ್ತಿದ್ದು, ಶಾಂತಿಯ ಮಾರ್ಗವನ್ನು ಅಳವಡಿಸಿಕೊಳ್ಳಬೇಕೆಂದು ಕ್ಸಿ ಜಿನ್‌ಪಿಂಗ್ ಅವರು ಒತ್ತಾಯಿಸಿದರು.

25

ಚೀನಾ ಶಾಂತಿ ಭಯಸುತ್ತದೆ ಎಂದು ಒತ್ತಿ ಹೇಳಿದ ಅಧ್ಯಕ್ಷ

ಕಝಾಕಿಸ್ತಾನದ ಅಸ್ತಾನಾ ನಗರದಲ್ಲಿ ನಡೆಯುತ್ತಿರುವ ಎರಡನೇ ದಿನದ ಚೀನಾ–ಮಧ್ಯ ಏಷ್ಯಾ ಶೃಂಗಸಭೆಯ (china central asia summit 2025) ಸಂದರ್ಭದಲ್ಲಿ ಉಜ್ಬೆಕಿಸ್ತಾನದ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರೊಂದಿಗೆ ನಡೆದ ಸಭೆಯಲ್ಲಿ ಇತರ ರಾಷ್ಟ್ರಗಳ ಸಾರ್ವಭೌಮತ್ವ, ಭದ್ರತೆ ಮತ್ತು ಪ್ರಾದೇಶಿಕ ಅಖಂಡತೆಗೆ ಧಕ್ಕೆಯಾಗುವ ಯಾವುದೇ ಕ್ರಮಗಳನ್ನು ಚೀನಾ ವಿರೋಧಿಸುತ್ತದೆ. ಸೈನಿಕ ಸಂಘರ್ಷ ಎಂದಿಗೂ ಪರ್ಯಾಯವಲ್ಲ ಮಾರ್ಗವಲ್ಲ ಎಂದರು.

ಶಾಂತಿಯನ್ನು ಮರು ಸ್ಥಾಪಿಸಲು ಚೀನಾ ರಚನಾತ್ಮಕ ಪಾತ್ರವನ್ನು ವಹಿಸಲು ಸಿದ್ಧವಾಗಿದೆ ಎಂದ ಚೀನಾ ಅಧ್ಯಕ್ಷ, ಇರಾನ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಗಳು ಹಠಾತ್ ಉಲ್ಬಣಕ್ಕೆ ಕಾರಣವಾಗಿದೆ. ಈಗ ನಡೆಯುತ್ತಿರುವ ಸಂಘರ್ಷ ತಕ್ಷಣವೇ ತಣಿಯಬೇಕು. ಇದಕ್ಕೆ ಸಂಬಂಧಿಸಿದ ಎಲ್ಲರೂ ಶಾಂತಿಯತ್ತ ಹೆಜ್ಜೆ ಇಡಬೇಕು ಎಂದು ಒತ್ತಾಯಿಸಿದರು.

35

ಚೀನಾದ ನಿಲುವೇನು?

ಈ ಹೇಳಿಕೆಗಳು, ಚೀನಾದ ವಿದೇಶಾಂಗ ಸಚಿವಾಲಯ ಇಸ್ರೇಲ್ ವಿರುದ್ಧ ತನ್ನ ಪ್ರಭಾವವನ್ನು ಬಳಸಬೇಕೆಂದು ಇತ್ತೀಚೆಗಷ್ಟೇ ಸೂಚಿಸಿದ ನಂತರ ಬಂದಿದ್ದು, ಬೀಚಿಂಗ್ ಇಂಧನ ಪೂರೈಕೆಗೆ ಅತ್ಯಂತ ಮುಖ್ಯವಾಗಿರುವ ಈ ಪ್ರದೇಶದಲ್ಲಿ ಸ್ಥಿರತೆಯ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್, "ಇಸ್ರೇಲ್ ಮೇಲೆ ಪ್ರಭಾವವಿರುವ ಎಲ್ಲ ರಾಷ್ಟ್ರಗಳು ತಮ್ಮ ಜವಾಬ್ದಾರಿಯನ್ನು ಪೂರೈಸಬೇಕು. ಉದ್ವಿಗ್ನತೆ ತಣಿಯಲು ಮತ್ತು ಸಂಘರ್ಷ ಹೆಚ್ಚದಂತೆ ತಡೆಯಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

45

ಇದಕ್ಕೂ ಮೊದಲು, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರೊಂದಿಗೆ ಮಾತನಾಡಿ, ರಾಜತಾಂತ್ರಿಕ ಪರಿಹಾರಗಳ ಮಹತ್ವವನ್ನು ಉಲ್ಲೇಖಿಸಿ, ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯೋನ್ ಸಾರ್ ಅವರಿಗೂ ಇಂಥದ್ದೇ ಸಂದೇಶ ನೀಡಿದ್ದರು. ಇಸ್ರೇಲ್ ಮತ್ತು ಇರಾನ್ ಎರಡಕ್ಕೂ ಈ ಉದ್ವಿಗ್ನತೆಯನ್ನು ಶಮನಗೊಳಿಸಲು ಸಹಾಯ ಮಾಡಲು ಸಿದ್ಧವಿದೆ ಎಂದು ಚೀನಾ ಸ್ಪಷ್ಟಪಡಿಸಿತು.

55

ಚೀನಾದ ಆತಂಕಕ್ಕೆ ಕಾರಣವೇನು?

ಚೀನಾದ ಈ ಆತಂಕಕ್ಕೆ ಪ್ರಮುಖ ಕಾರಣವೆಂದರೆ ಮಧ್ಯಪ್ರಾಚ್ಯದಿಂದ ಈ ದೇಶ ತನ್ನ ಶೇಕಡಾ 70ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇರಾನ್ ಹಾಗೂ ಇಸ್ರೇಲ್ ನಡುವಿನ ಈ ಸಂಘರ್ಷ ಮತ್ತಷ್ಟು ವಿಸ್ತಾರವಾಗಿ ಇತರ ರಾಷ್ಟ್ರಗಳಿಗೂ ಹರಡಬಹುದು ಎಂಬ ಆತಂಕ ಗಂಭೀರವಾಗಿದೆ. ಇನ್ನೊಂದೆಡೆ, ಈ ವಿಷಯವನ್ನು ಚರ್ಚಿಸಲು ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯದಿಂದ ಹೊರ ನಡೆದರು. ಯುದ್ಧ ವಿರಾಮದ ಸಾಧ್ಯತೆಗಳ ಬಗ್ಗೆ ಸ್ಪಷ್ಟ ನಿಲುವು ನೀಡದೆ, ಪರೋಕ್ಷವಾಗಿ ಆಕ್ರಮಣ ಸಾಧ್ಯತೆಯ ಬಗ್ಗೆ ಸುಳಿವು ನೀಡಿದಂತಿದೆ. ಈ ನಡುವೆ, ಇರಾನ್‌ನ ಕ್ಷಿಪಣಿಗಳಿಂದ ಮತ್ತು ಡ್ರೋನ್ ದಾಳಿಯಿಂದ ರಕ್ಷಿಸಿಕೊಳ್ಳಲು ಇಸ್ರೇಲ್‌ಗೆ ನಾವು ತಂತ್ರಜ್ಞಾನ ಮತ್ತು ರಕ್ಷಣಾ ನೆರವು ನೀಡುತ್ತಿದ್ದೇವೆ ಎಂದು ಅಮೆರಿಕ ಘೋಷಿಸಿದೆ.

Read more Photos on
click me!

Recommended Stories