ಕೊರೋನಾ ಸಮರದಲ್ಲಿ ಭಾರತಕ್ಕೆ ಸೆಲ್ಯೂಟ್: ಸ್ವಿಡ್ಜರ್ಲೆಂಡ್‌ ಪರ್ವತದಲ್ಲಿ ಬೆಳಗಿದ ತ್ರಿವರ್ಣ ಧ್ವಜ!

First Published Apr 18, 2020, 5:45 PM IST

ವಿಶ್ವದಾದ್ಯಂತ ಕೊರೋನಾ ಸಮರ ಮುಂದುವರೆದಿದೆ. ಭಾರತ ಕೂಡಾ ಕೊರೋನಾ ಮಣಿಸಲು ಒಂದಾದ ಬಳಿಕ ಮತ್ತೊಂದರಂತೆ ಮತ್ವದ ಕ್ರಮ ಕೈಗೊಳ್ಳುತ್ತಿದೆ. ಖುದ್ದು ವಿಶ್ವಸಂಸ್ಥೆ ಕೂಡಾ ಭಾರತ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಹಾಡಿ ಹೊಗಳಿದೆ. ಇವೆಲ್ಲದರ ನಡುವೆ ಸ್ವಿಡ್ಜರ್ಲೆಂಡ್ ವಿಭಿನ್ನವಾಗಿ ಭಾರತವನ್ನು ಶ್ಲಾಘಿಸಿದೆ.. ಇಲ್ಲಿನ ಸ್ವಿಸ್ ಆಲಾಪ್ಸ್‌ನ ಮೆಟರ್‌ಹಾರ್ನ್ ಪರ್ವತದಲ್ಲಿ ತ್ರಿವರ್ಣ ಧ್ವಜ ಬೆಳಗಿಸುವ ಮೂಲಕ ವಿಭಿನ್ನವಾಗಿ ಸೆಲ್ಯೂಟ್ ಮಾಡಿದೆ.

ವಿಶ್ವದ ಅನೇಕ ರಾಷ್ಟ್ರಗಳ ಸಹಾಯಕ್ಕೆ ಮುಂದಾದ ಭಾರತ: ಸಂಕಟದ ಸಮಯದಲ್ಲಿ ಭಾರತ ಏಷ್ಯಾವಾಗಲಿ ಅಥವಾ ಆಫ್ರಿಕಾ, ಯೂರೋಪ್, ಹಾಗೂ ಅಮೆರಿಇಕಾ ಹೀಗೆ ಯಾವುದೇ ಬೇದ ಭಾವ ಮಾಡದೆ ಎಲ್ಲಾ ದೇಶಗಳ ಸಹಾಯಕ್ಕೆ ಧಾವಿಸಿದೆ. ಹೀಗಿರುವಾಗ ತ್ರಿವರ್ಣ ಧ್ವಜದಿಂದ ಸುತ್ತುವರೆದ ಪರ್ವತದ ಫೋಟೋವನ್ನು ಖುದ್ದು ಪಿಎಂ ಮೋದಿ ರೀಟ್ವೀಟ್ ಮಾಡಿದ್ದಾರೆ ಹಾಗೂ ವಿಶ್ವ ಕೊರೋನಾ ವಿರುದ್ಧ ಒಂದಾಗಿ ಸಮರ ಸಾರಿದದೆ. ಈ ಮಹಾಮಾರಿ ವಿರುದ್ಧ ಮಾನವೀಯತೆ ಗೆಲುವು ಸಾಧಿಸುತ್ತದೆ ಎಂಬುವುದು ನಿಶ್ಚಿತ ಎಂದಿದ್ದಾರೆ.
undefined
14,690 ಅಡಿ ಎತ್ತರದ ಪರ್ವತವನ್ನು ತ್ರಿವರ್ಣ ಧ್ವಜದ ಬಣ್ಣಗಳಿಂದ ಬೆಳಗಿಸಿದರು. ಸ್ವಿಡ್ಜರ್ಲೆಂಡ್‌ನ ಲೈಟ್ ಆರ್ಟಿಸ್ಟ್ ಗ್ಯಾರಿ ಹಾಪ್‌ಸ್ಟೇಟರ್ ಇದನ್ನು ಬೆಳಗಿಸುವ ಕೆಲಸ ಮಾಡಿದ್ದಾರೆ. ಭಾರತೀಯ ವಿದೇಶ ಸೇವೆಯ ಅಧಿಕಾರಿ ಹಾಗೂ ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಭಾರತದ ದ್ವಿತೀಯ ಕಾರ್ಯದರ್ಶಿ ಗುರ್ಲೀನ್ ಈ ಸಂಬಂಧ ಟ್ವೀಟ್ ಮಾಡುತ್ತಾ ಕೋರೋನಾ ವಿರುದ್ಧ ಸಮರದಲ್ಲಿ ತಾನು ಭಾರತದೊಂದಿಗೆ ಇದ್ದೇನೆ ಎಂಬುವುದನ್ನು ಸ್ವಿಡ್ಜರ್ಲೆಂಡ್‌ ತೋರಿಸಿದೆ ಎಂದಿದ್ದಾರೆ.
undefined
ಇಟಲಿ ಹಾಗೂ ಸ್ವಿಡ್ಜರ್‌ಲೆಂಡ್‌ ಗಡಿ ಭಾಗದಲ್ಲಿರುವ 4478 ಮೀಟರ್ ಎತ್ತರದಲ್ಲಿರುವ ಈ ಪರ್ವತದ ಮೂಲಕ ಗ್ಯಾರಿ ಈ ಮೊದಲು ಕೂಡಾ ಸ್ಟೇ ಹೋಂ ಎಂಬ ಸಂದೇಶ ನೀಡಿದ್ದಾರೆ. ಇನ್ನು ಇಲ್ಲಿ ನಾಳೆ, ಏಪ್ರಿಲ್ ಹತ್ತೊಂಭತ್ತರಂದು ಲಾಕ್‌ಡೌನ್ ಮುಕ್ತಾಯವಾಗಲಿದೆ. ಹೀಗಿರುವಾಗ ದೇಶದ ಐತಿಹಾಸಿಕ ಕಟ್ಟಡ, ಸ್ಮಾರಕ ಹಾಗೂ ಪರ್ವತಗಳ ಮೂಲಕ ಜನರಿಗೆ ಕೊರೋನಾ ವಿರುದ್ಧ ಹೋರಾಡುವ ಸಂದೇಶ ನೀಡುವ ಗುರಿ ಗ್ಯಾರಿಯದ್ದಾಗಿದೆ. ಹೀಗಾಗೇ ಅವರು ಭಾರತದ ತ್ರಿವರ್ಣ ಧ್ವಜವನ್ನು ಪರ್ವತದಲ್ಲಿ ಬೆಳಗಿಸಿದ್ದಾರೆ.
undefined
ಸಂಯುಕ್ತ ರಾಷ್ಟ್ರಗಳ ಮುಖ್ಯಸ್ಥ ಆಂಟೋನಿಯೋ ಗುಟೇರಸ್ ಕೊರೋನಾ ವಿರುದ್ಧದ ಸಮರದಲ್ಲಿ ಸಹಾಯ ಮಾಡಲು ಭಾರತಕ್ಕೆ ಮನವಿ ಮಾಡಿದೆ. ಭಾರತವು, ಅಮೆರಿಕಾ, ಬ್ರೆಜಿಲ್, ಇಸ್ರೇಲ್‌ನಂತಹ ಅನೇಕ ರಾಷ್ಟ್ರಗಳಿಗೆ ಮಲೇರಿಯಾ ನಿಯಂತ್ರಿಸಲು ನೀಡಲಾಗುವ ಔಷಧಿಯನ್ನು ಕಳುಹಿಸಿಕೊಟ್ಟಿದೆ. ಅಮೆರಿಕಾ ಫುಡ್ ಆಂಡ್ ಡ್ರಗ್ ಇಲಾಖೆ ಮೂಲಕ ಇದನ್ನು ಕೊರೋನಾ ತಡೆಗಟ್ಟುವ ಲಸಿಕೆಗೆ ಉಪಯೋಗಿಸಲಾಗುತ್ತಿದೆ.
undefined
ಭಾರತದಲ್ಲಿ ಮೇ. 3ವರೆಗೆ ಲಾಕ್‌ಡೌನ್: ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಭಾರತದಲ್ಲಿ ಎರಡನೇ ಹಂತದ ಲಾಕ್‌ಡೌನ್ ಘೋಷಿಸಲಾಗಿದ್ದು, ಮೇ. 3ವರೆಗೆ ಲಾಕ್‌ಡೌನ್ ಇರಲಿದೆ. ಇನ್ನು ಏಪ್ರಿಲ್ 20ರ ಬಳಿಕ ಇದು ಕೊಂಚ ಸಡಿಲಗೊಳಿಸುವ ನಿರೀಕ್ಷೆ ಇದೆ.
undefined
click me!