ಎಂಟು ವರ್ಷದ ಸಂಬಂಧ ಕೊನೆಗೊಳಿಸಿದ ಒಂದು ಅಪಘಾತ: ಈ ಕತೆ ಆಸ್ಟ್ರೇಲಿಯಾ ನಿವಾಸಿ ಇಲಿಡಿ ವ್ಲಗ್ ಹಾಗೂ ಅವರ ಬಾಯ್‌ಫ್ರೆಂಡ್ ಅಲೆಕ್ಸ್ ಪುಲಿನ್‌ರದ್ದಾಗಿದೆ. ಇವರಿಬ್ಬರೂ ಎಂಟು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿದ್ದರು. ಆದರೆ ಹಲವಾರು ಬಾರಿ ಪ್ರಯತ್ನಿಸಿದರೂ ಇವರಿಗೆ ಮಕ್ಕಳಾಗಿರಲಿಲ್ಲ. ಆದರೆ 2020ರ ಜುಲೈನಲ್ಲಿ ನಡೆದ ದುರಂತವೊಂದು ಇಲಿಟಿಯ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದೆ. ಹೌದು ಕಳೆದ ವರ್ಷದ ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್‌ನಲ್ಲಿ ಮೀನು ಹಿಡಿಯುವ ಸಂದರ್ಭದಲ್ಲಿ ಅವರ ಬಾಯ್‌ಫ್ರೆಂಡ್ ಮೃತಪಟ್ಟಿದ್ದಾರೆ.
ಶವದಿಂದ ವೀರ್ಯ ಪಡೆದು ಗರ್ಭಿಣಿ: ಬಾಯ್‌ಫ್ರೆಂಡ್ ಸಾವಿನ ಬಳಿಕ ಇಲಿಟೀ ಸಂಪೂರ್ಣವಾಗಿ ಕುಸಿದಿದ್ದರು. ಆದರೆ ಅವರ ಒಂದು ನಿರ್ಧಾರದಿಂದ ಇಂದು ಅವರು ತಮ್ಮ ಬಾಯ್‌ಫ್ರೆಂಡ್ ಮಗುವಿನ ತಾಯಿಯಾಗುತ್ತಿದ್ದಾರೆ. ಹೌದು ಎಲೆಕ್ಸ್ ಸಾವಿನ ಬಳಿಕ ಅವರ ಗರ್ಲ್‌ಫ್ರೆಂಡ್ ಡಾಕ್ಟರ್ ಬಳಿ, ಆತನ ದೇಹದಿಂದ ಆರೋಗ್ಯಯುತ ವೀರ್ಯ ತೆಗೆಯಲು ಮನವಿ ಮಾಡಿಕೊಂಡಿದ್ದಾರೆ. ಹೀಗಿರುವಾಘ ವೈದ್ಯರೂ ವೀರ್ಯ ತೆಗೆದು ಇಲಿಟಿಯ ದೇಹಕ್ಕೆ ಹಾಕಿದ್ದಾರೆ. ಇದಾದ ಕೆಲ ದಿನಗಳಲ್ಲಿ ಇಲಿಟಿ ಗರ್ಭಿಣಿಯಾಗಿದ್ದಾರೆ. ಈಗ ತನ್ನ ಬಾಯ್‌ಫ್ರೆಂಡ್ ಸಾವನ್ನಪ್ಪಿದ್ದರೂ ಇಲಿಟಿ ಮಗುವಿನ ತಾಯಿಯಾಗಲಿದ್ದಾರೆ.
ಅಕ್ಟೋಬರ್‌ನಲ್ಲಿ ಮಗುವಿಗೆ ಜನ್ಮ ಕೊಡಲಿದ್ದಾರೆ: ಇಲಿಟಿ ಅಕ್ಟೋಬರ್‌ನಲ್ಲಿ ಮಗುವಿಗೆ ಜನ್ಮ ಕೊಡಲಿದ್ದಾರೆ. ಈ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲೂ ಮಾಹಿತಿ ನೀಡಿದ್ದಾರೆ. ಕಂದಾ ನಿನ್ನ ತಂದೆ, ತಾಯಿ ಹಲವಾರು ವರ್ಷದಿಂದ ನಿನ್ನ ಬಗ್ಗೆ ಕನಸು ಕಾಣುತ್ತಿದ್ದರು. ಆದರೆ ಈ ನಡುವೆ ಹೃದಯವಿದ್ರಾವಕ ಘಟನೆ ನಡೆದಿದೆ. ಆದರೆ ನಮ್ಮ ಒಂದು ಅಂಶ ಜಗತ್ತಿಗೆ ಬರುತ್ತದೆ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಅವರು ಬರೆದಿದ್ದಾರೆ.
ಅನೇಕ ವರ್ಷದಿಂದ ಮಗುವಿಗಾಗಿ ಪ್ರಯತ್ನ: ನನ್ನ ಬಾಯ್‌ಫ್ರೆಂಡ್ ಅಪಘಾತವಾದ ತಿಂಗಳಲ್ಲಿ ನಾನು ಗರ್ಭಿಣಿಯಾಘುತ್ತೇನೆಂಬ ವಿಶ್ವಾಸ ಇತ್ತು. ನಾವು ಮಗುವಿಗಾಘಿ ಪ್ರಯತ್ನ ಮಾಡುತ್ತಿದ್ದೆವು. ಐವಿಎಫ್ ಮಾಡಿಸಿಕೊಳ್ಳುವ ವಿಚಾರ ತಲೆಯಲ್ಲಿತ್ತಾದರೂ, ಈ ಎಲ್ಲಾ ಪ್ರಕ್ರಿಯೆ ನಾನು ಒಬ್ಬಳೇ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ಊಹಿಸಿರಲಿಲ್ಲ ಎಂದಿದ್ದಾರೆ.
ಯಾರು ಈ ಅಲೆಕ್ಸ್ ಪುಲಿನ್: ಅಲೆಕ್ಸ್ ಪುಲಿನ್ ಓರ್ವ ವಿಶ್ವ ಸ್ನೋಬೋರ್ಡ್ ಚಾಂಪಿಯನ್ ಆಗಿದ್ದರು. ಅವರು ಎರಡು ಬಾರಿ ವಿಂಟರ್ ಒಲಂಪಿಕ್ ಪ್ರಶಸ್ತಿ ಗೆದ್ದಿದ್ದರು. ಇಲಿಟಿ ಹಾಗೂ ಅಲೆಕ್ಸ್ ಪರಸ್ಪರ ಪ್ರೀತಿಸುತ್ತಿದ್ದು, ಎಂಟು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿದ್ದರು.
ಶವದಿಂದ ವೀರ್ಯ ತೆಗೆಯಲು ನಿಯಮ: ಆಸ್ಟ್ರೇಲಿಯಾದ ಕ್ವೀಸ್‌ಲೆಂಡ್‌ನಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ 36 ಗಂಟೆಯೊಳಗೆ ವೀರ್ಯ ತೆಗೆಯುವ ಕಾನೂನು ಇದೆ. ಹೀಗಾಗೇ ಇಲಿಟಿ ಇಂತಹುದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಅವರು ನ್ಯಾಯಾಲಯಕ್ಕೆ ದಾಖಲೆಯನ್ನೂ ನೀಡಿದ್ದಾರೆ.