ತಾಯಿಯ ಹತ್ಯೆಗೈದ 'ಸುಪುತ್ರ', ಅಪರಾಧ ಮುಚ್ಚಿಡಲು ಅಂಗಾಂಗ ತಿಂದ!

First Published Jun 16, 2021, 5:35 PM IST

ಸ್ಪೇನ್‌ನ ವೆಂಟಸ್‌ ನಿವಾಸಿ 28 ವರ್ಷದ ಅಲ್ಬರ್ಟೋ ಸಾಂಚೆಜ್ ಗೋಮೆಜ್ ತನ್ನ ತಾಯಿಯನ್ನು ಹತ್ಯೆಗೈದಿದ್ದಾನೆ. ಬಳಿಕ ತನ್ನ ಈ ಕುಕೃತ್ಯ ಮುಚ್ಚಿಡಲು ದೇಹವನ್ನು ಸಾವಿರ ತುಂಡುಗಳನ್ನಾಗಿ ಮಾಡಿದ್ದಾನೆ. ಇದಾದ ಬಳಿಕ ಈ ತುಂಡುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟು, ಸುಮಾರು ಒಂದು ವಾರ ತಿಂದಿದ್ದಾನೆ. ಪೊಲೀಸರಿಗೆ ಈ ವಿಚಾರ ತಿಳಿದು ಆತನನ್ನು ಬಂಧಿಸಿದಾಗ ತಾನೊಬ್ಬ ಮಾನಸಿಕ ಅಸಸ್ವಸ್ಥನಂತೆ ನಾಟಕ ಮಾಡಿದ್ದಾನೆ. ಆದರೀಗ ಆತನ ನಿಜ ರೂಪ ಕೋರ್ಟ್‌ನಲ್ಲಿ ಬಯಲಾಗಿದೆ.
 

2019ರ ಪ್ರಕರಣ: ಈ ಪ್ರಕರಣ ನಡೆದಿದ್ದು, 2019ರಲ್ಲಿ. ಆಗ ಅಲ್ಬರ್ಟೋ ತನ್ನ ತಾಯಿ ಜೊತೆ ವೆಂಟೆಸ್‌ನ ಮ್ಯಾಡ್ರಿಡ್‌ನಲ್ಲಿ ವಾಸಿಸುತ್ತಿದ್ದ. ಆದರೆ ಅದೊಂದು ರಾತ್ರಿ ಅಲ್ಬರ್ಟೋ ತನ್ನ 68 ವರ್ಷದ ತಾಯಿ ಜೊತೆ ಜಗಳವಾಡಿದ್ದಾನೆ. ಈ ವೇಳೆ ಕೋಪಗೊಂಡ ಅಲ್ಬರ್ಟೋ ತಾಯಿಯ ಕತ್ತು ಹಿಸುಕಿ ಸಾಯಿಸಿದ್ದಾನೆ.
undefined
ಶವವನ್ನು ತುಂಡರಿಸಿದ: ತಾಯಿಯನ್ನು ಸಾಯಿಸಿದ ಬಳಿಕ ಆತ ಶವವನ್ನು ಸಾವಿರಕ್ಕೂ ಅಧಿಕ ತುಂಡುಗಳಾಗಿಸಿದ್ದಾನೆ. ಇದಕ್ಕಾಗಿ ಆತ ಮರ ಕಡಿಯುವ ಗರಗಸ ಬಳಸಿದ್ದಾನೆ. ಬಳಿಕ ಈ ತುಂಡುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಫ್ರಿಡ್ಜ್‌ನಲ್ಲಿಟ್ಟಿದ್ದಾನೆ. ಇನ್ನು ಈ ಆರೋಪಿ ತಾಯಿಯ ದೇಹದ ಭಾಗಗಳನ್ನು ಒಂದು ವಾರ ಬೇಯಿಸಿ ಹಾಗೂ ಹಸಿಯಾಗೇ ತಿಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇವುಗಳಲ್ಲಿ ಕೆಲ ತುಂಡುಗಳನ್ನು ನಾಯಿಗೂ ತಿನ್ನಿಸಿದ್ದಾನೆ.
undefined
ದೂರು ಕೊಟ್ಟ ತಾಯಿಯ ಫ್ರೆಂಡ್: ಡೈಲಿ ಮೇಲ್ ವರದಿಯನ್ವಯ ಅಲ್ಬರ್ಟೋ ತಾಯಿಯ ಫ್ರೆಂಡ್‌ ಒಬ್ಬರು ಅವರು ನಾಪತ್ತೆಯಾಗಿದ್ದಾರೆಂಬ ದೂರು ನೀಡಿದ್ದರು. ಹೀಗಿರುವಾಗ ಮಹಿಳೆಯನ್ನು ಹುಡುಕುತ್ತಾ ಪೊಲೀಸರು ಮನೆಗೆ ಬಂದಾಗ ಅಲ್ಲಿ ಅವರಿಗೆ ಮಹಿಳೆಯ ದೇಹದ ತುಂಡುಗಳು ಸಿಕ್ಕಿವೆ. ಪೊಲೀಸರು ತಲುಪಿದಾಗ ಆಲ್ಬರ್ಟೋ ತನ್ನ ನಾಯಿ ಜೊತೆ ಮಾಂಸ ತಿನ್ನುತ್ತಿದ್ದ ಎನ್ನಲಾಗಿದೆ.
undefined
ಹೀಗೆ ಮಾಡುವಂತೆ ಅದೃಶ್ಯ ಶಕ್ತಿ ಪ್ರೇರೇಪಿಸುತ್ತಿತ್ತು: 2019ರ ಫೆಬ್ರವರಿ 21ರಂದು ಅಲ್ಬರ್ಟೋನನ್ನು ಬಂಧಿಸಿ ಕೋರ್ಟ್‌ಹಗೆ ಹಾಜರುಪಡಿಸಲಾಯ್ತು. ಇಲ್ಲಿ ಆತ ತನಗೆ ಧ್ವನಿಯೊಂದು ಕೇಳಿಸುತ್ತಿತ್ತು. ಇದು ನನಗೆ ಹೀಗೆ ಮಾಡಲು ಹೇಳುತ್ತಿತ್ತು. ತಾನು ಯಾವಾಗ ತಾಯಿಯನ್ನು ಕೊಂದು ತುಂಡತರಿಸಿದೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾನೆ.
undefined
ಹದಿನೈದು ವರ್ಷ ಜೈಲು ಶಿಕ್ಷೆ: ಕೋರ್ಟ್‌ ಅಲ್ಬರ್ಟೋನನ್ನು ಹತ್ಯೆ ಹಾಗೂ ಶವದೊಂದಿಗೆ ಅಮಾನವೀಯ ವ್ಯವಹಾರ ನಡೆಸಿದ ದೋಷಿ ಎಂದು ತೀರ್ಪು ನೀಡಿದೆ. 2021ರ ಜೂನ್ 15 ರಂದು ಹದಿನೈದು ವರ್ಷನ ಐದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಬರ್ಟೋ ಹದಿನಬೈದು ವರ್ಷದವನಿದ್ದಾಗ ತಂದೆಯನ್ನು ಕಳೆದುಕೊಮಡಿದ್ದ. ಇದಾದ ಬಳಿಕ ಆತ ತನ್ನ ತಾಯಿ ಜೊತೆ ವಾಸಿಸುತ್ತಿದ್ದ.
undefined
click me!