ಒಂದಲ್ಲ, ಎರಡಲ್ಲ..., ಈ ಅವಳಿ ಮಕ್ಕಳ ನಡುವೆ ಹತ್ತು ವರ್ಷದ ಅಂತರ!

First Published Jun 20, 2020, 6:27 PM IST

ಈ ಸುದ್ದಿ ಓದಿದ್ರೆ ಹೀಗೂ ಆಗುತ್ತಾ ಎಂಬ ಅನುಮಾನ ಏಳುತ್ತದೆ. ನನೀವು ಅವಳ ಮಕ್ಕಳು ಹುಟ್ಟುವ ಬಗ್ಗೆ ಕೆಳಿರುತ್ತೀರಿ, ನೊಡಿರುತ್ತೀರಿ. ಹೆಚ್ಚೆಂದರೆ ಅವಳಿ ಮಕ್ಕಳ ನಡುವೆ ಮೂರರಿಂದ ಐದು ಸೆಕೆಂಡ್‌ಗಳ ಅಂತರವಿರುತ್ತದೆ. ಆದರೆ ಅವಳಿ ಮಕ್ಕಳ ನಡುವೆ ಬರೋಬ್ಬರಿ ಹತ್ತು ವರ್ಷದ ಅಂತರವಿದೆ ಎಂದರೆ ನಂಬುತ್ತೀರಾ? ಅಸಾಧ್ಯವೆಂದರೂ ಇದು ನಂಬಲೇಬೇಕಾದ ವಿಚಾರ. ಇಲ್ಲೊಬ್ಬ ತಾಯಿ ಹತ್ತು ವರ್ಷದ ಅಂತರದಲ್ಲಿ ಅವಳಿಯಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾಳೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ

ಚೀನಾದ ಓರ್ವ ಮಹಿಳೆ ವಾಂಗ್ ಮದುವೆ ಬಳಿಕ ಐದು ವರ್ಷದವರೆಗೆ ಗರ್ಭಿಣಿಯಾಗಲು ಯತ್ನಿಸಿದ್ದಾರೆ. ಆದರೆ ಗರ್ಭಧಾರಣೆ ಸಾಧ್ಯವಾಗಲಿಲ್ಲ.
undefined
ಹೀಗಾಗಿ ಮಗು ಪಡೆದುಕೊಳ್ಳಲು ವೈದ್ಯರು ಈ ದಂಪತಿಗೆ ಟೆಸ್ಟ್ ಟ್ಯೂಬ್ ಸಲಹೆ ನೀಡಿದ್ದಾರೆ. 2009ರಲ್ಲಿ ಅವರು ಟೆಸ್ಟ್ ಟ್ಯೂಬ್ ಮೂಲಕ ಗರ್ಭಧಾರಣೆ ಮಾಡಿದ್ದಾರೆ.
undefined
ವೈದ್ಯರು ಹೇಳುವ ಅನ್ವಯ ಅವರು ಒಂದೇ ವೀರ್ಯ ಹಾಗೂ ಮೊಟ್ಟೆಯನ್ನು ಉಪಯೋಗಿಸಿ ಭ್ರೂಣದ ಒಂದು ಬ್ಯಾಚ್ ತಯಾರಿಸಿದ್ದರು.
undefined
ಆದರೆ ವೈದ್ಯರು ಇದೇ ವೇಳೆ ಮತ್ತೊಂದು ಭ್ರೂಣದ ಬ್ಯಾಚ್‌ ಕೂಡಾ ಗರ್ಭದಲ್ಲಿರಿಸಿದರು.
undefined
ಈಗ ಹತ್ತು ವರ್ಷದ ಬಳಿಕ ಮಹಿಳೆ ಅದೇ ಭ್ರೂಣದಿಂದ ಎರಡನೇ ಮಗುವಿಗೆ ಜನ್ಮ ನೀಡಿದ್ದಾಳೆ.
undefined
ಈ ಎರಡನೇ ಮಗು ಜೂನ್ 16 ರಂದು ಹತ್ತು ವರ್ಷದ ಹಿಂದೆ ತನ್ನ ಅವಳಿ ಸಹೋದರ ಜನಿಸಿದ್ದ ಆಸ್ಪತ್ರೆಯಲ್ಲೇ ಜನ್ಮ ಪಡೆದಿದ್ದಾನೆ. ಇರಿಯ ಮಗುವಿನ ಹೆಸರು ಲೂಲೂ ಹಾಗೂ ಕಿರಿಯನ ಹೆಸರು ಟಾಂಗ್ ಟಾಂಗ್.
undefined
ಟಾಂಗ್‌ ಟಾಂಗ್‌ ಹುಟ್ಟುವಾಗ ಆತನ ತೂಕ ಮೂರು ಕೆಜಿ 48 ಗ್ರಾಂ. ಈ ಮಗು ಆರೋಗ್ಯಯುತವಾಗಿದೆ.
undefined
ವೈದ್ಯಕೀಯವಾಗಿ ಹೆಳುವುದಾದರೆ ಈ ಇಬ್ಬರೂ ಮಕ್ಕಳು ಅವಳಿಗಳು ಎಂದು ಡಾ. ಝೇಂಗ್ ತಿಳಿಸಿದ್ದಾರೆ.
undefined
click me!