ಶೇ. 85ರಷ್ಟು ಸುಟ್ಟೋದ್ರು ಈ ಮಾಡೆಲ್, ನ್ಯೂಡ್ ಫೋಟೋಶೂಟ್ ಮಾಡಿ ತೋರ್ಸಿದ್ರು ಸುಟ್ಟ ದೇಹ!

First Published Jun 16, 2020, 5:15 PM IST

ಸೌಂದರ್ಯ ಅನ್ನೋದು ನೋಡುಗರ ಕಣ್ಣಿನಲ್ಲಿರುತ್ತದೆ. ಹೀಗಾಗೇ ಕೆಲವೊಮ್ಮ ಸಾಮಾನ್ಯ ದೃಶ್ಯಗಳೂ ಕೆಲವರ ಕಣ್ಣಿಗೆ ಅತ್ಯಂತ ಸುಂದರವಾಗಿ ಕಾಣಿಸುತ್ತವೆ. ಇನ್ನು ವಿಶ್ವದಲ್ಲಿ ಹೆಣ್ಮಕ್ಕಳ ಮುಖದ ಅಂದವನ್ನು ಕೆಡಿಸಿ ತಮ್ಮ ಕೀಳು ಮನಸ್ಥಿತಿಯ ಸಾಕ್ಷಿ ನೀಡುವವರೂ ಅನೇಕ ಮಂದಿ ಇದ್ದಾರೆ. ಆದರೆ ಇಂತಹವರ ನಡುವೆ ಇಂತಹ ಮುಖದಲ್ಲಿ ಸೌಂದರ್ಯ ಕಾಣುವ ಕಣ್ಣುಗಳೂ ಇರುತ್ತವೆ. ಲಂಡನ್‌ನ ಫೋಟೋಗ್ರಾಫರ್ ಬ್ರಾಯನ್ ಇದನ್ನು ಸಾಬೀತುಪಡಿಸಿದ್ದು, ಇವರು ಮಾಜಿ ಬ್ಯೂಟಿ ಕ್ವೀನ್‌ನ ನ್ಯೂಡ್‌ ಫೋಟೋ ಕ್ಲಲಿಕ್ ಮಾಡಿ ವಿಶ್ವದೆದುರು ಇಟ್ಟಿದ್ದಾರೆ. ಒಂದು ಕಾಲದಲ್ಲಿ ಸೌಂದರ್ಯವತಿ ಎಂಬ ಕಿರೀಟ ಧರಿಸಿದ್ದ ಈ ಮಾಡಲ್ ಶೇ. 85ರಷ್ಟು ಸುಟಟ್ಟು ಹೋಗಿದ್ದಾರೆ. ಸದ್ಯ ಶೇ. 85ರಷ್ಟು ದೇಹ ಸುಟ್ಟ ಈ ಮಾಡೆಲ್‌ ಫೋಟೋ ಶೂಟ್ ನಡೆಸಿದ ಫೋಟೋಗ್ರಾಫರ್ ದೃಷ್ಟಿ ಹಾಗೂ ಮಾಡೆಲ್‌ ಧೈರ್ಯಕ್ಕೆ ಜನರು ಸಲಾಂ ಎಂದಿದ್ದಾರೆ.

53 ವರ್ಷದ ಕೈರೋಲ್ ಮೇಯರ್ ಆಸ್ಟ್ರೇಲಿಯಾ ನಿವಾಸಿ. ಇವರು ನಗ್ನ ಫೋಟೋಗಳನ್ನು ಲಂಡನ್‌ನ ಫೋಟೋಗ್ರಾಫರ್ ಬ್ರಾಯನ್ ಎಂಬವರು ಕ್ಲಿಕ್ಕಿಸಿದ್ದಾರೆ. ಈ ಫೋಟೋಗಳನ್ನು Portrait of Humanity 2020 ಅವಾರ್ಡ್‌ಗೆ ಆಯ್ಕೆ ಮಾಡಲಾಗಿದೆ.
undefined
ಈ ಪೋಟೋಗ್ರಾಪರ್ ಈ ಫೋಟೋಗಳನ್ನು ದ ಸ್ಕಿನ್ ಎಂಬ ತಲೆಬರಹದಡಿ ಫೋಟ್ರೇ ಮಾಡಿದ್ದಾರೆ. ಇದನ್ಉ ಈ ವರ್ಷದ ಸಪ್ಟೆಂಬರ್‌ನಲ್ಲಿ ಪ್ರದರ್ಶನ ಮಾಡಲಾಗುತ್ತದೆ.
undefined
ಕೈರೋಲ್ ಮೇಯರ್ 20 ವರ್ಷಗಳ ಹಿಂದೆ ಮನೆಗೆ ತಾಗಿದ ಬೆಂಕಿಯಲ್ಲಿ ಸುಟ್ಟುಕೊಂಡಿದ್ದರು. ಈ ದುರ್ಘಟನೆಯಲ್ಲಿ ಅವರ ದೇಹ ಶೇ. 85ರಷ್ಟು ಸುಟ್ಟುಕೊಂಡಿತ್ತು. ಜೊತೆಗೆ ವೈದ್ಯರು ಕೂಡಾ ಅವರು ಬದುಕುಳಿಯುವುದು ಕಷ್ಟ ಎಂದಿದ್ದರು.
undefined
ಕೈರೋಲ್ ಮೇಯರ್ 1983 ರಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದಿದ್ದರು. ಅವರು ತಮ್ಮ ಸೌಂದರ್ಯದ ಮೂಲಕ ಹಲವಾರು ಮಾಡೆಲ್‌ಗಳನ್ನು ಸೋಲಿಸಿದ್ದರು.
undefined
ಆದರೆ 2000 ಇಸವಿಯಲ್ಲಿ ಅಚಾನಕ್ಕಾಗಿ ಅವರ ಮನೆಗೆ ಬೆಂಕಿ ತಗುಲಿತ್ತು. ಈ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬ ಮಾಹಿತಿ ಈವರೆಗೆ ಲಭ್ಯವಾಗಿಲ್ಲ. ಆದರೆ ಈ ವೇಳೆ ಅವರು ಕೇವಲ ತನ್ನ ಮಗನನ್ನು ಕಾಪಾಡಲು ಯತ್ನಿಸಿದರು.
undefined
ಆದರೆ ತನ್ನ ಏಕೈಕ ಮಗ ಜಾಕ್‌ನನ್ನು ಕಾಪಾಡಿದ ತಾಯಿ ಕೈರೋಲ್ ಈ ದುರ್ಘಟನೆಯಲ್ಲಿ ಬಹುತೇಕ ಸುಟ್ಟು ಹೋಗಿದ್ದರು. ಅನೇಕ ತಿಂಗಳು ಇವರು ಕೋಮಾದಲ್ಲಿದ್ದರು.
undefined
ಇದಾದ ಬಳಿಕ ದೀರ್ಘ ಕಾಲ ಅವರು ಆಘಾತದಲ್ಲಿದ್ದರು. ಯಾವ ಮುಖವನ್ನು ನೋಡಿ ಜನರು ಅವರಿಗೆ ಫಿದಾ ಆಗಿದ್ದರೋ ಅದೇ ಮುಖವನ್ನು ಕಂಡು ಈಗ ಜನ ಹೆದರುತ್ತಿದ್ದರು.
undefined
ಇನ್ನು ಸುಟ್ಟ ತಮ್ಮ ದೇಹದ ಬಗ್ಗೆ ಪ್ರತಿಕ್ರಿಯಿಸಿರುವ ಕೈರೋಲ್ ದೇಹದ ಚರ್ಮ ಸುಡುವುದರಿಂದಾಗುವ ಬಹುದೊಡ್ಡ ಲಾಭ ಎಂದರೆ, ಇದಕ್ಕಿಂತ ಹೆಚ್ಚು ಕೆಟ್ಟದಾಗಲು ಸಾಧ್ಯವಿಲ್ಲ. ಬಳಿಕ ಒಳ್ಳೆಯದಾಗುತ್ತದೆ ಎಂದಿದ್ದಾರೆ.
undefined
ಇನ್ನು ಫೊಟೋಗ್ರಾಫರ್ ಬ್ರಾಯನ್ ಕೈರೋಲ್‌ರನ್ನು ಮೊದಲ ಬಾರಿ ಬೇಟಯಾದಾಗಲೇ ಅವರು ತಮ್ಮ ಕೂದಲನ್ನು ತೆಗೆದಿರಿಸಿ, ತಮ್ಮ ಅಸಲಿ ಮುಖವನ್ನು ತೋರಿಸಿದ್ದರು. ಕೂದಲಿಲ್ಲದೇ ತಾನು ನಗ್ನವಾಗಿದ್ದೇನೆಂಬ ಭಾವನೆ ನನಗೆ ಬರುತ್ತದೆ ಎಂಬುವುದು ಕೈರೋಲ್ ಮಾತಾಗಿದೆ.
undefined
ಬ್ರಾಯನ್‌ ಮೊಟ್ಟ ಮೊದಲು 2011 ರಲ್ಲಿ ಕೈರೋಲ್ ಫೋಟೋ ಸೆರೆ ಹಿಡಿದಿದ್ದರು. ಆ ವೇಳೆ ತಾನು ಒಳ ವಸ್ಸತ್ರ ಧರಿಸಬಹುದೇ ಎಂದು ಕೈರೋಲ್ ಪ್ರಶ್ನಿಸಿದ್ದರಂತೆ. ಈ ವೇಳೆ ಬ್ರಾಯನ್ ಸರಿ ಎಂದಿದ್ದಾರೆ. ಆದರೆ ಫೊಟೋ ಸೆರೆ ಹಿಡಿಯುವಾಗ ಅವರು ನಗ್ನರಾಗಿರುವಂತೆ ಕಂಡು ಬಂದಿದ್ದಾರೆ.
undefined
ಈ ದುರ್ಘಾಟನೆ ಬಳಿಕ ಕೈರೋಲ್‌ಗೆ ವಾಸ್ತವತೆ ಒಪ್ಪಿಕೊಳ್ಳಲು ಬಹಳ ಸಮಯ ಹಿಡಿದಿತ್ತಂತೆ. ಅವರು ತಮ್ಮ ಫೋಟೋಗಳ ಮೂಲಕ ತನ್ನ ದೇಹವನ್ನು ಮತ್ತೆ ಪ್ರೀತಿಸಲು ಆರಂಭಿಸಿದ್ದರು.
undefined
ಈ ಫೋಟೋಗಳನ್ನು ಜನರು ಬಹಳ ಇಷ್ಟಪಡುತ್ತಿದ್ದಾರೆ. ಅತ್ತ ಕೈರೋಲ್ ಈ ಕ್ಷಣಗಳು ತನ್ನ ಜೀವನದ ಬಹಳ ಕಷ್ಟದ ಕ್ಷಣಗಳೆಂದು ತಿಳಿಸಿದ್ದಾರೆ.
undefined
ಇಂತಹ ಘಟನೆಗಳು ಆತ್ಮ ವಿಶ್ವಾಸವನ್ನೇ ಕುಗ್ಗಿಸುತ್ತವೆ. ಹೊರಗಿನಿಂದ ಮಾತ್ರವಲ್ಲ, ಒಳಗೆಯೂ ಇದು ನಿಮ್ಮನ್ನು ಬಹಳ ದರ್ಘವಾಗಿ ಕಾಡಲಾರಂಭಿಸುತ್ತವೆ. ಆದರೆ ಈ ದುರ್ಘಟನೆ ನನ್ನನ್ನು ಮತ್ತಷ್ಟು ಬಲಶಾಲಿಯಾಗಿಸಿದೆ ಎಂಬುವುದು ಕೈರೋಲ್ ಮಾತು.
undefined
ಈಗ ಕೈರೋಲ್ ಈ ಆಘಾತವನ್ನು ಮೆಟ್ಟಿ ನಿಂತು ಆತ್ಮವಿಶ್ವಾಸದಿಂದಿದ್ದಾರೆ.
undefined
ಫೋಟೋಶೂಟ್‌ ಮೂಲಕ ಅವರಿಗೆ ತಮ್ಮ ದೇಹದ ಬಗ್ಗೆ ಎಷ್ಟು ಹಿಂಜರಿಕೆ ಇತ್ತೋ ಅವೆಲ್ಲವನ್ನೂ ಮೆಟ್ಟಿ ನಿಂತಿದ್ದಾರೆ. ಅಲ್ಲದೇ ಜನರೆದುರು ಹೊರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.
undefined
click me!